Coronavirus Airborne - ಗಾಳಿಯ ಮೂಲಕ ಹರಡುತ್ತಿದೆ ಕೊರೊನಾ, ಮೊಟ್ಟಮೊದಲ ಬಾರಿಗೆ ಇದನ್ನು ಒಪ್ಪಿಕೊಂಡ ಸರ್ಕಾರ

Coronavirus Airborne - ಕೊರೊನಾ ವೈರಸ್ ನ ಹೊಸ ರೂಪಾಂತರಿ ಗಾಳಿಯ ಮೂಲಕ ಹರಡುತ್ತಿದೆ ಎಂದು ಇದೆ ಮೊದಲ ಬಾರಿಗೆ ಭಾರತ ಸರ್ಕಾರ ಒಪ್ಪಿಕೊಂಡಿದೆ. ಇತ್ತೀಚೆಗಷ್ಟೇ 'ಜರ್ನಲ್ ದಿ ಲ್ಯಾನ್ಸೆಟ್' ಕೂಡ ಇದೆ ರೀತಿಯ ವರದಿಯೊಂದನ್ನು ಇತ್ತೀಚಿಗೆ ನೀಡಿದೆ.

Written by - Nitin Tabib | Last Updated : Apr 19, 2021, 05:41 PM IST
  • ಕೊರೊನಾ ವೈರಸ್ ನ ಹೊಸ ರೂಪಾಂತರಿ ಗಾಳಿಯ ಮೂಲಕ ಹರಡುತ್ತಿದೆ.
  • ಮೊದಲ ಬಾರಿಗೆ ಈ ನಿಷ್ಕರ್ಷವನ್ನು ಒಪ್ಪಿಕೊಂಡ ಕೇಂದ್ರ ಸರ್ಕಾರ.
  • ಇತ್ತೀಚೆಗಷ್ಟೇ ಲ್ಯಾನ್ಸೆಟ್ ಕೂಡ ತನ್ನ ವರದಿಯಲ್ಲಿ ಈ ಅಂಶವನ್ನು ಬಹಿರಂಗಪಡಿಸಿದೆ.
Coronavirus Airborne - ಗಾಳಿಯ ಮೂಲಕ ಹರಡುತ್ತಿದೆ ಕೊರೊನಾ, ಮೊಟ್ಟಮೊದಲ ಬಾರಿಗೆ ಇದನ್ನು ಒಪ್ಪಿಕೊಂಡ ಸರ್ಕಾರ title=
Coronavirus Airborne (File Photo)

ನವದೆಹಲಿ: Coronavirus Airborne - ವೈರಸ್ ನ ಹೊಸ ರೂಪಾಂತರಿ (Coronavirus New Strain) ಗಾಳಿಯ ಮೂಲಕ ಹರಡುತ್ತಿದೆ ಎಂದು ಇದೆ ಮೊದಲ ಬಾರಿಗೆ ಭಾರತ ಸರ್ಕಾರ (Central Government) ಒಪ್ಪಿಕೊಂಡಿದೆ. ಸೋಮವಾರ ಹೀ ಕುರಿತು ಹೇಳಿಕೆ ನೀಡಿರುವ ನೀತಿ ಆಯೋಗದ ಆರೋಗ್ಯ ಸದಸ್ಯ ಡಾ. ವಿ.ಕೆ ಪಾಲ್, 'ಕೊರೊನಾ ವೈರಸ್ (Coronavirus) ನ ಎರಡನೇ ಅಲೆಯ ಕೆಲ ನಿಷ್ಕರ್ಷಗಳು ಹೊರಬಂದಿವೆ. ಈ ಬಾರಿ ವೆಂಟಿಲೇಟರ್ ಗಳ ಅವಶ್ಯಕತೆ ಹೆಚ್ಚು ಬೀಳುತ್ತಿಲ್ಲ, ಸಾವಿನ ದರ ಕೂಡ ಕಡಿಮೆ ಇದೆ. ಆಕ್ಸಿಜನ್ ಬೇಡಿಕೆ ಹೆಚ್ಚಾಗಿದೆ. ಗಾಳಿಯ ಮೂಲಕ ಕೊರೊನಾ ಹರಡುತ್ತಿದೆ (Corona Spread Through Air)' ಎಂದು ಹೇಳಿದ್ದಾರೆ. 

25 ರಿಂದ 30 ವರ್ಷದೊಳಗಿನವರು ಹೆಚ್ಚು ಸೋಂಕಿತರಾಗುತ್ತಿದ್ದಾರೆ
ಈ ಕುರಿತಾತ ಅಂಕಿ-ಅಂಶಗಳ ಕುರಿತು ಮಾತನಾಡಿರುವ ಅವರು, 'ಕೊರೊನಾ ಮೊದಲನೆಯ ಅಲೆಯ ವೇಳೆ 30 ಕ್ಕಿಂತ ಕಡಿಮೆ ವಯಸ್ಸಿನ ಶೇ.31 ರಷ್ಟು ಜನರು ಕೊರೊನಾ ಸೋಂಕಿತರಾಗಿದ್ದರು. ಎರಡನೆಯ ಅಲೆವ ವೇಳೆಯೂ ಕೂಡ ಇದು ಶೇ.32ರಷ್ಟಿದೆ. 30 ರಿಂದ 45 ವರ್ಷದೊಳಗಿನವರ ಪಾಸಿಟಿವಿಟಿ ದರ ಕೂಡ ಕಳೆದ ವರ್ಷದ ರೀತಿಯೇ ಶೇ.21ರಷ್ಟಿದೆ. ಇನ್ನೊಂದೆಡೆ ಯುವಕರ ಪಾಸಿಟಿವಿಟಿ ದರದಲ್ಲಿಯೂ ಕೂಡ ಯಾವುದೇ ರೀತಿಯ ಏರಿಕೆ ಕಂಡುಬಂದಿಲ್ಲ' ಎಂದಿದ್ದಾರೆ. 

ಇದನ್ನೂ ಓದಿ- PM Narendra Modi: ಕೋವಿಡ್ ಪ್ರಕರಣ ಹೆಚ್ಚಳ ಹಿನ್ನೆಲೆ ತಜ್ಞ ವೈದ್ಯರು & ಫಾರ್ಮಾ ಕಂಪನಿಗಳ ಜೊತೆ ಪ್ರಧಾನಿ ಮೋದಿ ಸಭೆ !

ಖ್ಯಾತ ಜಾಗತಿಕ ಜರ್ನಲ್ ಲ್ಯಾನ್ಸೆಟ್ ಕೂಡ ಈ ವರದಿ ನೀಡಿದೆ
ಇತ್ತೀಚೆಗಷ್ಟೇ ಈ ಕುರಿತಾದ ಅಧ್ಯಯನವೊಂದನ್ನು ಪ್ರಕಟಿಸಿದ ದಿ ಲ್ಯಾನ್ಸೆಟ್ ಕೂಡ 'ಗಾಳಿಯ ಮೂಲಕ ಕೊರೊನಾ ವೈರಸ್ ಹೆಚ್ಚು ಹರಡುತ್ತಿದೆ ಮತ್ತು ನಾವು ನಮ್ಮ ಸುರಕ್ಷತೆಯ ಮಾನದಂಡಗಳಲ್ಲಿ ತಕ್ಷಣ ಬದಲಾವಣೆ ಮಾಡಿಕೊಳ್ಳಬೇಕು' ಎಂದಿತ್ತು. ಇಂಗ್ಲೆಂಡ್, ಅಮೇರಿಕಾ ಹಾಗೂ ಕೆನಡಾ ಮೂಲದ ಒಟ್ಟು ಆರು ಜನ ತಜ್ಞರು ಸಿದ್ಧಪಡಿಸಿದ್ದಾರೆ. ವರದಿಯಲ್ಲಿ ಅವರು ಗಾಳಿಯ ಮೂಲಕ ವೈರಸ್ ಹರದುತ್ತಿರುವುದರ ಸಾಕ್ಷ್ಯಗಳು ತುಂಬಾ ಬಲವಾಗಿವೆ ಮತ್ತು ದೊಡ್ಡ ಹನಿಗಳ ಹರಡುವಿಕೆಯ ಬೆಂಬಲಕ್ಕೆ ಸಾಕ್ಷ್ಯಗಳು ಇಲ್ಲಕ್ಕೆ ಸಮನಾಗಿವೆ ಎಂದಿತ್ತು.

ಇದನ್ನೂ ಓದಿ- Delhi Lockdown: ಮದ್ಯ ಖರೀದಿಗೆ ಮುಗಿಬಿದ್ದ ಜನ, ಔಷಧಿ ಅಲ್ಲ ಪೆಗ್ ಕೆಲಸಕ್ಕೆ ಬರುತ್ತೆ ಎಂದ ಮಹಿಳೆ

ಇದಕ್ಕೆ ಒದಗಿಸಲಾಗಿರುವ ಸಾಕ್ಷ್ಯಗಳನ್ನು ಗಮನದಲ್ಲಿಟ್ಟುಕೊಂಡು WHO ನಿರ್ಣಯ ಕೈಗೊಳ್ಳಬೇಕಿದೆ
ವರದಿಯ ಪ್ರಕಾರ WHO ಸೇರಿದಂತೆ ಜನರ ಆರೋಗ್ಯಕ್ಕಾಗಿ ಕಾರ್ಯ ನಿರ್ವಹಿಸುವ ಎಲ್ಲ ಏಜೆನ್ಸಿಗಳು ಈ ವೈಜ್ಞಾನಿಕ ತಥ್ಯಗಳನ್ನು ಒಪ್ಪಿಕೊಳ್ಳಬೇಕು ಮತ್ತು ಗಾಳಿಯ ಮೂಲಕ ಹರಡುತ್ತಿರುವ ಸೋಂಕನ್ನು ತಡೆಗಟ್ಟಲು ಕ್ರಮಕೈಗೊಳ್ಳಬೇಕು. ವರದಿಯ ಪ್ರಕಾರ  SARS-CoV-2 ನ ಹರಡುವಿಕೆ ಔಟ್ ಡೋರ್ ಹೋಲಿಕೆಯಲ್ಲಿ ಇಂಡೋರ್ ನಲ್ಲಿ ಹೆಚ್ಚಾಗಿರುತ್ತದೆ ಮತ್ತು ಇಂಡೋರ್ ವೆಂಟಿಲೆಶನ್ ನಿಂದ ಸೋಂಕು ತುಂಬಾ ಕಡಿಮೆಯಾಗುತ್ತದೆ.

ಇದನ್ನೂ ಓದಿ- ಒಂದು ವಾರಗಳ ಸಂಪೂರ್ಣ ಲಾಕ್ ಡೌನ್ ಫೋಷಿಸಿದ ದೆಹಲಿ ಸರ್ಕಾರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News