ಪ್ರಧಾನಿ ಮೋದಿ ತ್ರಿವಳಿ ಘೋಷಣೆಗಳನ್ನು ಸ್ವಾಗತಿಸಿದ ಪಿ.ಚಿದಂಬರಂ

ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಶುಕ್ರವಾರದಂದು ಸ್ವಾತಂತ್ರೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಮೂರು ಘೋಷಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Last Updated : Aug 16, 2019, 06:51 PM IST
ಪ್ರಧಾನಿ ಮೋದಿ ತ್ರಿವಳಿ ಘೋಷಣೆಗಳನ್ನು ಸ್ವಾಗತಿಸಿದ ಪಿ.ಚಿದಂಬರಂ title=
file photo

ನವದೆಹಲಿ: ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಶುಕ್ರವಾರದಂದು ಸ್ವಾತಂತ್ರೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ ಮೂರು ಘೋಷಣೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ಮೋದಿ ಆಗಸ್ಟ್ 15 ರಂದು ತಮ್ಮ ಭಾಷಣದಲ್ಲಿ ಜನಸಂಖ್ಯಾ ನಿಯಂತ್ರಣ, ಬಂಡವಾಳ ಸೃಷ್ಟಿ ಕರ್ತರ ಬಗೆಗಿನ ಗೌರವ ಮತ್ತು ಪ್ಲಾಸ್ಟಿಕ್ ನಿಯಂತ್ರಣದ ಬಗ್ಗೆ ಪ್ರಸ್ತಾಪಿಸಿದ್ದರು.

ಈಗ ಪಿ ಚಿದಂಬರಂ ತಮ್ಮ ಸರಣಿ ಟ್ವೀಟ್ ಗಳಲ್ಲಿ ಪ್ರಧಾನಿ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 'ನಾವೆಲ್ಲರೂ ಕೂಡ ಸ್ವಾತಂತ್ರೋತ್ಸವ ದಿನದಂದು ಪ್ರಧಾನಿ ಘೋಷಿಸಿದ ಮೂರು ಘೋಷಣೆಗಳನ್ನು ಸ್ವಾಗತಿಸಬೇಕು.ಈ ಮೂರು ಘೋಷಣೆಗಳಲ್ಲಿ ಬಂಡವಾಳ ಸೃಷ್ಟಿಕರ್ತರ ಬಗೆಗಿನ ಘೋಷಣೆ ಬಗ್ಗೆ ಹಣಕಾಸು ಸಚಿವರು ಮತ್ತು ತೆರಿಗೆ ಅಧಿಕಾರಿಗಳು ಕೇಳಿಸಿಕೊಂಡಿರುತ್ತಾರೆ ಎಂದು ಭಾವಿಸಿರುವುದಾಗಿ ಅವರು ಹೇಳಿದರು.

ಪ್ರಧಾನಿ ಮೋದಿ ಆಗಸ್ಟ್ 15 ರಂದು ಸ್ವಾತಂತ್ರೋತ್ಸವದ ದಿನ ಪ್ರಯುಕ್ತ ತಮ್ಮ ಭಾಷಣದಲ್ಲಿ ಏಕ-ಬಳಕೆಯ ಪ್ಲಾಸ್ಟಿಕ್ ತ್ಯಜಿಸುವಿಕೆ, ಬಂಡವಾಳ ಸೃಷ್ಟಿಕರ್ತರನ್ನು ಗೌರವಿಸುವುದು, ಚಿಕ್ಕ ಕುಟುಂಬವನ್ನು ಹೊಂದುವುದು ದೇಶ ಪ್ರೇಮದ ಕರ್ತವ್ಯ ಎಂದು ಪ್ರಸ್ತಾಪಿಸಿದ್ದರು.

Trending News