ನವದೆಹಲಿ: ಪರಿಸ್ಥಿತಿಗಳು ಬದಲಾದರೆ ಭವಿಷ್ಯದಲ್ಲಿ ಭಾರತದ No First Use' ಪರಮಾಣು ನೀತಿ ಮುಂದುವರಿಯುವ ಸಾಧ್ಯತೆಯಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಶುಕ್ರವಾರದಂದು ರಾಜಸ್ಥಾನದ ಪೋಖ್ರಾನ್ನಲ್ಲಿ ಮಾತನಾಡಿದ ಅವರು " ಭಾರತವನ್ನು ಪರಮಾಣು ಶಕ್ತಿಯನ್ನಾಗಿ ಮಾಡುವ ಅಟಲ್ ಜಿ ಅವರ ಧೃಡಸಂಕಲ್ಪಕ್ಕೆ ಸಾಕ್ಷಿಯಾದ ಪ್ರದೇಶವೆಂದರೆ ಪೋಖ್ರಾನ್, ಆದರೆ 'ಮೊದಲ ಬಳಕೆ ಬೇಡ' ಎಂಬ ಸಿದ್ಧಾಂತಕ್ಕೆ ಭಾರತ ಬದ್ದವಾಗಿದೆ.ಈ ಸಿದ್ಧಾಂತವನ್ನು ಭಾರತ ಕಟ್ಟುನಿಟ್ಟಾಗಿ ಪಾಲಿಸಿದೆ.ಆದರೆ ಭವಿಷ್ಯದಲ್ಲಿ ಏನಾಗುತ್ತದೆ ಎಂಬುದು ಸಂದರ್ಭಗಳ ಮೇಲೆ ಅವಲಂಬಿಸಿರುತ್ತದೆ, ಎಂದು ಸಿಂಗ್ ಹೇಳಿದ್ದಾರೆ.
Visited Pokhran today and paid homage to the former Prime Minister of India and one of the stalwarts of Independent India, Atal Bihari Vajpayee ji on his first death anniversary. pic.twitter.com/fhyGyolDqc
— Rajnath Singh (@rajnathsingh) August 16, 2019
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನ ವಾರ್ಷಿಕೋತ್ಸವದಂದು ಪೋಖ್ರಾನ್ಗೆ ಭೇಟಿ ನೀಡಿ ಅವರ ಅವಧಿಯಲ್ಲಿ ಕೈಗೊಂಡ ಪೊಕ್ರಾನ್ ಪರಮಾಣು ಪರಿಕ್ಷೆಯನ್ನು ಅವರು ನೆನಪಿಸಿಕೊಂಡರು. ಜವಾಬ್ದಾರಿಯುತ ಪರಮಾಣು ರಾಷ್ಟ್ರದ ಭಾರತದ ಸ್ಥಾನಮಾನವು ಪ್ರತಿಯೊಬ್ಬ ನಾಗರಿಕರಿಗೂ ರಾಷ್ಟ್ರೀಯ ಹೆಮ್ಮೆಯ ವಿಷಯವಾಗಿದೆ ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.