Hdfc Bank Loot : ಹಾಡುಹಗಲಲ್ಲೇ HDFC ಬ್ಯಾಂಕ್ ನಿಂದ ಒಂದು ಕೋಟಿ ನಗದು ದರೋಡೆ

ಬಿಹಾರದ ಹಾಜಿಪುರದಲ್ಲಿ ಹಾಡಹಗಲಲ್ಲಿಯೇ ಬ್ಯಾಂಕ್ ದರೋಡೆ ನಡೆದಿದೆ.

Written by - Ranjitha R K | Last Updated : Jun 10, 2021, 03:07 PM IST
  • ಹಾಡಹಗಲಲ್ಲಿಯೇ ನಡೆಯಿತು ಬ್ಯಾಂಕ್ ದರೋಡೆ
  • ಹೆಚ್ ಡಿಎಫ್ ಸಿ ಬ್ಯಾಂಕ್ ನಲ್ಲಿ ದರೋಡೆ
  • 6 ಜನ ದರೋಡೆಕೋರರಿಂದ ಕೃತ್ಯ
 Hdfc Bank Loot : ಹಾಡುಹಗಲಲ್ಲೇ  HDFC  ಬ್ಯಾಂಕ್ ನಿಂದ ಒಂದು ಕೋಟಿ ನಗದು ದರೋಡೆ title=
ಹಾಡಹಗಲಲ್ಲಿಯೇ ನಡೆಯಿತು ಬ್ಯಾಂಕ್ ದರೋಡೆ (photo zee news)

ಪಾಟ್ನಾ: ಬಿಹಾರದ ಹಾಜಿಪುರದಲ್ಲಿ ಹಾಡಹಗಲಲ್ಲಿಯೇ ಬ್ಯಾಂಕ್ ದರೋಡೆ ನಡೆದಿದೆ. ವೈಶಾಲಿ ಜಿಲ್ಲೆಯ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಜಧುವ ಎಚ್‌ಡಿಎಫ್‌ಸಿ ಬ್ಯಾಂಕ್‌ ನಲ್ಲಿ (HDFC Bank) ಹಗಲು ಹೊತ್ತಿನಲ್ಲಿ ಒಂದು ಕೋಟಿ ರೂಪಾಯಿಗಳ ದರೋಡೆ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. 

ನಾಕಾಬಂದಿ ಮೂಲಕ ತನಿಖೆ :
ಬೈಕ್‌ನಲ್ಲಿ ಬಂದ ಆರಕ್ಕೂ ಹೆಚ್ಚು ಜನರ ಗುಂಪು ಈ ಕೃತ್ಯ ಎಸಗಿದೆ. ಹಾಡಹಗಲಲ್ಲಿಯೇ ಬ್ಯಾಂಕ್ ಗೆ ನುಗ್ಗಿದ ಶಸ್ತ್ರಧಾರಿ ದರೋಡೆಕೋರರು, ಈ ಕೃತ್ಯ ಎಸಗಿದ್ದಾರೆ.  ಘಟನೆಯ ನಂತರ, ಸ್ಥಳಕ್ಕೆ ಧಾವಿಸಿರುವ ಪೊಲೀಸರು (Police) ತನಿಖೆ ನಡೆಸುತ್ತಿದ್ದಾರೆ. ಸ್ಥಳದಲ್ಲಿ ನಾಕಾ ಬಂದಿ ಹಾಕಿರುವ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ. ಅಲ್ಲದೆ ಸಮೀಪದ ಕಟ್ಟಡ, ಮಳಿಗೆಗಳಲ್ಲಿರುವ ಸಿಸಿಟಿವಿ (CCTV) ಕ್ಯಾಮೆರಾಗಳ ತುಣುಕನ್ನು ಪರಿಶೀಲಿಸಲಾಗುತ್ತಿದೆ.

ಇದನ್ನೂ ಓದಿ : Mumbai: ಭಾರಿ ಮಳೆಯಿಂದಾಗಿ ಧರೆಗುರುಲಿದ ನಾಲ್ಕು ಅಂತಸ್ತಿನ ಕಟ್ಟಡ, 11 ಮಂದಿ ಮೃತ, ಹಲವರಿಗೆ ಗಾಯ

ದರೋಡೆ ಮೊತ್ತ : 
ಮೂಲಗಳ ಪ್ರಕಾರ, ಎಚ್‌ಡಿಎಫ್‌ಸಿ ಬ್ಯಾಂಕಿನಿಂದ (HDFC) ಸುಮಾರು ಒಂದು ಕೊಟಿ ರೂಪಾಯಿಗಳ ದರೋಡೆ ನಡೆದಿದೆ ಎನ್ನಲಾಗಿದೆ. ಆದರೆ ಇ ಬಗ್ಗೆ ಬ್ಯಾಂಕ್ (Bank) ಸಿಬ್ಬಂದಿಯಾಗಲೀ, ಅಧಿಕಾರಿಗಳಾಗಲೀ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಮೂಲಗಳ ಪ್ರಕಾರ ದರೋಡೆಯಾದ ಮೊತ್ತ ಒಂದು ಕೋಟಿ ಎನ್ನಲಾಗಿದೆ. 

ದರೋಡೆ ನಡೆದಿರುವ ಎಚ್‌ಡಿಎಫ್‌ಸಿ ಬ್ಯಾಂಕಿನ (HDFC Bank)  ಶಾಖೆಯು ಬಿಜೆಪಿ ಮುಖಂಡ ಮತ್ತು ಕೇಂದ್ರ ಸಚಿವ ನಿತ್ಯಾನಂದ್ ರಾಯ್ (Nityanand Rai)  ಅವರ ಮನೆಯ ಸಮೀಪದಲ್ಲಿದೆ. 

ಇದನ್ನೂ ಓದಿ : ಪೊಲೀಸ್ ಶೂಟೌಟ್‌ನಲ್ಲಿ ಜೈಪಾಲ್ ಭುಲ್ಲರ್ ಹತ್ಯೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News