ಗಾಂಧೀಜಿ ಹಂತಕ ನಾಥುರಾಮ್ ರಾಮ್ ಗೋಡ್ಸೆ ನಿಜವಾದ ರಾಷ್ಟ್ರಭಕ್ತ: ಬಿಜೆಪಿ ಅಭ್ಯರ್ಥಿ ಪ್ರಗ್ಯಾಸಿಂಗ್ ಠಾಕೂರ್

ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ನಿಜವಾದ ರಾಷ್ಟ್ರಭಕ್ತ ಎಂದು ಬಿಜೆಪಿಯ ಭೂಪಾಲ್ ಅಭ್ಯರ್ಥಿ ಪ್ರಗ್ಯಾಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Updated: May 16, 2019 , 05:06 PM IST
ಗಾಂಧೀಜಿ ಹಂತಕ ನಾಥುರಾಮ್ ರಾಮ್ ಗೋಡ್ಸೆ ನಿಜವಾದ ರಾಷ್ಟ್ರಭಕ್ತ:  ಬಿಜೆಪಿ ಅಭ್ಯರ್ಥಿ ಪ್ರಗ್ಯಾಸಿಂಗ್ ಠಾಕೂರ್
file photo

ನವದೆಹಲಿ: ಮಹಾತ್ಮಾ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ನಿಜವಾದ ರಾಷ್ಟ್ರಭಕ್ತ ಎಂದು ಬಿಜೆಪಿಯ ಭೂಪಾಲ್ ಅಭ್ಯರ್ಥಿ ಪ್ರಗ್ಯಾಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಮಲ್ ಹಾಸನ್ ಅವರ ಹೇಳಿಕೆ ಕುರಿತಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮಾಲೆಗಾಂ ಬಾಂಬ್ ಸ್ಪೋಟದ ಆರೋಪಿ ಸಾಧ್ವಿ ಪ್ರಗ್ಯಾ ಸಿಂಗ್ " ನಾಥುರಾಮ್ ಗೋಡ್ಸೆ ನಿಜವಾದ ದೇಶ ಭಕ್ತರಾಗಿದ್ದಾರೆ, ಅವರು ದೇಶಭಕ್ತರಾಗಿಯೇ ಉಳಿಯುತ್ತಾರೆ. ಅವರನ್ನು ಉಗ್ರ ಎಂದು ಕರೆಯುವವರು ಪರಾಮರ್ಶೆಗೆ ಒಳಪಡಿಸಬೇಕು ಅಂತವರಿಗೆ ಈ ಚುನಾವಣೆಯಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ" ಎಂದು ಹೇಳಿದರು.

ಇದಕ್ಕೂ ಮೊದಲು ಕಮಲ್ ಹಾಸನ್ ಅವರು "ನಾಥುರಾಮ್ ಗೋಡ್ಸೆ ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ಇದು ಐತಿಹಾಸಿಕ ಸತ್ಯವೆಂದು ಹೇಳಿದ್ದರು.ಈ ಹಿನ್ನಲೆಯಲ್ಲಿ ಈಗ ಸಾಧ್ವಿ ಅವರ ಹೇಳಿಕೆ ಬಂದಿದೆ.ಈಗ ಪ್ರಗ್ಯಾ ಹೇಳಿಕೆಯಿಂದ ಬಿಜೆಪಿ ಮುಜುಗರಕ್ಕೆ ಒಳಗಾಗಿದೆ.ಈ ಕುರಿತಾಗಿ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ಜಿವಿಎಲ್ ನರಸಿಂಹರಾವ್  "ಬಿಜೆಪಿ ಈ ಹೇಳಿಕೆಯನ್ನು ಒಪ್ಪಿಕೊಳ್ಳುವುದಿಲ್ಲ, ಇದನ್ನು ನಾವು ಖಂಡಿಸುತ್ತೇವೆ. ಪಕ್ಷ ಅವರಿಗೆ ಈ ಹೇಳಿಕೆ ವಿಚಾರವಾಗಿ ಸ್ಪಷ್ಟನೆ ಕೋರುತ್ತದೆ. ಸಾರ್ವಜನಿಕವಾಗಿ ಈ ಹೇಳಿಕೆ ನೀಡಿರುವುದಕ್ಕೆ ಕ್ಷಮೆ ಕೋರಬೇಕು" ಎಂದು ಹೇಳಿದ್ದಾರೆ. 

ಪ್ರಗ್ಯಾ ಸಿಂಗ್ ಮಾಲೆಗಾಂ ಬಾಂಬ್ ಸ್ಪೋಟದಲ್ಲಿ ನಂಬರ್ 1 ಆರೋಪಿ ಎಂದು ಗುರುತಿಸಲ್ಪಟ್ಟಿದ್ದರು. ಇತ್ತಿಚೆಗೆ ಅವರು ಪೋಲಿಸ್ ಅಧಿಕಾರಿ ಹೇಮಂತ್ ಕರ್ಕರೆ ತಮ್ಮ ಶಾಪದಿಂದಾಗಿ ಅವರು ಮುಂಬೈ ದಾಳಿಯಲ್ಲಿ ಸತ್ತರು ಎಂದು ಹೇಳಿಕೆ ನೀಡಿದ್ದರು.ಈ ಹೇಳಿಕೆಗೆ ಚುನಾವಣಾ ಆಯೋಗ 3 ದಿನಗಳ ಕಾಲ ಪ್ರಚಾರಕ್ಕೆ ನಿಷೇಧ ಹೇರಲ್ಪಟ್ಟಿತ್ತು.