Chandrayaan-3 Moon Landing Live Update: ಚಂದ್ರಯಾನ-3 ಯಶಸ್ವಿ: ಇದು ನವ ಭಾರತದ ಉದಯ ಎಂದ ಪ್ರಧಾನಿ ಮೋದಿ

Chandrayaan-3 Moon Landing Live Update: ಚಂದ್ರಯಾನ 3 ಯಶಸ್ವಿಯಾಗಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈ ಮೂಲಕ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ.

Written by - Bhavishya Shetty | Last Updated : Aug 23, 2023, 06:39 PM IST
  • Chandrayaan-3 LIVE: ​ಚಂದ್ರಯಾನ-3 ಯಶಸ್ವಿಯಾಗಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ  ಯಶಸ್ವಿಯಾಗಿ ಇಳಿದಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.
Chandrayaan-3 Moon Landing Live Update: ಚಂದ್ರಯಾನ-3 ಯಶಸ್ವಿ: ಇದು ನವ ಭಾರತದ ಉದಯ ಎಂದ ಪ್ರಧಾನಿ ಮೋದಿ
Live Blog

Chandrayaan-3 Moon Landing Live Update: ಚಂದ್ರಯಾನ 3 ಯಶಸ್ವಿಯಾಗಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈ ಮೂಲಕ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿದ ಕೂಡಲೇ ಭಾರತ ಐತಿಹಾಸಿಕ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಸುಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಖುಷಿ ವ್ಯಕ್ತಪಡಿಸಿದ್ದಾರೆ. ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ್ ಮತ್ತು ಹಿರಿಯ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಭಾರತಕ್ಕೆ ಇದೊಂದು ಐತಿಹಾಸಿಕ ಕ್ಷಣ. ಈಗ ಭಾರತ ಚಂದ್ರನ ಮೇಲಿದೆ. ಇಸ್ರೋ ವಿಜ್ಞಾನಿಗಳು ಇತಿಹಾಸ ಸೃಷ್ಟಿಸಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ’ ಎಂದು ಹೇಳಿದ್ದಾರೆ.

23 August, 2023

  • 18:38 PM

    ಇದು ನವ ಭಾರತದ ಉದಯ: ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಮಹತ್ವದ ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದೆ. ಚಂದ್ರಯಾನ-3ರ ಯಶಸ್ಸಿಗೆ ಖುಷಿ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ ಇದು ನವ ಭಾರತದ ಉದಯವೆಂದು ಹೇಳಿದ್ದಾರೆ.

     

  • 18:32 PM

    ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ: ‘ಚಂದ್ರಯಾನ 3 ಯಶಸ್ವಿಯಾಗಿದೆ. ಚಂದ್ರಮ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ‘ಈ ಐತಿಹಾಸಿಕ ಸಾಧನೆಯಿಂದ ಭಾರತದ ವಿಶ್ವಾಸ ಮತ್ತಷ್ಟು ಹೆಚ್ಚಾಗಿದೆ. ಬಹುದೂರದಲ್ಲಿರುವ ಚಂದ್ರನ ತಲುಪುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ಇದರ ಯಶಸ್ಸು ಪ್ರತಿಯೊಬ್ಬ ಭಾರತೀಯನಿಗೂ ಸಲ್ಲುತ್ತದೆ. ಚಂದ್ರಯಾನ-3 ಯಶಸ್ಸಿಗೆ ಶ್ರಮಿಸಿದ ಪ್ರತಿಯೊಬ್ಬ ವಿಜ್ಞಾನಿಗೂ ಧನ್ಯವಾದಗಳು. ಭಾರತದ ಯಶಸ್ಸಿನಿಂದ ಉಳಿದ ದೇಶಗಳಿಗೂ ಸಹಕಾರಿಯಾಗಿದೆ. ಚಂದ್ರನ ಬಗ್ಗೆ ಅಧ್ಯಯನ ನಡೆಸಲು ಅನುಕೂಲವಾಗುತ್ತದೆ. ಮುಂದಿನ ದಿನಗಳಲ್ಲಿ ಚಂದ್ರನ ಬಗ್ಗೆ ಸಂಶೋಧನೆ ನಡೆಸಲು ಇದು ನಮಗೆ ನೆರವಾಗಲಿದೆ’ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

  • 18:23 PM

    ಚಂದ್ರಯಾನ-3 ಯಶಸ್ವಿಯಾಗಿದೆ: ಚಂದ್ರಯಾನ-3 ಯಶಸ್ವಿಯಾಗಿದೆ. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ  ಯಶಸ್ವಿಯಾಗಿ ಇಳಿದಿದೆ ಎಂದು ಇಸ್ರೋ ಟ್ವೀಟ್ ಮಾಡಿದೆ.

  • 18:21 PM

    ಐತಿಹಾಸಿಕ ಕ್ಷಣವೆಂದ ಪ್ರಧಾನಿ ಮೋದಿ: ಚಂದ್ರಯಾನ 3 ಯಶಸ್ವಿಯಾಗಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಈ ಮೂಲಕ ಕೋಟ್ಯಂತರ ಭಾರತೀಯರ ಪ್ರಾರ್ಥನೆ ಫಲಿಸಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಇಳಿದ ಕೂಡಲೇ ಭಾರತ ಐತಿಹಾಸಿಕ ಸಾಧನೆ ಮಾಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೇ ಸುಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಖುಷಿ ವ್ಯಕ್ತಪಡಿಸಿದ್ದಾರೆ. ಇಸ್ರೋದ ಅಧ್ಯಕ್ಷ ಎಸ್. ಸೋಮನಾಥ್ ಮತ್ತು ಹಿರಿಯ ವಿಜ್ಞಾನಿಗಳಿಗೆ ಪ್ರಧಾನಿ ಮೋದಿ ಧನ್ಯವಾದ ತಿಳಿಸಿದ್ದಾರೆ. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಭಾರತಕ್ಕೆ ಇದೊಂದು ಐತಿಹಾಸಿಕ ಕ್ಷಣ. ಈಗ ಭಾರತ ಚಂದ್ರನ ಮೇಲಿದೆ. ಇಸ್ರೋ ವಿಜ್ಞಾನಿಗಳು ಇತಿಹಾಸ ಸೃಷ್ಟಿಸಿದ್ದಾರೆ. ಐತಿಹಾಸಿಕ ಕ್ಷಣಕ್ಕೆ ನಾವೆಲ್ಲರೂ ಸಾಕ್ಷಿಯಾಗಿದ್ದೇವೆ’ ಎಂದು ಹೇಳಿದ್ದಾರೆ.

  • 18:13 PM

    ವಿಜ್ಞಾನಿಗಳ ಮೊಗದಲ್ಲಿ ‘ಚಂದ್ರ’ನ ಮಂದಹಾಸ: ಚಂದ್ರಯಾನ 3 ಯಶಸ್ವಿಯಾಗಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಲ್ಯಾಂಡ್ ಆಗಿದೆ. ಸಾಫ್ಟ್ ಲ್ಯಾಡಿಂಗ್ ಯಶಸ್ವಿ ಹಿನ್ನಲೆ ಹಿರಿಯ ವಿಜ್ಞಾನಿಗಳು ಸಂತೋಷದಿಂದ ನಗೆ ಬೀರಿದ್ದಾರೆ. ಬೆಂಗಳೂರಿನ ಪೀಣ್ಯ ನಿಯಂತ್ರಣ ಕೇಂದ್ರದಲ್ಲಿ ಇಸ್ರೋ ಅಧ್ಯಕ್ಷ ಸೋಮನಾಥ್ ಸೇರಿದಂತೆ ಮಾಜಿ ಅಧ್ಯಕ್ಷರು ಹರ್ಷ ವ್ಯಕ್ತಪಡಿಸಿದ್ದಾರೆ. ವಿಶ್ವದಲ್ಲೇ 4ನೇ ಯಶಸ್ವಿ ಚಂದ್ರಯಾನ ಉಡಾವನೆ. ಸಾಫ್ಟ್ ಲ್ಯಾಡಿಂಗ್‍ನಲ್ಲಿ 4ನೇ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ. ಅಮೇರಿಕ, ಸೋವಿಯಟ್ ಒಕ್ಕೂಟ, ಚೈನಾ ನಂತರ ಭಾರತವು ಚಂದ್ರನ ನೆಲವನ್ನು ಸ್ಪರ್ಶಿಸಿದೆ. ಈ ಮೂಲಕ ನಾವು ಯಾರಿಗೂ ಕಮ್ಮಿ ಇಲ್ಲವೆಂದು ಭಾರತ ಎದೆತಟ್ಟಿಕೊಂಡು ಹೇಳಿಕೊಂಡಂತಾಗಿದೆ.

  • 18:08 PM

    ಚಂದ್ರನ ಅಂಗಳ ತಲುಪಿದ ವಿಕ್ರಮ್ ಲ್ಯಾಂಡರ್: ಚಂದ್ರಯಾನ-3 ಯಶಸ್ವಿಯಾಗಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ. ಇದು ಭಾರತಕ್ಕೆ ಐತಿಹಾಸಿಕ ಕ್ಷಣವಾಗಿದೆ. ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಬಹುದೊಡ್ಡ ಸಾಧನೆ ಮಾಡಿದೆ. ಕೋಟ್ಯಂತರ ಭಾರತೀಯ ಪಾರ್ಥನೆ ಫಲಿಸಿದೆ. ಭಾರತದ ಸಾಧನೆಗೆ ವಿಶ್ವದ ಅನೇಕ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

     

     

  • 17:58 PM

    17.8 ಕಿಮೀ ಎತ್ತರದಲ್ಲಿದೆ: ಇನ್ನೇನು ಕೆಲಹೊತ್ತಿನಲ್ಲೇ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ. ಈ ಐತಿಹಾಸಿಕ ಕ್ಷಣವನ್ನು ಕೋಟ್ಯಂತರ ಭಾರತೀಯರು ಕಣ್ತುಂಬಿಕೊಳ್ಳುತ್ತಿದ್ದಾರೆ. ಚಂದ್ರಯಾನ-3 ಲ್ಯಾಂಡರ್ ಮಾಡ್ಯೂಲ್ ಚಂದ್ರನ ಮೇಲ್ಮೈಯಿಂದ 17.8 ಕಿಮೀ ಎತ್ತರದಲ್ಲಿದೆ ಎಂದು ಇಸ್ರೋ ಹೇಳಿದೆ.

  • 17:54 PM

    ಐತಿಹಾಸಿಕ ಕ್ಷಣವನ್ನು ಕಣ್ತುಂಬಿಕೊಳ್ಳಿರಿ: ಇನ್ನೇನು ಕೆಲಹೊತ್ತಿನಲ್ಲೇ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ. ಈ ಐತಿಹಾಸಿಕ ಸುಂದರ ಕ್ಷಣವನ್ನು ಕೋಟ್ಯಂತರ ಭಾರತೀಯರುವೀಕ್ಷಿಸುತ್ತಿದ್ದಾರೆ. ಚಂದ್ರಯಾನ 3ರ ಸಾಪ್ಟ್ ಲ್ಯಾಂಡಿಂಗ್ ಆರಂಭವಾಗಿದ್ದು, ಒಟ್ಟು 15 ರಿಂದ 19 ನಿಮಿಷಗಳ ಪ್ರಕ್ರಿಯೆ ನಡೆಯಲಿದೆ. ಚಂದ್ರಯಾನ 3ರ ಲ್ಯಾಂಡಿಂಗ್​ ಪ್ರಕ್ರಿಯೆಯ ಈ ಐತಿಹಾಸಿಕ ಕ್ಷಣವನ್ನು ನೀವು Zee Kannada News ಡಿಜಿಟಲ್​ನಲ್ಲಿ ವೀಕ್ಷಿಸಬಹುದು.

  • 17:52 PM

    ನೇರ ಪ್ರಸಾರ ವೀಕ್ಷಿಸುತ್ತಿರುವ ಶರದ್ ಪವಾರ್: ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಸುಪ್ರಿಯಾ ಸುಳೆ ಮುಂಬೈನ ನೆಹರು ತಾರಾಲಯದಲ್ಲಿ ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮದ ನೇರ ಪ್ರಸಾರವನ್ನು ವೀಕ್ಷಿಸುತ್ತಿದ್ದಾರೆ.  

     

  • 17:50 PM

    ಲ್ಯಾಂಡಿಂಗ್​ ಪ್ರಕ್ರಿಯೆ ಆರಂಭ: ಕೆಲಹೊತ್ತಿನಲ್ಲೇ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಲ್ಯಾಂಡಿಂಗ್​ ಪ್ರಕ್ರಿಯೆ ಆರಂಭವಾಗಿದೆ ಎಂದು ಇಸ್ರೋ ಹೇಳಿದೆ.

  • 17:25 PM

    ವರ್ಚುವಲ್ ಮೂಲಕ ಪ್ರಧಾನಿ ಮೋದಿ ವೀಕ್ಷಣೆ: ಕೆಲಹೊತ್ತಿನಲ್ಲೇ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ಈ ಐತಿಹಾಸಿಕ ಕ್ಷಣವನ್ನು  ವರ್ಚುವಲ್ ಮೂಲಕ ವೀಕ್ಷಣೆ ಮಾಡಲಿದ್ದಾರೆ. ಚಂದ್ರಯಾನ 3ರ ಯಶಸ್ಸಿಗೆ ಶುಭ ಹಾರೈಸಿರುವ ಪ್ರಧಾನಿ ಮೋದಿಯವರು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗಲಿ ಎಂದು ಪ್ರಾರ್ಥಿಸಿದ್ದಾರೆ.

  • 17:23 PM

    ಐತಿಹಾಸಿಕ ಕ್ಷಣಕ್ಕೆ ಕ್ಷಣಗಣನೆ: ಇನ್ನೇನು ಕೆಲಹೊತ್ತಿನಲ್ಲೇ ಚಂದ್ರನ ಅಂಗಳಕ್ಕೆ ವಿಕ್ರಮ್ ಲ್ಯಾಂಡರ್ ಇಳಿಯಲಿದೆ. ಈ ಐತಿಹಾಸಿಕ ಸುಂದರ ಕ್ಷಣವನ್ನು ಕೋಟ್ಯಂತರ ಭಾರತೀಯರುವೀಕ್ಷಿಸುತ್ತಿದ್ದಾರೆ. ಚಂದ್ರಯಾನ-3 ಯಶಸ್ವಿಯಾಗಲಿ ಎಂದು ಭಾರತೀಯರು ವಿಶೇಷ ಪಾರ್ಥನೆ ಸಲ್ಲಿಸುತ್ತಿದ್ದಾರೆ. ಈಗಾಗಲೇ ಇಸ್ರೋದಿಂದ ಲೈವ್ ಟೆಲಿಕಾಸ್ಟ್ ಪ್ರಾರಂಭವಾಗಿದೆ. ಸರಿಯಾಗಿ 6.04ಕ್ಕೆ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಲ್ಯಾಂಡಲ್ ಆಗಲಿದೆ.  

     

  • 17:15 PM

    ಯುಟ್ಯೂಬ್ ನಲ್ಲಿ ಲೈವ್ ವೀಕ್ಷಿಸಿರಿ: ಇಡೀ ದೇಶದ ಗಮನವೇ ಇದೀಗ ಚಂದ್ರಯಾನ-3ರ ಮೇಲಿದೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗಲಿ ಎಂದು ಭಾರತೀಯರು ವಿಶೇಷ ಪಾರ್ಥನೆ ಸಲ್ಲಿಸುತ್ತಿದ್ದಾರೆ. ಇನ್ನೆನ್ನು ಕೆಲವೇ ನಿಮಷಗಳಲ್ಲಿ ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಲ್ಯಾಂಡ್ ಆಗಲಿದೆ. ಈ ಸುಂದರ ಮತ್ತು ಐತಿಹಾಸಿಕ ಕ್ಷಣ ತುಂಬಿಕೊಳ್ಳಲು ಭಾರತೀಯರು ಕಾತುರದಿಂದ ಕಾಯುತ್ತಿದ್ದಾರೆ. ಇಸ್ಟೋ ತನ್ನ ಯುಟ್ಯೂಬ್ ಚಾನೆಲ್ ISRO Officialನಲ್ಲಿ ಚಂದ್ರಯಾನ-3 ಮಿಷನ್ ಸಾಫ್ಟ್-ಲ್ಯಾಂಡಿಂಗ್ ಲೈವ್ ಟೆಲಿಕಾಸ್ಟ್ ಮಾಡುತ್ತಿದೆ. ನೀವು ಸಹ ಇಲ್ಲಿ ಆ ಸುಂದರ ಕ್ಷಣವನ್ನು ಕಣ್ತುಂಬಿಕೊಳ್ಳಬಹುದಾಗಿದೆ.

  • 16:54 PM

    ಚಂದ್ರಯಾನಕ್ಕೆ ಹಾಡು ಸಮರ್ಪಿಸಿದ ಕೈಲಾಶ್ ಖೇರ್: ಚಂದ್ರಯಾನ-3 ಯಶಸ್ವಿಗೆ ಖ್ಯಾತ ಗಾಯಕ ಕೈಲಾಶ್ ಖೇರ್ ಪ್ರಾರ್ಥಿಸಿದ್ದಾರೆ. ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗಲಿ ಎಂದು ಭಾರತೀಯರಿಗಾಗಿ ಹಾಡೊಂದನ್ನು ಅವರು ಸಮರ್ಪಿಸಿದ್ದಾರೆ.

     

  • 16:46 PM

    ಭೋಪಾಲ್‌ನಲ್ಲಿಯೂ ವಿಶೇಷ ಪ್ರಾರ್ಥನೆ: ಮಧ್ಯಪ್ರದೇಶದ ಭೋಪಾಲ್‌ನ ಯುಫೋರಿಯಾ ನಗರದಲ್ಲಿ ಚಂದ್ರಯಾನ-3ರ ಯಶಸ್ಸಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಚಂದ್ರನ ಮೇಲೆ ವಿಕ್ರಮ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗಲಿ ಎಂದು ಶುಭ ಹಾರೈಸಿದ್ದಾರೆ.

  • 15:27 PM

    ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ದಂಪತಿಯಿಂದ ಶುಭ ಹಾರೈಕೆ: ಚಂದ್ರಯಾನ-3ರ ಯಶಸ್ವಿಯಾಗಿ ಬಾಲಿವುಡ್ ನಟ ರಿತೇಶ್ ದೇಶಮುಖ್ ಮತ್ತು ಜೆನಿಲಿಯಾ ದಂಪತಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ. ‘ನಾವು ನಮ್ಮ ದೇಶವನ್ನು ಬೆಂಬಲಿಸುವ ಹೆಮ್ಮೆಯ ಭಾರತೀಯರು. ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸುರಿಕ್ಷಿತವಾಗಿ ಲ್ಯಾಂಡ ಆಗಲಿ ಎಂದು ಇಸ್ರೋ ವಿಜ್ಞಾನಿಗಳ ಶ್ರಮಕ್ಕೆ ಶುಭ ಹಾರೈಸಿದ್ದಾರೆ.

     

     

  • 15:23 PM

    ಜಮ್ಮು-ಕಾಶ್ಮೀರದಲ್ಲಿ ಪ್ರಾರ್ಥನೆ: ಚಂದ್ರಯಾನ-3ರ ಯಶಸ್ವಿಗಾಗಿ ಮತ್ತು ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗಲಿ ಎಂದು ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪಾರ್ಥನೆ ಸಲ್ಲಿಸಿದರು.

     

  • 15:19 PM

    ಚಂದ್ರಯಾನ-3ರ ಯಶಸ್ಸಿಗೆ  ಪ್ರಾರ್ಥನೆ: ‘ಇದು ಭಾರತಕ್ಕೆ ಹೆಮ್ಮೆಯ ಕ್ಷಣವಾಗಿದೆ. ಏಕೆಂದರೆ ಸ್ವಾತಂತ್ರ್ಯದ ನಂತರ ದೇಶದಲ್ಲಿ ಎಂಜಿನಿಯರಿಂಗ್ ತಂತ್ರಜ್ಞಾನಕ್ಕೆ ಒತ್ತು ನೀಡಲಾಗಿದೆ. ನಾನು ಇಸ್ರೋ ವಿಜ್ಞಾನಿಗಳಿಗೆ ನನ್ನ ಶುಭಾಶಯಗಳನ್ನು ತಿಳಿಸಲು ಬಯಸುತ್ತೇನೆ. ಚಂದ್ರಯಾನ-3ರ ಯಶಸ್ಸಿಗೆ ನಾನು ಪ್ರಾರ್ಥಿಸುತ್ತೇನೆ’ ಎಂದು ಎಎಪಿ ನಾಯಕ ಸೌರಭ್ ಭಾರದ್ವಾಜ್ ಹೇಳಿದ್ದಾರೆ.

     

  • 15:15 PM

    ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆ: ಚಂದ್ರಯಾನ-3ರ ಯಶಸ್ವಿ ಚಂದ್ರನ ಲ್ಯಾಂಡಿಂಗ್‌ಗಾಗಿ ಮುಸ್ಲಿಂ ಬಾಂಧವರು ಒಡಿಶಾದ ಭುವನೇಶ್ವರದ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

  • 15:12 PM

    ಸಂಜೆ 6 ಗಂಟೆ 4 ನಿಮಿಷಕ್ಕೆ ಲ್ಯಾಂಡ್: ಸಂಜೆ 6 ಗಂಟೆ 4 ನಿಮಿಷಕ್ಕೆ ವಿಕ್ರಮ್​ ಲ್ಯಾಂಡರ್​ ಚಂದಿರನನ್ನು ಸ್ಪರ್ಶೀಸಲಿದೆ ಎಂದು ಇಸ್ರೋ ಟ್ವೀಟ್​ ಮಾಡಿದೆ. ಸ್ವಯಂಚಾಲಿತ ಲ್ಯಾಂಡಿಂಗ್ ಸೀಕ್ವೆನ್ಸ್ (ALS) ಪ್ರಾರಂಭಕ್ಕೆ ಎಲ್ಲವೂ ಸಜ್ಜಾಗಿದೆ. ಸಂಜೆ 5 ಗಂಟೆ 44 ನಿಮಿಷಕ್ಕೆ ನಿಗದಿಪಡಿಸಿದ ಸ್ಥಳದಲ್ಲಿ ಲ್ಯಾಂಡರ್ ಮಾಡ್ಯೂಲ್ (LM) ಆಗಮನದ ನಿರೀಕ್ಷೆಯಿದೆ. ಈ ಕಾರ್ಯಾಚರಣೆಯ ನೇರ ಪ್ರಸಾರ ಸಂಜೆ 5.20ರಿಂದ ಆರಂಭವಾಗಲಿದೆ ಎಂದು ಟ್ವೀಟ್‍ನಲ್ಲಿ ಮಾಹಿತಿ ನೀಡಿದೆ.  

     

  • 15:05 PM

    ಗುರುದ್ವಾರದಲ್ಲಿ ವಿಶೇಷ ಪ್ರಾರ್ಥನೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಚಂದ್ರಯಾನ-3 ಯಶಸ್ವಿಯಾಗಲಿ. ಚಂದ್ರನ ಮೇಲೆ ವಿಕ್ರಮ ಲ್ಯಾಂಡರ್ ಸುರಕ್ಷಿತವಾಗಿ ಲ್ಯಾಂಡ್ ಆಗಲಿ ಎಂದು ದೆಹಲಿಯ ಗುರುದ್ವಾರ ಬಾಂಗ್ಲಾ ಸಾಹಿಬ್‌ನಲ್ಲಿ ವಿಶೇಷ ಅರ್ದಾಸ್‌ನಲ್ಲಿ ಭಾಗವಹಿಸಿ ಪಾರ್ಥಿಸಿದರು.

  • 13:06 PM

    Chandrayaan-3 Moon Landing Live: ಚಂದ್ರಯಾನ 3 ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಆಗುವ ಕ್ಷಣಕ್ಕಾಗಿ ದೇಶದ ಪ್ರಜೆಗಳು ಉಸಿರು ಬಿಗಿಹಿಡಿದು ಕಾಯುತ್ತಿದ್ದಾರೆ. ಈ ಮಧ್ಯೆ ಮಾತನಾಡಿದ ಭಾರತದ ಪ್ರಥಮ ಅಂತರಿಕ್ಷಯಾನಿ ರಾಕೇಶ್ ಶರ್ಮಾ, "ಚಂದ್ರಯಾನ 3 ಸುರಕ್ಷಿತ ಲ್ಯಾಂಡಿಂಗ್ ಆಗುವುದು ಖಂಡಿತ ಎಂದು ಹೆಮ್ಮೆಯಿಂದ ಹೇಳುವೆ" ಎಂದು ಹೇಳಿದ್ದಾರೆ.

  • 12:42 PM

    Chandrayaan-3 Moon Landing Live: ‘ಭಾರತೀಯರಿಗೆ ಶುಭವಾಗಲಿ' ಎಂದು ಹೇಳುವ ಮೂಲಕ ಭಾರತೀಯ-ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಚಂದ್ರಯಾನ-3 ಮಿಷನ್‌’ನ ಲ್ಯಾಂಡರ್ ಮಾಡ್ಯೂಲ್ ಸಾಫ್ಟ್ ಲ್ಯಾಂಡಿಂಗ್’ಗೆ ಶುಭಹಾರೈಸಿದ್ದಾರೆ. “ಆಗಸ್ಟ್ 23 ರಂದು ಚಂದ್ರಯಾನ-3 ಚಂದ್ರನ ಮೇಲ್ಮೈ ಮುಟ್ಟುವುದನ್ನು ನೋಡಲು ನಾನು ತುಂಬಾ ಉತ್ಸುಕನಾಗಿದ್ದೇನೆ. ಅದೃಷ್ಟವಂತರು ನಾವು" ಎಂದು ಅನುಭವಿ ನಾಸಾ ಗಗನಯಾತ್ರಿ ನ್ಯಾಷನಲ್ ಜಿಯಾಗ್ರಫಿಕ್ ಇಂಡಿಯಾ ಹಂಚಿಕೊಂಡ ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.

  • 12:28 PM

    Chandrayaan-3 Moon Landing Live: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ 3ನೇ ಚಂದ್ರನ ಮಿಷನ್ ಚಂದ್ರಯಾನ-3ರ ಲ್ಯಾಂಡರ್ ಮಾಡ್ಯೂಲ್ (ಎಲ್‌ಎಂ) ಇಂದು ಸಂಜೆ ಚಂದ್ರನ ಮೇಲ್ಮೈಯನ್ನು ಸ್ಪರ್ಶಿಸಲು ಸಿದ್ಧವಾಗಿದೆ. ಇದರಲ್ಲಿ ಯಶಸ್ವಿಯಾದರೆ ಯುಎಸ್, ಚೀನಾ ಮತ್ತು ಸೋವಿಯತ್ ಒಕ್ಕೂಟದ ಬಳಿಕ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಿ ಭಾರತ ಹೊರಹೊಮ್ಮಿಲಿದೆ. ಇನ್ನೊಂದೆಡೆ ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವ ಪ್ರದೇಶದಲ್ಲಿ ನೌಕೆ ಇಳಿಸುವ ಮೊದಲ ದೇಶ ಎನ್ನುವ ಹೆಗ್ಗಳಿಕೆ ಭಾರತ ಪಾತ್ರವಾಗಲಿದೆ.

  • 11:54 AM

    Chandrayaan-3 Moon Landing Live: ಚಂದ್ರಯಾನ -3 ಲ್ಯಾಂಡಿಂಗ್ ವೀಕ್ಷಿಸಲು ಬೆಂಗಳೂರಿನ‌ ನೆಹರು ತಾರಾಲಯದಲ್ಲಿ ಸಾರ್ವಜನಿಕರಿಗೆ ವ್ಯವಸ್ಥೆ ಮಾಡಲಾಗಿದೆ. ಲ್ಯಾಂಡಿಂಗ್ ಲೈವ್ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿದ್ದೇವೆ. ಇಂದು ಸಂಜೆ 5 ಗಂಟೆ 10 ನಿಮಿಷಕ್ಕೆ ಲೈವ್ ಆರಂಭವಾಗಲಿದೆ ಎಂದು ನೆಹರು ತಾರಾಲಯದ ನಿರ್ದೇಶಕ ಪ್ರಮೋದ್ ಗಲಗಲಿ ಹೇಳಿದ್ದಾರೆ.

  • 11:31 AM

    Chandrayaan-3 Moon Landing Live: ಅಂತರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಚಂದ್ರಯಾನ-3 ರ ಯಶಸ್ವಿ ಲ್ಯಾಂಡಿಂಗ್‌’ಗಾಗಿ ಯುಎಸ್‌’ನ ಕೊಲೊರಾಡೋದ ಡೆನ್ವರ್‌’ನಲ್ಲಿ ಮರಳಿನ ಶಿಲ್ಪವನ್ನು ರಚಿಸಿದ್ದಾರೆ. 

     

     

     

  • 11:10 AM

    Chandrayaan-3 Moon Landing Live: ಪಾಕಿಸ್ತಾನದ ಮಾಜಿ ಸಚಿವ ಫವಾದ್ ಹುಸೇನ್ ಭಾರತದ ‘ಚಂದ್ರಯಾನ-3’ ಇತಿಹಾಸದಲ್ಲಿ ಮಹತ್ವದ ಕ್ಷಣವೆಂದು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಅಂದರೆ 2019 ರಲ್ಲಿ 'ಚಂದ್ರಯಾನ 2' ಬಗ್ಗೆ ಟೀಕಿಸಿದ್ದ ಹುಸೇನ್, ಇದೀಗ ತಮ್ಮ ಹೇಳಿಕೆಯಲ್ಲಿ ಗಮನಾರ್ಹ ಬದಲಾವಣೆ ಮಾಡಿದ್ದಾರೆ. ಈ ಹಿಂದೆ ಪ್ರಧಾನಿ ಇಮ್ರಾನ್ ಖಾನ್ ಅವರ ಆಡಳಿತದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಸ್ಥಾನವನ್ನು ಹೊಂದಿದ್ದ ಹುಸೇನ್, ಭಾರತಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಪಾಕಿಸ್ತಾನದಲ್ಲೂ ಚಂದ್ರಯಾನದ ನೇರಪ್ರಸಾರ ಟೆಲಿಕಾಸ್ಟ್ ಮಾಡುವಂತೆ ಒತ್ತಾಯಿಸಿದ್ದಾರೆ.

  • 11:02 AM

    Chandrayaan-3 Moon Landing Live: ನಾಲ್ಕು ವರ್ಷಗಳಲ್ಲಿ ಇಸ್ರೋದ ಎರಡನೇ ಪ್ರಯತ್ನ ಇದಾಗಿದ್ದು, ಚಂದ್ರಯಾನ-3 ಮಿಷನ್ ಚಂದ್ರನ ಮೇಲೆ ಸ್ಪರ್ಶಿಸುವಲ್ಲಿ ಮತ್ತು ರೋಬೋಟಿಕ್ ಲೂನಾರ್ ರೋವರ್ ಅನ್ನು ಇಳಿಸುವಲ್ಲಿ ಯಶಸ್ವಿಯಾದರೆ, ಭಾರತವು ಯುಎಸ್, ಚೀನಾ ಮತ್ತು ಸೋವಿಯತ್ ಒಕ್ಕೂಟದ ನಂತರ ಚಂದ್ರನ ಮೇಲ್ಮೈಯಲ್ಲಿ ಸಾಫ್ಟ್ ಲ್ಯಾಂಡಿಂಗ್ ತಂತ್ರಜ್ಞಾನವನ್ನು ಕರಗತ ಮಾಡಿಕೊಂಡ ನಾಲ್ಕನೇ ದೇಶವಾಗಲಿದೆ. 600 ಕೋಟಿ ರೂಪಾಯಿ ವೆಚ್ಚದ ಚಂದ್ರಯಾನ-3 ಮಿಷನ್ ಅನ್ನು ಜುಲೈ 14 ರಂದು ಲಾಂಚ್ ವೆಹಿಕಲ್ ಮಾರ್ಕ್-III (LVM-3) ರಾಕೆಟ್‌’ನಲ್ಲಿ ಕಳುಹಿಸಲಾಗಿತ್ತು.

  • 10:56 AM

    Chandrayaan-3 Moon Landing Live: ಚಂದ್ರಯಾನ-3 ಚಂದ್ರನ ಮೇಲೆ ಇಳಿಯುವ ನೇರ ಪ್ರಸಾರವನ್ನು ವೀಕ್ಷಿಸಲು ವಿಶೇಷ ಅಸೆಂಬ್ಲಿಗಳನ್ನು ಆಯೋಜಿಸಬೇಕೆಂದು ಐಐಟಿ ಮತ್ತು ಐಐಎಂಗಳು ಸೇರಿದಂತೆ ಎಲ್ಲಾ ವಿಶ್ವವಿದ್ಯಾಲಯಗಳು ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೇಂದ್ರವು ಮನವಿ ಮಾಡಿದೆ.

  • 10:50 AM

    Chandrayaan-3 Moon Landing Live: ಚಂದ್ರಯಾನಕ್ಕೆ ಸಂಬಧಿಸಿದಂತೆ ಭಾರತ ಬಾಹ್ಯಾಕಾಶ ಸಂಸ್ಥೆ ಮೈಲಿಗಲ್ಲು ಸಾಧಿಸಿದೆ. ಇನ್ನು ಆಗಸ್ಟ್ 22ರಂದು ಚಂದ್ರಯಾನ-3 ತೆಗೆದ ಚಂದ್ರನ ಫೋಟೋ ಮತ್ತು ಹೊಸ ವೀಡಿಯೊವನ್ನು ಇಸ್ರೋ ಬಿಡುಗಡೆ ಮಾಡಿದ್ದು, ಇಲ್ಲಿ ವೀಕ್ಷಿಸಬಹುದಾಗಿದೆ.

     

     

     

Trending News