ಬೆಸ-ಸಮ ಯೋಜನೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ NGT

                     

Last Updated : Nov 11, 2017, 12:13 PM IST
ಬೆಸ-ಸಮ ಯೋಜನೆಗೆ ಸಂಬಂಧಿಸಿದಂತೆ ದೆಹಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ NGT   title=

ನವದೆಹಲಿ: ದೆಹಲಿಯಲ್ಲಿ ಹೆಚ್ಚಾಗಿರುವ ಮಾಲಿನ್ಯವನ್ನು ಹತೋಟಿಗೆ ತರಲು ಬೆಸ-ಸಮ ಯೋಜನೆಯನ್ನು ಮೊದಲೇ ಏಕೆ ಜಾರಿಗೊಳಿಸಲಿಲ್ಲ ಎಂದು ಪ್ರಶ್ನಿಸಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ದೆಹಲಿಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ದೆಹಲಿಯಲ್ಲಿ ಹೆಚ್ಚಿರುವ ವಾಯುಮಾಲಿನ್ಯಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಈ ಬಗ್ಗೆ ಸರ್ಕಾರ ಮುಂಜಾಗೃತೆ ವಹಿಸಬೇಕಿತ್ತು ಮತ್ತು ಬೆಸ-ಸಮ ಯೋಜನೆಯನ್ನು ಮೊದಲೇ ಜಾರಿಗೊಳಿಸಬೇಕಿತ್ತು. ಆದರೂ ಏಕೆ ಕ್ರಮ ತೆಗೆದುಕೊಂಡಿಲ್ಲ ಎಂದು ಶನಿವಾರ ದೆಹಲಿ ಸರ್ಕಾರವನ್ನು ಪ್ರಶ್ನಿಸಿದೆ. 

ಈ ಹಿಂದೆ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ  ಅಧಿಕಾರಕ್ಕೆ ಬಂದ ಕೂಡಲೇ ದೆಹಲಿಯಲ್ಲಿ ಮಾಲಿನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಬೆಸ-ಸಮ ಯೋಜನೆಯನ್ನು ಜಾರಿಗೆ ತಂದಿತ್ತು. ಇದು ವಿಫಲವಾದ ಕಾರಣ ನಂತರ ಇದನ್ನು ಸ್ಥಗಿತಗೊಳಿಸಿತ್ತು. ಈಗ ಧೀಡಿರನೆ ಉಂಟಾಗಿರುವ  ವಾಯುಮಾಲಿನ್ಯದಿಂದ ಮತ್ತೆ ಎಚ್ಚೆತ್ತುಕೊಂಡ ಸರ್ಕಾರ ನ.13 ರಿಂದ ಬೆಸ-ಸಮ ಯೋಜನೆಯನ್ನು ಜಾರಿಗೊಳಿಸಲು ಹೊರಟಿದೆ. ಆದರೆ ಅದಕ್ಕೂ ಕೂಡ ಕಂಟಕ ಎದುರಾಗಿದೆ. ಈ ವಿಷಯ ಕುರಿತಾಗಿ ಸರ್ಕಾರ ಮತ್ತು ಲೆಫ್ಟಿನೆಂಟ್  ಗವರ್ನರ್ ರವರ ಸಮ್ಮತಿಯಿದ್ದರೆ ಮಾತ್ರ ಈ ಯೋಜನೆಯನ್ನು ಜಾರಿಗೊಳಿಸಬಹುದೆಂದು ಎನ್ಜಿಟಿ ಸೂಚಿಸಿದೆ.

Trending News