ಒಡಿಸ್ಸಾಗೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರಕ್ಕೆ ಸಿಎಂ ನವೀನ್ ಪಟ್ನಾಯಕ್ ಆಗ್ರಹ

ಫೋನಿ ಚಂಡಮಾರುತದ ಪರಿಣಾಮವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಒಡಿಸ್ಸಾ ರಾಜ್ಯಕ್ಕೆ ಕೇಂದ್ರದ ವಿಶೇಷ ಆರ್ಥಿಕ ಸ್ಥಾನಮಾನ ನೀಡಬೇಕೆಂದು ಸಿಎಂ ನವೀನ ಪಟ್ನಾಯಕ್ ಆಗ್ರಹಿಸಿದ್ದಾರೆ.ಓಡಿಸ್ಸಾ ಪ್ರತಿವರ್ಷ ಒಂದಿಲ್ಲೊಂದು ನೈಸರ್ಗಿಕ ವಿಕೋಪವನ್ನು ಎದುರಿಸುತ್ತಲೇ ಇರುವುದರಿಂದ ಕೇಂದ್ರ ಸರ್ಕಾರವು ರಾಜ್ಯಕ್ಕೆ ಶಾಶ್ವತ ನೆರವು ನೀಡುವ ನಿಟ್ಟಿನಲ್ಲಿ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.

Last Updated : May 12, 2019, 05:29 PM IST
ಒಡಿಸ್ಸಾಗೆ ವಿಶೇಷ ಸ್ಥಾನಮಾನ ನೀಡಲು ಕೇಂದ್ರಕ್ಕೆ ಸಿಎಂ ನವೀನ್ ಪಟ್ನಾಯಕ್  ಆಗ್ರಹ  title=
file photo

ನವದೆಹಲಿ: ಫೋನಿ ಚಂಡಮಾರುತದ ಪರಿಣಾಮವಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಒಡಿಸ್ಸಾ ರಾಜ್ಯಕ್ಕೆ ಕೇಂದ್ರದ ವಿಶೇಷ ಆರ್ಥಿಕ ಸ್ಥಾನಮಾನ ನೀಡಬೇಕೆಂದು ಸಿಎಂ ನವೀನ ಪಟ್ನಾಯಕ್ ಆಗ್ರಹಿಸಿದ್ದಾರೆ.ಓಡಿಸ್ಸಾ ಪ್ರತಿವರ್ಷ ಒಂದಿಲ್ಲೊಂದು ನೈಸರ್ಗಿಕ ವಿಕೋಪವನ್ನು ಎದುರಿಸುತ್ತಲೇ ಇರುವುದರಿಂದ ಕೇಂದ್ರ ಸರ್ಕಾರವು ರಾಜ್ಯಕ್ಕೆ ಶಾಶ್ವತ ನೆರವು ನೀಡುವ ನಿಟ್ಟಿನಲ್ಲಿ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.

ಫೋನಿ ಚಂಡಮಾರುತದ ನಂತರ ಇದೇ ಮೊದಲ ಬಾರಿಗೆ ಪಿಟಿಐಗೆ ನೀಡಿರುವ ಸಂದರ್ಶನದಲ್ಲಿ ನವೀನ ಪಟ್ನಾಯಕ್ ಮಾತನಾಡಿ " ಕೇಂದ್ರ ಸರ್ಕಾರದ ಮುಂದಿರುವ ನಮ್ಮ ಪ್ರಮುಖ ಬೇಡಿಕೆಗಳಲ್ಲಿ ಇದು ಒಂದು, ಒಡಿಶಾ ಪ್ರತಿ ವರ್ಷವೂ ನೈಸರ್ಗಿಕ ವಿಕೋಪಗಳನ್ನು ಎದುರಿಸುತ್ತಿದೆ. ಕೇಂದ್ರದಿಂದ ನಾವು ಪಡೆಯುವ ನೆರವು ಹೆಚ್ಚಾಗಿ ಮೂಲಭೂತ ಸೌಕರ್ಯಗಳ ತಾತ್ಕಾಲಿಕ ಪುನಃಸ್ಥಾಪನೆಯಾಗಿದೆ. ನಾವು ರಾಜ್ಯದ ಸ್ವಂತ ನಿಧಿಯಿಂದ ದೀರ್ಘ ಅವಧಿಗೆ ಸಾಕಷ್ಟು ಹಣವನ್ನು ಖರ್ಚು ಮಾಡಬೇಕು," ಎಂದು ಪಟ್ನಾಯಕ್ ಸಂದರ್ಶನವೊಂದರಲ್ಲಿ ತಿಳಿಸಿದರು.

"ಕಳೆದ ಐದು ವರ್ಷಗಳಲ್ಲಿ ನಾವು ಫೀಲಿನ್, ಹುದುದ್, ಟಿಟ್ಲಿ ಮತ್ತು ಈಗ ಫೋನಿಯನ್ನು ಹೊಂದಿದ್ದೇವೆ. ಇದಲ್ಲದೆ, ನಾವು ಭಾರೀ ಪ್ರಮಾಣದ ಪ್ರವಾಹವನ್ನು ಹೊಂದಿದ್ದೇವೆ. ಆದ್ದರಿಂದ ಈ ಕಾರಣಕ್ಕಾಗಿ ಹಣಕಾಸು ಒತ್ತಡವನ್ನು ನಿಭಾಯಿಸಲು ರಾಜ್ಯಕ್ಕೆ ವಿಶೇಷ ಆರ್ಥಿಕ ಸ್ಥಾನಮಾನ ಆಗತ್ಯವೆಂದು ಅವರು ಹೇಳಿದರು.

ಸೈಕ್ಲೋನ್ ಫೋನಿ ಕರಾವಳಿ ಪ್ರದೇಶದಲ್ಲಿರುವ ಜಿಲ್ಲೆಗಳಲ್ಲಿ ಸುಮಾರು 41 ಜನರನ್ನು ಬಲಿ ತೆಗೆದುಕೊಂಡಿದ್ದಲ್ಲದೆ ಸಾಕಷ್ಟು ಪ್ರಮಾಣದಲ್ಲಿ ಹಾನಿ ಸಂಭವಿಸಿತ್ತು  ಈ ಹಿನ್ನಲೆಯಲ್ಲಿ ರಾಜ್ಯದ ವಿಶೇಷ ಬೆಳವಣಿಗೆಯ ನಿಟ್ಟಿನಲ್ಲಿ ಆರ್ಥಿಕ ಸ್ಥಾನ ಮಾನ ಅಗತ್ಯವೆನ್ನಲಾಗಿದೆ.

Trending News