ಬಿಹಾರ: ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ತೇಜಸ್ವಿ ಯಾದವ್‌ಗೆ ಒತ್ತಡ

"ತೇಜಸ್ವಿ ಯಾದವ್ ನೈತಿಕ ಜವಾಬ್ದಾರಿಯನ್ನು ಹೊತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಆರ್ಜೆಡಿ ಪಕ್ಷದ ಶಾಸಕ ಮಹೇಶ್ವರ್ ಹೇಳಿದರು.

Last Updated : May 27, 2019, 05:50 PM IST
ಬಿಹಾರ: ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ತೇಜಸ್ವಿ ಯಾದವ್‌ಗೆ ಒತ್ತಡ title=

ಪಾಟ್ನಾ: 2019 ರ ಲೋಕಸಭೆ ಚುನಾವಣೆಯಲ್ಲಿ ಆರ್ಜೆಡಿ ಸೋಲಿನ ಹಿನ್ನೆಲೆಯಲ್ಲಿ ನೈತಿಕ ಜವಾಬ್ದಾರಿ ಹೊತ್ತು ರಾಷ್ಟ್ರೀಯ ಜನತಾ ದಳ (ಆರ್ಜೆಡಿ) ನಾಯಕ ತೇಜಸ್ವಿ ಯಾದವ್ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆರ್ಜೆಡಿ ಶಾಸಕ ಮಹೇಶ್ವರ್ ಯಾದವ್ ಸೋಮವಾರ ಒತ್ತಾಯಿಸಿದ್ದಾರೆ.

"ತೇಜಸ್ವಿ ಯಾದವ್ ನೈತಿಕ ಜವಾಬ್ದಾರಿಯನ್ನು ಹೊತ್ತು ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು" ಎಂದು ಆರ್ಜೆಡಿ ಪಕ್ಷದ ಶಾಸಕ ಮಹೇಶ್ವರ್ ಸೋಮವಾರ ಒತ್ತಾಯಿಸಿದ್ದಾರೆ.

ಮುಜಫರ್ ಪುರ್ನಲ್ಲಿರುವ ಗೈಘಾಟ್ ವಿಧಾನಸಭಾ ಕ್ಷೇತ್ರದ ಶಾಸಕ ಮಹೇಶ್ವರ್ ಚುನಾವಣಾ ಕಾರ್ಯಕ್ಷಮತೆಯನ್ನು ಚರ್ಚಿಸಲು ಪಕ್ಷದ ಪ್ರಸ್ತಾಪಿತ ಸಭೆಯ ಒಂದು ದಿನದ ಮೊದಲು ಆರ್ಜೆಡಿ ಮುಖಂಡರನ್ನು ಉದ್ದೇಶಿಸಿ ಈ ಹೇಳಿಕೆ ನೀಡಿದ್ದಾರೆ.

ಇದೇ ಮೊದಲ ಬಾರಿಗೆ ಬಿಹಾರದ ಲೋಕಸಭೆ ಚುನಾವಣೆಯಲ್ಲಿ ಆರ್ಜೆಡಿ ಏಕೈಕ ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ರಾಷ್ಟ್ರೀಯ ಡೆಮಾಕ್ರಟಿಕ್ ಅಲೈಯನ್ಸ್ (ಎನ್​ಡಿಎ) ರಾಜ್ಯದಲ್ಲಿ 40 ಸ್ಥಾನಗಳಲ್ಲಿ 39 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ ಒಂದೇ ಸ್ಥಾನವನ್ನು ಗೆದ್ದಿದೆ.

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗೆ ಆರ್ಜೆಡಿ ಶಾಂತಿಯಿಂದ ಇದ್ದಾಗ ಪಕ್ಷವು ಏನನ್ನೂ ಹೇಳಲಿಲ್ಲ. "ಆರ್ಜೆಡಿ ಪಕ್ಷ ಸರಿಯಾದ ಟ್ರ್ಯಾಕ್ ಗೆ ಬರಲು ಇಚ್ಚಿಸುತ್ತೇನೆ. ಹಾಗಾಗಿ ನಾನು ಪಕ್ಷವನ್ನು ಬಿಡುವುದಿಲ್ಲ. ಆದರೆ ಇದು ಸಾಧ್ಯವಾಗದಿದ್ದರೆ ಆರ್ಜೆಡಿ ಮುರಿಯಲಿದೆ" ಎಂದು ಮಹೇಶ್ವರ್ ಎಚ್ಚರಿಕೆ ನೀಡಿದರು.
 

Trending News