ನವದೆಹಲಿ : ಭಾರತದ ನಡೆಯಿಂದ ನೆರೆಯ ರಾಷ್ಟ್ರ ಪಾಕಿಸ್ತಾನ ಮತ್ತೊಮ್ಮೆ ಬೆಚ್ಚಿ ಬಿದ್ದಿದೆ. ಇತ್ತೀಚೆಗೆ ಆರಂಭಿಸಿದ ಶ್ರೀನಗರ-ಶಾರ್ಜಾ ವಿಮಾನಗಳನ್ನು ತನ್ನ ವಾಯುಪ್ರದೇಶದ ಮೂಲಕ ಹಾದುಹೋಗುವುದನ್ನು ಪಾಕಿಸ್ತಾನ (Pakistan) ನಿಷೇಧಿಸಿದೆ. ಈ ಹಿನ್ನೆಲೆಯಲ್ಲಿ ಶ್ರೀನಗರದಿಂದ ಶಾರ್ಜಾಕ್ಕೆ ಹಾರುವ ವಿಮಾನಗಳು (Srinagar-Sharjah Flight) ಉದಯಪುರ ಮತ್ತು ಅಹಮದಾಬಾದ್ ಮೂಲಕ ಹಾದು ಹೋಗಬೇಕಾಗುತ್ತದೆ. ಇದರಿಂದ ಈ ಪ್ರಯಾಣ ಒಂದೂವರೆ ಗಂಟೆ ಅಧಿಕವಾಗಲಿದೆ ಅಲ್ಲದೆ, ಆರ್ಥಿಕ ಹೊರೆ ಹೆಚ್ಚಲಿದೆ.
ಪಾಕಿಸ್ತಾನದ ವಿರುದ್ಧ ಒಮರ್ ಅಬ್ದುಲ್ಲಾ ತೀವ್ರ ಆಕ್ರೋಶ :
ಪಾಕಿಸ್ತಾನದ ಈ ನಡೆಯನ್ನು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ (Omar Abdullah) ಖಂಡಿಸಿದ್ದಾರೆ. ಟ್ವೀಟ್ ಮಾಡಿರುವ ಅವರು, ಇದು ಅತ್ಯಂತ ದುರದೃಷ್ಟಕರ. 2009-2010ರಲ್ಲಿ ಶ್ರೀನಗರದಿಂದ ದುಬೈ ನಡುವಿನ ವಿಮಾನ ಹಾರಾಟದ ವೇಳೆಯೂ, ಪಾಕಿಸ್ತಾನ ಇದೇ ರೀತಿ ಮಾಡಿತ್ತು. ಪಾಕಿಸ್ತಾನದ ವಾಯುಪ್ರದೇಶದ ಮೇಲೆ ಗೋ ಫಸ್ಟ್ ವಿಮಾನ (Go flight) ಹಾರಾಟಕ್ಕೆ ಅನುಮತಿ ನೀಡಿರುವುದು ಉತ್ತಮ ಸಂಬಂಧಗಳ ಸಂಕೇತ ಎಂದು ನಾನು ನಿರೀಕ್ಷಿಸಿದ್ದೆ, ಆದರೆ ಅದು ಹಾಗಾಗಲಿಲ್ಲ ಎಂದು ಬರೆದಿದ್ದಾರೆ.
Very unfortunate. Pakistan did the same thing with the Air India Express flight from Srinagar to Dubai in 2009-2010. I had hoped that @GoFirstairways being permitted to overfly Pak airspace was indicative of a thaw in relations but alas that wasn’t to be. https://t.co/WhXzLbftxf
— Omar Abdullah (@OmarAbdullah) November 3, 2021
ಪಾಕಿಸ್ತಾನ ತಲ್ಲಣ:
ಪಾಕಿಸ್ತಾನವು (Pakistan) ತನ್ನ ವಾಯುಪ್ರದೇಶದ ಮೂಲಕ ವಿಮಾನಗಳನ್ನು ಹಾದುಹೋಗಲು ನಿರಾಕರಿಸುವ ಮೂಲಕ ಅಂತರರಾಷ್ಟ್ರೀಯ ವಿಮಾನಯಾನ ನಿಯಮಗಳನ್ನು ನೇರವಾಗಿ ಉಲ್ಲಂಘಿಸಿದೆ. ಶ್ರೀನಗರದಿಂದ ಶಾರ್ಜಾಕ್ಕೆ ಆರಂಭವಾದ ಈ ವಿಮಾನ ಸೇವೆಯ ಹೆಚ್ಚಿನ ಪ್ರಯೋಜನವನ್ನು ಕಾಶ್ಮೀರದ ಜನರು ಪಡೆಯುತ್ತಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಪಾಕಿಸ್ತಾನದ ನಿರಾಕರಣೆ ನಂತರ, ಶಾರ್ಜಾಕ್ಕೆ ಹೋಗುವ ವಿಮಾನಗಳು (Srinagar-Sharjah Flight) ಉದಯಪುರ, ಅಹಮದಾಬಾದ್ ಮತ್ತು ಓಮನ್ ಮೂಲಕ ಹೋಗುತ್ತವೆ. ಇದರಿಂದ ವಿಮಾನ ಪ್ರಯಾಣದ ಸಮಯ ಹೆಚ್ಚಾಗಲಿದೆ.
ವಿವಾದ ಹೆಚ್ಚಾಗಲು ಕಾರಣ :
ಗೃಹ ಸಚಿವ ಅಮಿತ್ ಶಾ (Amit Shah), ತಮ್ಮ ಜಮ್ಮು-ಶ್ರೀನಗರ ಪ್ರವಾಸದ ಸಂದರ್ಭದಲ್ಲಿ ಅಕ್ಟೋಬರ್ 23 ರಂದು ಈ ವಿಮಾನ ಸೇವೆಗೆ ಚಾಲನೆ ನೀಡಿದ್ದರು. ಅಂದಿನಿಂದ ವಿವಾದ ಉಲ್ಬಣಗೊಂಡಿದೆ. ಭಾರತ ಸರ್ಕಾರ ಮತ್ತು ದುಬೈ ನಡುವಿನ ಒಪ್ಪಂದದ ನಂತರ, ಶ್ರೀನಗರ-ಶಾರ್ಜಾ ವಿಮಾನ ಸೇವೆಯನ್ನು ನೇರವಾಗಿ ಪ್ರಾರಂಭಿಸಲಾಯಿತು. ಆದರೆ ಪಾಕಿಸ್ತಾನದ ವಾಯುಪ್ರದೇಶವನ್ನು (Pak Airspace) ಬಳಸುವ ಮೊದಲು ಪಾಕಿಸ್ತಾನದಿಂದ ಅನುಮತಿ ಪಡೆದುಕೊಂಡಿಲ್ಲ ಎನ್ನುವುದು ಅದರ ಅಸಮಾಧಾನ.
ಇದನ್ನೂ ಓದಿ :ದೀಪಾವಳಿಗೂ ಮುನ್ನ ಸಿಎಂ ಕೇಜ್ರಿವಾಲ್ ಭರ್ಜರಿ ಗಿಫ್ಟ್, ದೆಹಲಿ ನಿವಾಸಿಗಳಿಗೆ ಆಗಲಿದೆ ಲಾಭ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.