ಪದ್ಮಾವತ್ ಹಾಡಿನೊಂದಿಗೆ ಇಸ್ರೇಲ್ ಪ್ರಧಾನಿಗೆ ಸ್ವಾಗತ!

    

Last Updated : Jan 18, 2018, 01:40 PM IST
ಪದ್ಮಾವತ್ ಹಾಡಿನೊಂದಿಗೆ ಇಸ್ರೇಲ್ ಪ್ರಧಾನಿಗೆ ಸ್ವಾಗತ! title=

ನವದೆಹಲಿ: ಬಿಜೆಪಿ ಆಡಳಿತದ ರಾಜ್ಯದಲ್ಲಿ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಸಿನೆಮಾಗೆ ತಡೆ ನೀಡುತ್ತಿರುವ ಸಂದರ್ಭದಲ್ಲಿ ಗುಜರಾತ್ ಅಹ್ಮದಾಬಾದ್ ನಲ್ಲಿ ಭಾರತದ ಪ್ರವಾಸದಲ್ಲಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್  ನೆತಾನ್ಯಹುರನ್ನು ಪದ್ಮಾವತ್ ಚಿತ್ರದಲ್ಲಿರುವ ಘೂಮಾರ್ ಚಿತ್ರದ ಹಾಡಿನ ಮೂಲಕ ಸ್ವಾಗತ ಕೊರಲಾಯಿತು.

ಈ ಸಂದರ್ಭದಲ್ಲಿ ಈ ಹಾಡಿಗೆ ಬಾಲಕಿಯೊಬ್ಬಳು ನೀಡಿದ ಪ್ರದರ್ಶನದ ವಿಡಿಯೋ ಸಾಮಾಜಿಕ ಜಾಲತಾಣವಾದ ಟ್ವಿಟ್ಟರ್ ನಲ್ಲಿ ವೈರಲ್ ಆಗಿದೆ. ಇತ್ತೀಚಿಗೆ ಬಿಜೆಪಿ ಆಡಳಿತದ ರಾಜ್ಯಗಳಾದ ಮಧ್ಯಪ್ರದೇಶ, ಹರ್ಯಾಣ,ರಾಜಸ್ತಾನಗಳಲ್ಲಿ ಈ ಚಿತ್ರವನ್ನು ಬಿಡುಗಡೆ ಮಾಡುವುದಿಲ್ಲ ಎಂದು ಪಟ್ಟು ಹಿಡಿದ್ದವು. ರಾಜಸ್ತಾನ ಸರಕಾರವಂತೂ ಒಂದು ಹೆಜ್ಜೆ ಮುಂದೆ ಹೋಗಿ ಅಧಿಕೃತವಾಗಿ ಈ ಚಿತ್ರವನ್ನು ಬ್ಯಾನ್ ಮಾಡಲು ನೋಟಿಸ್ ಜಾರಿ ಮಾಡಿದ್ದನ್ನು ನಾವು ಗಮನಿಸಬಹುದು.

Trending News