ಒಡಿಶಾ, ಅರುಣಾಚಲ ಪ್ರದೇಶದಲ್ಲಿ ಇಂದು ಭಾರಿ ಮಳೆ ಸಾಧ್ಯತೆ

ಮಧ್ಯ ಮಹಾರಾಷ್ಟ್ರ, ಕರಾವಳಿ ಆಂಧ್ರಪ್ರದೇಶ ಮತ್ತು ಯಾನಂ, ತೆಲಂಗಾಣ, ರಾಯಲಸೀಮೆ, ಉತ್ತರ ಮತ್ತು ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ದಿನವಿಡೀ ಭಾರಿ ಮಳೆಯಾಗುವ ಸಾಧ್ಯತೆಯಿದೆ.

Updated: Oct 9, 2019 , 10:33 AM IST
ಒಡಿಶಾ, ಅರುಣಾಚಲ ಪ್ರದೇಶದಲ್ಲಿ ಇಂದು ಭಾರಿ ಮಳೆ ಸಾಧ್ಯತೆ

ನವದೆಹಲಿ: ಒಡಿಶಾ, ಅರುಣಾಚಲ ಪ್ರದೇಶ, ಅಸ್ಸಾಂ ಮತ್ತು ಮೇಘಾಲಯದ ಕೆಲವು ಸ್ಥಳಗಳಲ್ಲಿ ಇಂದು ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ ಬುಧವಾರ ತಿಳಿಸಿದೆ.

ಮಧ್ಯ ಮಹಾರಾಷ್ಟ್ರ, ಕರಾವಳಿ ಆಂಧ್ರಪ್ರದೇಶ, ತೆಲಂಗಾಣ, ರಾಯಲಸೀಮೆ, ಉತ್ತರ ಮತ್ತು ಕರ್ನಾಟಕದ ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ದಿನವಿಡೀ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತನ್ನ ಹವಾಮಾನ ಎಚ್ಚರಿಕೆ ಬುಲೆಟಿನ್ ನಲ್ಲಿ ತಿಳಿಸಿದೆ.

ಅಲ್ಲದೆ, ಮುಂದಿನ 24 ಗಂಟೆಗಳಲ್ಲಿ ಪರ್ಯಾಯ ದ್ವೀಪ ಭಾರತ ಮತ್ತು ಈಶಾನ್ಯ ಭಾರತದ ಲ್ಲಿ ಗುಡುಗು-ಮಿಂಚು ಸಹಿತ ಭಾರಿ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಛತ್ತೀಸ್‌ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಒಡಿಶಾದಲ್ಲಿಯೂ ಮಳೆ ಆಗುವ ಸಾಧ್ಯತೆಯಿದೆ. 

ಮುಂಬೈನಲ್ಲಿಂದು ಗುಡುಗು ಮಿಂಚಿನೊಂದಿಗೆ ಮಳೆಯಾಗಲಿದ್ದು, ದೆಹಲಿಯಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.