ಸರ್ಕಾರದ ಈ ಯೋಜನೆಯೊಂದಿಗೆ ಕೈಜೋಡಿಸಿ ಹಣ ಸಂಪಾದಿಸಿ

ಕುಸುಮ್ (KUSUM) ಯೋಜನೆಯಲ್ಲಿ, ರೈತರು ತಮ್ಮ ಬಂಜರು ಭೂಮಿಯಲ್ಲಿ ಸೌರ ಫಲಕಗಳನ್ನು ಹಾಕುವ ಮೂಲಕ ನೀರಾವರಿ ಜೊತೆಗೆ ವಿದ್ಯುತ್ ಉತ್ಪಾದಿಸಬಹುದು. ವಿಶೇಷವೆಂದರೆ ರೈತರು ಸೌರ ಫಲಕಗಳಿಂದ ಪಡೆದ ಹೆಚ್ಚುವರಿ ಶಕ್ತಿಯನ್ನು ಮಾರಾಟ  ಸಹ ಮಾಡಬಹುದು.

Written by - Yashaswini V | Last Updated : Feb 3, 2020, 01:11 PM IST
ಸರ್ಕಾರದ ಈ ಯೋಜನೆಯೊಂದಿಗೆ ಕೈಜೋಡಿಸಿ ಹಣ ಸಂಪಾದಿಸಿ title=

ನವದೆಹಲಿ: ಕೇಂದ್ರ ಸರ್ಕಾರ ಹೆಚ್ಚಾಗಿ ಕೃಷಿ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದೆ. ಶನಿವಾರ ಸಂಸತ್ತಿನಲ್ಲಿ ಮಂಡಿಸಲಾದ ಬಜೆಟ್ 2020 ರಲ್ಲಿ, ರೈತರನ್ನು ಗಮನದಲ್ಲಿಟ್ಟುಕೊಂಡು ಹಲವಾರು ಯೋಜನೆಗಳನ್ನು ಘೋಷಿಸಲಾಯಿತು. ಬಜೆಟ್ನ ಹೆಚ್ಚಿನ ಭಾಗವು ಕೃಷಿ, ಗ್ರಾಮಗಳು ಮತ್ತು ರೈತರ ಮೇಲೆ ಕೇಂದ್ರೀಕರಿಸಿದೆ. ಸರ್ಕಾರವು ಇಂತಹ ಅನೇಕ ಯೋಜನೆಗಳನ್ನು ಘೋಷಿಸಿತು. ಅದರಲ್ಲಿ ಬಂಜರು ಭೂಮಿಯಿಂದಲೂ ಹಣ ಸಂಪಾದಿಸಬಹುದಾದ ಯೋಜನೆಯೂ ಕೂಡ ಒಂದು. ಇದು ರೈತರ ಆದಾಯವನ್ನು ಹೆಚ್ಚಿಸುತ್ತದೆ. ಈ ಯೋಜನೆಗಳಲ್ಲಿ ಒಂದು ಕಿಸಾನ್ ಸಮ್ ಯೋಜನೆ. ಅದುವೇ ಕುಸುಮ್ (KUSUM) ಯೋಜನೆ.

ಕುಸುಮ್ ಯೋಜನೆಯನ್ನು ಸರ್ಕಾರ ಮುಂದುವರಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಿಸಿದ್ದರಿಂದ ರೈತರಿಗೆ ಹೊಲಗಳಲ್ಲಿನ ನೀರಾವರಿಗಾಗಿ ಸೌರ ಪಂಪ್‌ಗಳನ್ನು(Solar Pump) ಒದಗಿಸಲಾಗುತ್ತದೆ.

ಆದರೆ, ಈ ಯೋಜನೆಯನ್ನು ಅಂದಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು 2018-19ರ ಬಜೆಟ್‌ನಲ್ಲಿ ಘೋಷಿಸಿದರು. ಈ ಯೋಜನೆಯಿಂದ ಸರ್ಕಾರವು ದೇಶದಲ್ಲಿನ ವಿದ್ಯುತ್ ಕೊರತೆಯನ್ನು ನೀಗಿಸುವುದಲ್ಲದೆ, ಬಂಜರು ಭೂಮಿಯನ್ನು ಸಹ ಬಳಸಬಹುದು. ಹೊಲಗಳಲ್ಲಿ ಸೌರಶಕ್ತಿ ಉತ್ಪಾದಿಸುವ ಮೂಲಕ ವಿದ್ಯುತ್ ಕೊರತೆಯನ್ನು ನೀಗಿಸಲಾಗುವುದು. ಹಾಗೆಯೇ ಉಳಿಕೆ ವಿದ್ಯುತ್ ಮಾರಾಟ ಮಾಡುವುದರ ಮೂಲಕ ರೈತರು ಹೆಚ್ಚುವರಿ ಆದಾಯವನ್ನುಸಹ ಗಳಿಸಬಹುದು. ಕುಸುಮ್ ಯೋಜನೆಗಾಗಿ, ಸರ್ಕಾರವು ಸೌರ ಪಂಪ್‌ನ ಒಟ್ಟು ವೆಚ್ಚದ 60% ಅನ್ನು ರೈತರಿಗೆ ಸಹಾಯಧನವಾಗಿ ನೀಡುತ್ತದೆ.

ಕುಸುಮ್ (KUSUM) ಯೋಜನೆ:
ನಮ್ಮ ದೇಶದಲ್ಲಿ ಕೃಷಿ ಮಳೆಯ ಮೇಲೆ ಅವಲಂಬಿತವಾಗಿದೆ. ಅನೇಕ ಸ್ಥಳಗಳಲ್ಲಿ, ಡೀಸೆಲ್ ಪಂಪ್‌ಗಳು ಮತ್ತು ವಿದ್ಯುತ್ ಪಂಪ್‌ಗಳಿಂದ ನೀರಾವರಿ ಒದಗಿಸಲಾಗುತ್ತದೆ. ಆದರೆ ಎಲ್ಲೆಡೆ ವಿದ್ಯುತ್ ಸಂಪರ್ಕದ ಕೊರತೆಯಿಂದಾಗಿ, ವಿದ್ಯುತ್ ಪಂಪ್‌ಗಳಿಂದ ನೀರಾವರಿ ಎಲ್ಲಾ ಸ್ಥಳಗಳಲ್ಲಿ ಸಾಧ್ಯವಿಲ್ಲ ಮತ್ತು ಸರಿಯಾದ ವಿದ್ಯುತ್ ಪೂರೈಕೆಯ ಕೊರತೆಯೂ ದೊಡ್ಡ ಸಮಸ್ಯೆಯಾಗಿದೆ.
 
ಕುಸುಮ್ ಯೋಜನೆಯ ಮೂಲಕ ರೈತರು ತಮ್ಮ ಜಮೀನಿನಲ್ಲಿ ಸೌರ ವಿದ್ಯುತ್ ಪಂಪ್‌ಗಳನ್ನು ಹಾಕುವ ಮೂಲಕ ತಮ್ಮ ಹೊಲಗಳಿಗೆ ನೀರಾವರಿ ಒದಗಿಸಬಹುದು. ಈ ಯೋಜನೆಯಲ್ಲಿ ರೈತರು ತಮ್ಮ ಬಂಜರು ಭೂಮಿಯಲ್ಲಿ ಸೌರ ಫಲಕಗಳನ್ನು ಹಾಕುವ ಮೂಲಕ ನೀರಾವರಿ ಜೊತೆಗೆ ವಿದ್ಯುತ್ ಉತ್ಪಾದಿಸಬಹುದು. ವಿಶೇಷವೆಂದರೆ ರೈತರು ಸೌರ ಫಲಕಗಳಿಂದ ಪಡೆದ ಹೆಚ್ಚುವರಿ ಶಕ್ತಿಯನ್ನು ಮಾರಾಟ ಸಹ ಮಾಡಬಹುದು.

ಯಾರು ಮತ್ತು ಹೇಗೆ ಅರ್ಜಿ ಸಲ್ಲಿಸಬಹುದು?
ಕುಸುಮ್ ಯೋಜನೆಯಡಿ ಯಾವುದೇ ರೈತ, ರೈತರ ಗುಂಪು, ಸಹಕಾರಿ ಸಂಘಗಳು, ಪಂಚಾಯಿತಿಗಳು ಸೌರ ಪಂಪ್ ಅಳವಡಿಸಲು ಅರ್ಜಿ ಸಲ್ಲಿಸಬಹುದು. ಸೌರ ಸ್ಥಾವರ ಸ್ಥಾಪಿಸಲು, ಪ್ರತಿ ಮೆಗಾವ್ಯಾಟ್ + ಜಿಎಸ್‌ಟಿಗೆ 50,000 ರೂ.ಗಳ ದರವನ್ನು ಹೊಂದಿರುವ ಅರ್ಜಿಯನ್ನು ವಿದ್ಯುತ್ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಉತ್ತರ ಪ್ರದೇಶದ ರೈತರು ಯುಪಿ ಸರ್ಕಾರದ ವೆಬ್‌ಸೈಟ್ www.upagripardarshi.gov.in ನಲ್ಲಿ ಅರ್ಜಿ ಸಲ್ಲಿಸಬಹುದು.

ಸರ್ಕಾರದ ಸಹಾಯ:
ಈ ಯೋಜನೆಗೆ ಸಂಪೂರ್ಣ ವೆಚ್ಚವನ್ನು 3 ಭಾಗಗಳಾಗಿ ವಿಂಗಡಿಸಲಾಗಿದೆ. ಇದರಿಂದ ಹೆಚ್ಚು ಹೆಚ್ಚು ರೈತರು ಈ ಯೋಜನೆಯ ಪ್ರಯೋಜನ ಪಡೆಯಬಹುದಾಗಿದೆ. ಮೊದಲ ಭಾಗದ ಅಡಿಯಲ್ಲಿ ಕೇಂದ್ರ ಸರ್ಕಾರವು ಒಟ್ಟು ಖರ್ಚಿನ 60 ಪ್ರತಿಶತವನ್ನು ಸಬ್ಸಿಡಿಯಾಗಿ ನೀಡುತ್ತದೆ. ನೀವು ಬ್ಯಾಂಕಿನಿಂದ ಸಾಲವಾಗಿ 30 ಪ್ರತಿಶತದಷ್ಟು ಮೊತ್ತವನ್ನು ಪಡೆಯಲು ಸಾಧ್ಯವಾಗುತ್ತದೆ. ಕೇವಲ 10 ಪ್ರತಿಶತದಷ್ಟು ಹಣವನ್ನು ರೈತನೇ ಹೂಡಿಕೆ ಮಾಡಬೇಕಾಗುತ್ತದೆ.

ಕುಸುಮ್ ಯೋಜನೆಯ ಪ್ರಯೋಜನಗಳು:
> ಕುಸುಮ್ ಯೋಜನೆಯ ಮೂಲಕ ರೈತರು ವಿದ್ಯುತ್ ಉಳಿತಾಯ ಮಾಡುತ್ತಾರೆ.
> ರೈತರು ನೀರಾವರಿಗಾಗಿ ವಿದ್ಯುತ್ಗಾಗಿ ಕಾಯಬೇಕಾಗಿಲ್ಲ.
> ಸೌರ ಶಕ್ತಿಯೊಂದಿಗೆ 20 ಲಕ್ಷ ನೀರಾವರಿ ಪಂಪ್‌ಗಳನ್ನು ಚಲಾಯಿಸಲು ವ್ಯವಸ್ಥೆ ಮಾಡಲಾಗುವುದು.
> ಡೀಸೆಲ್ ಬಳಕೆ ಮತ್ತು ಮಾಲಿನ್ಯವನ್ನು ನಿಯಂತ್ರಿಸಲಾಗುವುದು.
> ರೈತರು ಕೇವಲ 10 ಪ್ರತಿಶತದಷ್ಟು ವೆಚ್ಚವನ್ನು ಮಾತ್ರ ಭರಿಸಬೇಕಾಗುತ್ತದೆ.
> ಬಂಜರು ಭೂಮಿಯನ್ನು ಬಳಸಬಹುದು.
> ರೈತರು ತಮ್ಮ ಹೆಚ್ಚುವರಿ ವಿದ್ಯುತ್ ಅನ್ನು ಮಾರಾಟ ಮಾಡಬಹುದು. ಈ ಮೂಲಕ ರೈತರಿಗೆ ಇದೊಂದು ಆದಾಯದ ಮೂಲ ಕೂಡ ಆಗಲಿದೆ.

Trending News