ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಶಿವಸೇನೆಗೆ ಎನ್‌ಸಿಪಿ ಷರತ್ತುಗಳಿವು!

ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಯನ್ನು ತೊರೆಯಬೇಕು ಎಂದು ಎನ್‌ಸಿಪಿ-ಶಿವಸೇನೆಗೆ ಷರತ್ತು ವಿಧಿಸಿದೆ.

Last Updated : Nov 6, 2019, 11:57 AM IST
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಶಿವಸೇನೆಗೆ ಎನ್‌ಸಿಪಿ ಷರತ್ತುಗಳಿವು! title=

ಮುಂಬೈ: ಮಹಾರಾಷ್ಟ್ರದಲ್ಲಿ (Maharashtra Assembly Elections 2019) ರಾಜಕೀಯ ಪರಿಸ್ಥಿತಿ ಪ್ರತಿ ಕ್ಷಣವೂ ಬದಲಾಗುತ್ತಿದೆ. ಮೂಲಗಳ ಪ್ರಕಾರ, ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಶಿವಸೇನೆಯ 50-50 ಸೂತ್ರವನ್ನು ಒಪ್ಪಿಕೊಂಡಿದೆ. ಮೂಲಗಳ ಪ್ರಕಾರ ಈ ವ್ಯವಸ್ಥೆಯಲ್ಲಿ ಎನ್‌ಸಿಪಿ ಮುಖ್ಯಮಂತ್ರಿ ಹುದ್ದೆಯನ್ನು ಮೊದಲ ಎರಡೂವರೆ ವರ್ಷಗಳ ಕಾಲ ಶಿವಸೇನೆಗೆ ನೀಡಲು ಪ್ರಸ್ತಾಪಿಸಿದೆ. ಕೊನೆಯ ಎರಡೂವರೆ ವರ್ಷ ಎನ್‌ಸಿಪಿ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಲಿದೆ.

ಇದಲ್ಲದೆ, ಗೃಹ ವ್ಯವಹಾರ, ನಗರಾಭಿವೃದ್ಧಿ, ಕಂದಾಯ, ಹಣಕಾಸು ಮತ್ತು ಪಿಡಬ್ಲ್ಯುಡಿ ಸಚಿವಾಲಯಕ್ಕೆ ಸಂಬಂಧಿಸಿದಂತೆ ಉಭಯ ಪಕ್ಷಗಳ ನಡುವೆ ಸಮಾನ ಹಂಚಿಕೆ ಮಾಡುವ ಪ್ರಸ್ತಾಪವಿದೆ. ಮೂಲಗಳ ಪ್ರಕಾರ, ಎನ್‌ಸಿಪಿ ಕೂಡ ಈ ಪ್ರಸ್ತಾಪದಡಿಯಲ್ಲಿ ಒಂದು ಷರತ್ತು ವಿಧಿಸಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದಲ್ಲಿ ಶಿವಸೇನೆಯ(ಅರವಿಂದ ಸಾವಂತ್) ಅವರ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗುತ್ತದೆ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಯನ್ನು ತೊರೆಯಬೇಕು ಎಂಬ ಷರತ್ತುಗಳನ್ನು ವಿಧಿಸಿದೆ ಎನ್ನಲಾಗುತ್ತಿದೆ. ಶುಕ್ರವಾರ ಮಧ್ಯಾಹ್ನದೊಳಗೆ ಎನ್‌ಸಿಪಿ ಪ್ರಸ್ತಾಪದ ಬಗ್ಗೆ ಶಿವಸೇನೆ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.

ಶರದ್ ಪವಾರ್(Sharad Pawar):
ಏತನ್ಮಧ್ಯೆ, ಶಿವಸೇನೆ ಮುಖಂಡ ಸಂಜಯ್ ರೌತ್ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರನ್ನು ಭೇಟಿ ಮಾಡಲು ತೆರಳಿದ್ದರು. ಇದರ ನಂತರ ಶರದ್ ಪವಾರ್ ಅವರು ಇಂದು ಪ್ರಮುಖ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇದಕ್ಕೂ ಮೊದಲು ಶರದ್ ಪವಾರ್ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಎನ್‌ಸಿಪಿ ಮತ್ತು ಶಿವಸೇನೆ ಸರ್ಕಾರದ ರೂಪುರೇಷೆಗಳ ಬಗ್ಗೆ ಚರ್ಚಿಸಿರುವ ಸಾಧ್ಯತೆಯಿದೆ.

ಬಿಜೆಪಿ ಮತ್ತು ಶಿವಸೇನೆ
ಏತನ್ಮಧ್ಯೆ, ಸರ್ಕಾರ ರಚನೆ ಬಗ್ಗೆ ಬಿಜೆಪಿ ಮತ್ತು ಶಿವಸೇನೆ ನಡುವಿನ ವೈಮನಸ್ಯ ಮುಂದುವರೆದಿದೆ. ಶಿವಸೇನೆ ತನ್ನ ಹಳೆಯ ಬೇಡಿಕೆಗಳಿಗೆ ಬದ್ಧವಾಗಿದ್ದು, ಯಾವುದೇ ಹೊಸ ಪ್ರಸ್ತಾಪಕ್ಕೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದೆ. ಮುಖ್ಯಮಂತ್ರಿ ಹುದ್ದೆಗೆ ಒಪ್ಪಿಗೆ ಸೂಚಿಸಿದ ವಿಷಯಗಳ ಬಗ್ಗೆ ಮಾತನಾಡಬೇಕು. ಆದರೆ ರಾಷ್ಟ್ರಪತಿಗಳ ಆಡಳಿತ ಹೇರಿದರೆ ಜನಾದೇಶವನ್ನು ಅವಮಾನಿಸದಂತಾಗುತ್ತದೆ ಎಂದು ಹೇಳಿದೆ. ಶಿವಸೇನೆ ಮುಖಂಡ ಸಂಜಯ್ ರೌತ್ ಸೋಷಿಯಲ್ ಮೀಡಿಯಾ ಮೂಲಕ ಬಿಜೆಪಿ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಿದ್ದಾರೆ. 

ಏತನ್ಮಧ್ಯೆ, ಆದಿತ್ಯ ಠಾಕ್ರೆ ಅವರ ಆಪ್ತ ಯೂತ್ ಆರ್ಮಿ ಕಾರ್ಪ್ಸ್ ತಂಡದ ಮುಖಂಡ ರಾಹುಲ್ ಕನಾಲ್ ಅವರು ಶೀಘ್ರದಲ್ಲೇ ಶಿವಾಜಿ ಪಾರ್ಕ್‌ನಲ್ಲಿ ಆದಿತ್ಯ ಠಾಕ್ರೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ. 

Trending News