ಕೊರೊನಾ ನಿಭಾಯಿಸುವಲ್ಲಿ ಮೋದಿ ಸರ್ಕಾರ ವಿಫಲ, ಪಾಕ್ ನಮಗಿಂತಲೂ ಉತ್ತಮವಾಗಿ ನಿರ್ವಹಿಸಿದೆ - ಶಶಿ ತರೂರ್

ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ವಾಗ್ದಾಳಿ ನಡೆಸಿದ್ದಾರೆ ಮತ್ತು ಕೊರೊನಾ ನಿಯಂತ್ರಿಸುವಲ್ಲಿ ಪಾಕಿಸ್ತಾನ ಭಾರತಕ್ಕಿಂತ ಉತ್ತಮ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ.

Last Updated : Oct 18, 2020, 11:43 AM IST
ಕೊರೊನಾ ನಿಭಾಯಿಸುವಲ್ಲಿ ಮೋದಿ ಸರ್ಕಾರ ವಿಫಲ, ಪಾಕ್ ನಮಗಿಂತಲೂ ಉತ್ತಮವಾಗಿ ನಿರ್ವಹಿಸಿದೆ - ಶಶಿ ತರೂರ್  title=
file photo

ನವದೆಹಲಿ: ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿಭಾಯಿಸುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ವಾಗ್ದಾಳಿ ನಡೆಸಿದ್ದಾರೆ ಮತ್ತು ಕೊರೊನಾ ನಿಯಂತ್ರಿಸುವಲ್ಲಿ ಪಾಕಿಸ್ತಾನ ಭಾರತಕ್ಕಿಂತ ಉತ್ತಮ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ.

ಭಾರತದಲ್ಲಿ 7.49 ಮಿಲಿಯನ್ ಗೂ ಅಧಿಕ ಕೊರೊನಾ ಪ್ರಕರಣ ದಾಖಲು

ಲಾಹೋರ್ ಸಾಹಿತ್ಯ ಉತ್ಸವದಲ್ಲಿ ಮಾತನಾಡುತ್ತಾ ತರೂರ್ ಈ ಹೇಳಿಕೆಯನ್ನು ನೀಡಿದ್ದಾರೆ "ಭಾರತ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿಲ್ಲ ಮತ್ತು ಜನರು ಇದನ್ನು ಅರಿತುಕೊಂಡಿದ್ದಾರೆ.COVID-19 ಅನ್ನು ಗಂಭೀರವಾಗಿ ಪರಿಗಣಿಸಬೇಕು, ಇಲ್ಲದಿದ್ದರೆ ಭಾರತವು ಆರ್ಥಿಕ ದುರಂತವನ್ನು ಎದುರಿಸಬೇಕಾಗುತ್ತದೆ ಎಂದು ರಾಹುಲ್ ಗಾಂಧಿ ಫೆಬ್ರವರಿಯ ಹಿಂದೆಯೇ ಪ್ರಸ್ತಾಪಿಸಿದ್ದಾರೆ.ಮುಸ್ಲಿಮರ ವಿರುದ್ಧದ ಧರ್ಮಾಂಧತೆ ಮತ್ತು ತಾರತಮ್ಯವನ್ನು ಸಮರ್ಥಿಸುವ ಸಲುವಾಗಿ ಮೋದಿ ಸರ್ಕಾರವು ತಬ್ಲೀಘಿ ಜಮಾಅತ್ ಅನ್ನು ದೂಷಿಸುತ್ತಿದೆ ಎಂದು ತರೂರ್ ಆರೋಪಿಸಿದರು.

ಏತನ್ಮಧ್ಯೆ, ಭಾರತದಲ್ಲಿ ಕರೋನವೈರಸ್ ಪ್ರಕರಣಗಳ ಸಂಖ್ಯೆ ಭಾನುವಾರ 75 ಲಕ್ಷಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 61,871 ಹೊಸ ಸೋಂಕುಗಳು ವರದಿಯಾಗಿವೆ. ಆರೋಗ್ಯ ಸಚಿವಾಲಯದ ಮಾಹಿತಿಯ ಪ್ರಕಾರ, ದೇಶದ ಒಟ್ಟು ಕರೋನವೈರಸ್ ಸಂಖ್ಯೆ 74,94,551 ಆಗಿದೆ. ಪ್ರಕರಣಗಳ ಸಂಖ್ಯೆಯು ಶನಿವಾರದಿಂದ 11,776 ರಷ್ಟು ಕುಸಿದಿದೆ.

Trending News