ಭುವನೇಶ್ವರ: ಭುವನೇಶ್ವರದ(Bhubaneswar) ಭುವನೇಶ್ವರ ವಿಮಾನ ನಿಲ್ದಾಣ(Bhubaneswar Airport)ದಲ್ಲಿ ಶನಿವಾರ ಮುಂಜಾನೆ ದೊಡ್ಡ ಅಪಘಾತ ಸಂಭವಿಸಿದೆ. ಇಲ್ಲಿ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಟರ್ಮಿನಲ್ 2 ಅನ್ನು ಸಂಪರ್ಕಿಸುವ ಲಿಂಕ್ ಕಟ್ಟಡದ ನಿರ್ಮಾಣ ಹಂತದಲ್ಲಿದ್ದ ಮೇಲ್ಛಾವಣಿ ಕುಸಿದಿದೆ. ಈ ಅಪಘಾತದಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದರೆ, ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ಅಗ್ನಿಶಾಮಕ ಇಲಾಖೆಯ ಹೊರತಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ಮತ್ತು ರಾಜ್ಯ ವಿಪತ್ತು ಪ್ರತಿಕ್ರಿಯೆ ಪಡೆ (ಎಸ್‌ಡಿಆರ್‌ಎಫ್) ಕೂಡ ಸ್ಥಳಕ್ಕೆ ತಲುಪಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು.
ಮಾಹಿತಿಯ ಪ್ರಕಾರ, ಗಾಯಗೊಂಡ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
Odisha: One person dead & one injured, after the collapse of an under-construction roof of a link building connecting Terminal-1 & Terminal-2 of the Bhubaneswar Airport. National Disaster Response Force, State Disaster Response Force,& Fire Services personnel present at the spot. pic.twitter.com/HeNCK4YIof
— ANI (@ANI) January 24, 2020