ಮುಂಬೈ: ಬಾಂದ್ರಾನಲ್ಲಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ (UddhavThackeray) ಅವರ ನಿವಾಸವಾದ ಮಾತೋಶ್ರೀಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಬೆದರಿಕೆ ಕರೆ ಬಂದಾಗಿನಿಂದ ಮಾತೋಶ್ರೀ ಕಟ್ಟಡದ ಭದ್ರತೆಯನ್ನು ಹೆಚ್ಚಿಸಲಾಗಿದೆ. ಠಾಕ್ರೆ ಅವರ ನಿವಾಸವನ್ನು ಸ್ಫೋಟಿಸುವ ಈ ಬೆದರಿಕೆಯನ್ನು ದಾವೂದ್ ಹೆಸರಿನಲ್ಲಿ ನೀಡಲಾಗಿದೆ. ಮುಂಬೈ ಅಪರಾಧ ವಿಭಾಗವು ಪ್ರಸ್ತುತ ಪ್ರಕರಣದ ತನಿಖೆ ಆರಂಭಿಸಿದೆ.
ಶನಿವಾರ ರಾತ್ರಿ ಠಾಕ್ರೆ ಕುಟುಂಬಸ್ಥರ ಅಧಿಕೃತ ನಿವಾಸವಾಗಿರುವ 'ಮಾತೊಶ್ರಿ' ಲ್ಯಾಂಡ್ ಲೈನ್ ನಂಬರ್ ಗೆ 3-4 ಬಾರಿ ಕರೆಯೊಂದನ್ನು ಮಾಡಲಾಗಿದ್ದು, ದುಬೈ ಮೂಲದ ವ್ಯಕ್ತಿಯೋರ್ವ ಈ ಕರೆ ಮಾಡಿದ್ದ ಎನ್ನಲಾಗಿದೆ. ಕರೆಯಲ್ಲಿ ವ್ಯಕ್ತಿ, ಠಾಕ್ರೆ ಕುಟುಂಬದ ಅಧಿಕೃತ ನಿವಾಸವಾಗಿರುವ 'ಮಾತೊಶ್ರಿ'ಯನ್ನು ಬಾಂಬ್ ಮೂಲಕ ಉಡಾಯಿಸುವುದಾಗಿ ಬೆದರಿಕೆ ನೀಡಿದ್ದಾನೆ ಎನ್ನಲಾಗಿದೆ.