ಉರ್ಮಿಳಾ ಮಾತೊಂಡ್ಕರ್ ಈಗ ಕಾಂಗ್ರೆಸ್ ನ ಮುಂಬೈ ಉತ್ತರ ಕ್ಷೇತ್ರದ ಅಭ್ಯರ್ಥಿ

 ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಸೇರಿದ್ದ ಬಾಲಿವುಡ್ ನಟಿ ಉರ್ಮಿಳಾ ಮಾತೊಂಡ್ಕರ್ ಅವರನ್ನು ಈಗ ಮುಂಬೈ ಉತ್ತರ ಲೋಕಸಭಾದ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

Last Updated : Mar 29, 2019, 01:30 PM IST
 ಉರ್ಮಿಳಾ ಮಾತೊಂಡ್ಕರ್ ಈಗ ಕಾಂಗ್ರೆಸ್ ನ ಮುಂಬೈ ಉತ್ತರ ಕ್ಷೇತ್ರದ ಅಭ್ಯರ್ಥಿ title=
Photo courtesy: Instagram

ನವದೆಹಲಿ: ಇತ್ತೀಚಿಗೆ ಕಾಂಗ್ರೆಸ್ ಪಕ್ಷ ಸೇರಿದ್ದ ಬಾಲಿವುಡ್ ನಟಿ ಉರ್ಮಿಳಾ ಮಾತೊಂಡ್ಕರ್ ಅವರನ್ನು ಈಗ ಮುಂಬೈ ಉತ್ತರ ಲೋಕಸಭಾದ ಕಾಂಗ್ರೆಸ್ ನ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಲಾಗಿದೆ.

ಬುಧುವಾರವಷ್ಟೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದ ಉರ್ಮಿಳಾ "ಪಕ್ಷಕ್ಕೆ ಬರ ಮಾಡಿಕೊಂಡಿರುವುದಕ್ಕೆ ನಾನು ಅಭಾರಿಯಾಗಿದ್ದೇನೆ. ಇಂದು ನನಗೆ ಮಹತ್ವದ ದಿನ ಏಕೆಂದರೆ ಮೊದಲ ಬಾರಿಗೆ ನಾನು ರಾಜಕೀಯ ಹೆಜ್ಜೆಯನ್ನು ಇಡುತ್ತಿದ್ದೇನೆ. ನನ್ನ ವ್ಯಕ್ತಿತ್ವ ಮತ್ತು ಚಿಂತನೆಗಳು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ಅವರಿಂದ ಪ್ರಭಾವಿತಗೊಂಡಿದೆ "ಎಂದು ಹೇಳಿಕೆ ನೀಡಿದ್ದರು.

 
 
 
 

 
 
 
 
 
 
 
 
 

Thank you Rahulji and AICC for trusting me with the candidature of Mumbai north constituency.🙏🏼 Jai Hind 🇮🇳

A post shared by Urmila Matondkar (@urmilamatondkarofficial) on

ಈಗ ಮುಂಬೈ ಉತ್ತರ ಕ್ಷೇತ್ರದಲ್ಲಿ ಉರ್ಮಿಳಾ ಮಾತೊಂಡ್ಕರ್ ಬಿಜೆಪಿ ಗೋಕುಲ್ ನಾಥ್ ಶೆಟ್ಟಿ ವಿರುದ್ಧ ಕಣಕ್ಕೆ ಇಳಿಯಲಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನಾಗಿ ಘೋಷಿಸಿದ್ದಕ್ಕೆ ಉರ್ಮಿಳಾ ಮಾತೊಂಡ್ಕರ್ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

Trending News