ಪ್ರಧಾನಿ ಮೋದಿಯವರ ರೆಡ್ಡಿ,ಯಡ್ಡಿ ಗ್ಯಾಂಗ್ ಶೋಲೇ ಫಿಲ್ಮ್ ನ ಗ್ಯಾಂಗ್ ನಂತಿದೆ-ರಾಹುಲ್ ಗಾಂಧಿ

    

Last Updated : May 4, 2018, 12:01 AM IST
ಪ್ರಧಾನಿ ಮೋದಿಯವರ ರೆಡ್ಡಿ,ಯಡ್ಡಿ ಗ್ಯಾಂಗ್ ಶೋಲೇ ಫಿಲ್ಮ್ ನ ಗ್ಯಾಂಗ್ ನಂತಿದೆ-ರಾಹುಲ್ ಗಾಂಧಿ title=

ಭಾಲ್ಕಿ: ಕರ್ನಾಟಕದ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಸಮಾವೇಶದಲ್ಲಿ ಭಾಷಣ ಮಾಡುತ್ತಾ "ಪ್ರಧಾನಿ ಮೋದಿಯವರು ಶೋಲೇ ಚಿತ್ರದ  ಸಂಪೂರ್ಣ ತಂಡವನ್ನು ಹೊಂದಿದ್ದಾರೆಂದು ವ್ಯಂಗವಾಡಿದರು.

ಪ್ರಧಾನಿ ಮೋದಿ ವಿರುದ್ದ  ಟೀಕಾ ಪ್ರಹಾರ ನಡೆಸಿದ ರಾಹುಲ್ ಗಾಂಧಿ " ಮೋದಿಯವರ "ಗಬ್ಬರ್, ಕಾಲಿಯಾ, ಸಾಂಬಾ ಅವರನ್ನು ಒಳಗೊಂಡ ಶೋಲೇ ಫಿಲ್ಮ್ ನ ಗ್ಯಾಂಗ್, ಈಗ ಬಿಜೆಪಿಯಲ್ಲಿ ರೆಡ್ಡಿ ಬ್ರದರ್ ಮತ್ತು ಬಿಎಸ್ ಯಡಿಯೂರಪ್ಪ ರೂಪದಲ್ಲಿ ಸುತ್ತುವರೆದಿದೆ,ಇಂತಹ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರು ಭ್ರಷ್ಟಾಚಾರ ಬಗ್ಗೆ ಮಾತನಾಡುತ್ತಾರೆ" ಎಂದು ವ್ಯಂಗ್ಯವಾಡಿದ್ದಾರೆ.

ಇನ್ನು ಮುಂದುವರೆದು ಮಾತನಾಡಿದ ರಾಹುಲ್" ಕರ್ನಾಟಕದಲ್ಲಿ ಬಿಜೆಪಿ ಜೈಲು ಹಕ್ಕಿಗಳನ್ನು ವಿಧಾನಸಭೆಯಲ್ಲಿ ತುಂಬಿಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.

 

Trending News