ನವದೆಹಲಿ: ನೋಟು ನಿಷೇಧಿಕರಣರಿಂದ ಬಾತ್ ರೂಂ ಮತ್ತು ಬೆಡ್ ರೂಂ ನಲ್ಲಿ ಅಡಗಿಸಿದ್ದ ಹಣ ಬ್ಯಾಂಕಿಂಗ್ ವ್ಯವಸ್ಥೆಗೆ ಮರಳಿ ಬಂದಿದೆ ಎಂದು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಿಳಿಸಿದರು.
ಇತ್ತೀಚಿಗೆ ಆರ್ ಬಿ ಐ ನ ವರದಿ ಪ್ರಸ್ತಾಪಿಸಿದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು " ಬಾತ್ ರೂಂ ಮತ್ತು ಬೆಡ್ ರೂಂ ನಲ್ಲಿ ಅಡಗಿಸಿಟ್ಟಿದ್ದ ಹಣವು ಈಗ ಬ್ಯಾಂಕಿಂಗ್ ವ್ಯವಸ್ಥೆ ಮರಳಿ ಬಂದಿದೆ. ನನ್ನ ಪಾಯಿಂಟ್ ಇಷ್ಟೇ ಹಣ ಮರಳಿ ಬಂದಿದೆ ಅದರಲ್ಲಿ ಎಷ್ಟು ಕಪ್ಪು,ಎಷ್ಟು ಬಿಳಿ ಎನ್ನುವುದನ್ನು ಆರ್.ಬಿ.ಐ ಮತ್ತು ತೆರಿಗೆ ಇಲಾಖೆ ಪರಿಶೀಲಿಸಬೇಕು ಎಂದು ನಾಯ್ಡು ತಿಳಿಸಿದರು.
ಇನ್ನು ಮುಂದುವರೆದು ಒಂದು ವೇಳೆ "ಜನರಿಗೆ ಕಪ್ಪುಹಣವನ್ನು ಬಿಳಿ ಹಣವನ್ನಾಗಿ ಪರಿವರ್ತಿಸಬೇಕೆಂದರೆ ಸಂಸತ್ ಅದಕ್ಕೂ ಅವಕಾಶ ನೀಡಿದೆ..ಅದಕ್ಕೆ ತೆರಿಗೆ ನಿಡಬೇಕಷ್ಟೇ" ಎಂದು ತಿಳಿಸಿದರು.