ಡಿಎಂಕೆ ಯೂತ್ ವಿಂಗ್ ನೂತನ ಕಾರ್ಯದರ್ಶಿಯಾಗಿ ಸ್ಟಾಲಿನ್ ಪುತ್ರ ಉದಯಾನಿಧಿ ನೇಮಕ

 ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಪುತ್ರ ಮತ್ತು ತಮಿಳು ಚಲನಚಿತ್ರ ನಿರ್ಮಾಪಕ ಮತ್ತು ನಟ ಉದಯಾನಿಧಿ ಅವರನ್ನು ಪಕ್ಷದ ಯೂತ್ ವಿಂಗ್ ನ ನೂತನ ಹೊಸ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

Last Updated : Jul 4, 2019, 05:06 PM IST
 ಡಿಎಂಕೆ ಯೂತ್ ವಿಂಗ್ ನೂತನ ಕಾರ್ಯದರ್ಶಿಯಾಗಿ ಸ್ಟಾಲಿನ್ ಪುತ್ರ ಉದಯಾನಿಧಿ ನೇಮಕ title=
Photo courtesy: Facebook

ನವದೆಹಲಿ:  ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರ ಪುತ್ರ ಮತ್ತು ತಮಿಳು ಚಲನಚಿತ್ರ ನಿರ್ಮಾಪಕ ಮತ್ತು ನಟ ಉದಯಾನಿಧಿ ಅವರನ್ನು ಪಕ್ಷದ ಯೂತ್ ವಿಂಗ್ ನ ನೂತನ ಹೊಸ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಡಿಎಂಕೆ ಪಕ್ಷದಲ್ಲಿ 80 ರ ದಶಕದಿಂದಲೂ ಯುವ ಕಾರ್ಯದರ್ಶಿ ಹುದ್ದೆ ನಿರ್ಣಾಯಕವಾಗಿದೆ. ಈ ಹಿಂದೆ ಸ್ಟಾಲಿನ್ ಅವರು ಮೂರು ದಶಕಗಳ ಕಾಲ ಈ ಸ್ಥಾನದಲ್ಲಿದ್ದರು. 2016 ರಲ್ಲಿ ಹಲವಾರು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದ ಉದಯಾನಿಧಿ ಈಗ ಪ್ರಮಾಣದ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಪ್ರಸ್ತುತ ಅವರು ಡಿಎಂಕೆ ಮುರಸೋಲಿ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.

ಈ ಹಿಂದೆ ಪ್ರಸ್ತುತ ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು 1984 ರಲ್ಲಿ 2016 ರವರೆಗೆ ಪಕ್ಷದ ಯೂತ್ ವಿಂಗ್ ನ ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ್ದರು. ತಂದೆ ಕರುಣಾನಿಧಿ ಅನಾರೋಗ್ಯಕ್ಕೆ ಒಳಗಾದಾಗ ಅವರು ಪಕ್ಷದ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರವೇ ಅವರು ಯೂತ್ ವಿಂಗ್ ವಿಭಾಗವನ್ನು ತ್ಯಜಿಸಿದ್ದರು.

Trending News