ನವದೆಹಲಿ: Latest News On Corona Vaccination - ದೇಶಾದ್ಯಂತ ಹೆಚ್ಚಾಗುತ್ತಿರುವ ಕೊರೊನಾ ವೈರಸ್ ಪ್ರಕರಣಗಳ ನಡುವೆಯೇ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಹೌದು ಭಾರತ ಸರ್ಕಾರ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮೇ 1 ರಿಂದ ಕೊರೊನಾ ಲಸಿಕೆ (Corona Vaccine) ಹಾಕಲು ಅನುಮತಿ ನೀಡಿದೆ. ಸೋಮವಾರ ಸಂಜೆ ಆರೋಗ್ಯ ಅಧಿಕಾರಿಗಳ ಜೊತೆಗೆ ಆನ್ಲೈನ್ ಸಭೆ ನಡೆಸಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಈ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ(PM Narendra Modi), 'ದೇಶಾದ್ಯಂತ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜನರಿಗೆ ಲಸಿಕೆ ಹಾಕಲು ಕೇಂದ್ರ ಸರ್ಕಾರ ಕಳೆದ ಒಂದು ವರ್ಷದಿಂದ ಪ್ರಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ವ್ಯಾಕ್ಸಿನೆಶನ್ ಅಭಿಯಾನವನ್ನು (Corona Vaccination) ಮತ್ತಷ್ಟು ಚುರುಕುಗೊಳಿಸಲು ನಾವು ನಿರ್ಧರಿಸಿದ್ದೇವೆ. ಬರುವ ಮೇ 1 ರಿಂದ ಕೊರೊನಾ (Covid-19) ವ್ಯಾಕ್ಸಿನೆಶನ್ ನ ಮೂರನೆ ಹಂತವನ್ನು ಆರಂಭಿಸಲಾಗುತ್ತಿದ್ದು, ಇದರಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆಲ್ಲರಿಗೂ ಕೊರೊನಾ ಲಸಿಕೆ ನೀಡಲಾಗುವುದು' ಎಂದಿದ್ದಾರೆ.
ಇದನ್ನೂ ಓದಿ- Coronavirus Airborne - ಗಾಳಿಯ ಮೂಲಕ ಹರಡುತ್ತಿದೆ ಕೊರೊನಾ, ಮೊಟ್ಟಮೊದಲ ಬಾರಿಗೆ ಇದನ್ನು ಒಪ್ಪಿಕೊಂಡ ಸರ್ಕಾರ
ಇದುವರೆಗೆ ನಡೆಸಲಾಗಿರುವ ಲಸಿಕಾಕರಣ ಅಭಿಯಾನದಲ್ಲಿ 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತಿದೆ ಎಂಬುದು ಇಲ್ಲಿ ಗಮನಾರ್ಹ. ಆದರೆ, ದೆಹಲಿ , ಪಂಜಾಬ್ ಹಾಗೂ ಮಹಾರಾಷ್ಟ್ರಗಳಂತಹ ರಾಜ್ಯಗಳ ಮುಖ್ಯಮಂತ್ರಿಗಳ ವತಿಯಿಂದ ಯುವಕರಿಗೆ ಲಸಿಕೆ ನೀಡಲು ಬೇಡಿಕೆ ಹೆಚ್ಚಾದ ಕಾರಣ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.
ಇದನ್ನೂ ಓದಿ- PM Narendra Modi: ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ ತಜ್ಞ ವೈದ್ಯರು & ಫಾರ್ಮಾ ಕಂಪನಿಗಳ ಜೊತೆ ಪ್ರಧಾನಿ ಮೋದಿ ಸಭೆ !
ಮಾರುಕಟ್ಟೆಯಲ್ಲಿಯೂ ಕೂಡ ಲಭಿಸಲಿದೆ ಲಸಿಕೆ
ಸಭೆಯಲ್ಲಿ ಈ ಕುರಿತು ಕೈಗೊಳ್ಳಲಾಗಿರುವ ನಿರ್ಣಯದ ಪ್ರಕಾರ ವ್ಯಾಕ್ಸಿನ್ ತಯಾರಕ ಕಂಪನಿಗಳು ತಮ್ಮ ಒಟ್ಟು ಉತ್ಪಾದನೆಯ ಶೇ.50 ರಷ್ಟು ಲಸಿಕೆಗಳನ್ನು ರಾಜ್ಯಸರ್ಕಾರಗಳಿಗೆ ನೀಡಲಿವೆ. ಉಳಿದ ಶೇ.50 ರಷ್ಟು ಲಸಿಕೆಗಳನ್ನು ಈ ಮೊದಲೇ ನಿರ್ಧರಿಸಲಾಗಿರುವ ಬೆಲೆಗೆ ಕಂಪನಿಗಳು ಮಾರುಕಟ್ಟೆಯಲ್ಲಿ ಮಾರಾಟ ನಡೆಸಬಹುದಾಗಿದೆ. ಅಷ್ಟೇ ಅಲ್ಲ ವಿವಿಧ ರಾಜ್ಯಗಳ ಸರ್ಕಾರಗಳು ತಮ್ಮ ಅಗತ್ಯತೆಗೆ ಅನುಗುಣವಾಗಿ ನೇರವಾಗಿ ವ್ಯಾಕ್ಸಿನ್ ತಯಾರಕ ಕಂಪನಿಗಳಿಂದ ಲಸಿಕೆ ಕೂಡ ಇನ್ಮುಂದೆ ಪಡೆಯಬಹುದಾಗಿದೆ.
ಇದನ್ನೂ ಓದಿ-ಒಂದು ವಾರಗಳ ಸಂಪೂರ್ಣ ಲಾಕ್ ಡೌನ್ ಫೋಷಿಸಿದ ದೆಹಲಿ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.