ನಾಗಲ್ಯಾಂಡ್ ವಿಧಾನಸಭಾ ಚುನಾವಣೆ: ಎನ್ಪಿಎಫ್, ಬಿಜೆಪಿ-ಎನ್ಡಿಪಿಪಿ 7 ಕ್ಷೇತ್ರಗಳಲ್ಲಿ ಮುನ್ನಡೆ

    

Last Updated : Mar 3, 2018, 10:53 AM IST
ನಾಗಲ್ಯಾಂಡ್ ವಿಧಾನಸಭಾ ಚುನಾವಣೆ: ಎನ್ಪಿಎಫ್, ಬಿಜೆಪಿ-ಎನ್ಡಿಪಿಪಿ 7 ಕ್ಷೇತ್ರಗಳಲ್ಲಿ ಮುನ್ನಡೆ  title=

ಕೊಹಿಮಾ: ನಾಗಲ್ಯಾಂಡ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಪ್ರಾರಂಭವಾಗಿದ್ದು, ಸಧ್ಯ ಲಭ್ಯವಾಗಿರುವ 15 ಮತಕ್ಷೇತ್ರದಲ್ಲಿ ಆಡಳಿತಾರೂಢ ನಾಗಾ ಪೀಪಲ್ಸ್ ಫ್ರಂಟ್ ಮತ್ತು ಬಿಪಿಪಿ-ಎನ್ಡಿಪಿಪಿ ಮೈತ್ರಿಕೂಟವು  ಏಳು ಸ್ಥಾನಗಳಲ್ಲಿ ಮುನ್ನಡೆಸಿದೆ ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.

ಎನ್ಪಿಎಫ್  ಪಕ್ಷವು ಚೋಜುಬಾ, ಡಿಮಾಪುರ್-ಐಐ, ಲಾಂಗ್ಖಿಮ್ ಚೇರ್, ನೋಕ್ಲಾಕ್, ಥೋನೋಕ್ನ್ಯು, ತುಯೆನ್ಸಾಂಗ್ ಸಡರ್-ಐ ಮತ್ತು ತುಯೆನ್ಸಾಂಗ್ ಸಡರ್ II ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. 

ಬಿಜೆಪಿಯು ಘಸ್ಪಾನಿ-ಐ, ದಿಮಾಪುರ್-ಐ ಮತ್ತು ಸಿಯೋಚಂಗ್ ಸಿಟಿಮಿ ಮೂರು ಕ್ಷೇತ್ರಗಳಲ್ಲಿ  ಮುನ್ನಡೆ ಸಾಧಿಸಿದೆ ಎಂದು ಮೂಲಗಳು ತಿಳಿಸಿವೆ. ಬಿಜೆಪಿಯ ಮೈತ್ರಿ ಪಕ್ಷವಾಗಿರುವ ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೊಗ್ರೆಸ್ಸಿವ್ ಪಾರ್ಟಿ (ಎನ್ಡಿಪಿಪಿ) ಯುಸ್ಥಾನಗಳನ್ನು  ಷಾಮಟರ್ ಚೆಸ್ಸೋರ್, ಟೆನ್ನಿಂಗ್, ಕೊಹಿಮಾ ಪಟ್ಟಣ ಮತ್ತು ನೋಕ್ಸೆನ್ ವಿಧಾನಸಭಾ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.

 

Trending News