ಪಂಜಾಬ್‌ನ ಪಟಿಯಾಲದಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾಚಾರ, ಖಲಿಸ್ತಾನ್ ಜಿಂದಾಬಾದ್ ಘೋಷಣೆ

Patiala Violence: ಪಂಜಾಬ್‌ನ ಪಟಿಯಾಲದಲ್ಲಿ ಮೆರವಣಿಗೆ ವೇಳೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿರುವ ಬಗ್ಗೆಯೂ ವರದಿಯಾಗಿದೆ.  

Written by - Ranjitha R K | Last Updated : Apr 29, 2022, 02:49 PM IST
  • ಮೆರವಣಿಗೆ ವೇಳೆ ಎರಡು ಸಮುದಾಯಗಳ ನಡುವೆ ಘರ್ಷಣೆ
  • ಮೆರವಣಿಗೆಯಲ್ಲಿ ಖಾಲಿಸ್ತಾನ್ ಜಿಂದಾಬಾದ್ ಘೋಷಣೆ
  • ಗಾಳಿಯಲ್ಲಿ ಗೂಡು ಹಾರಿಸಿದ ಪೊಲೀಸರು
 ಪಂಜಾಬ್‌ನ ಪಟಿಯಾಲದಲ್ಲಿ ಎರಡು ಸಮುದಾಯಗಳ ನಡುವೆ ಹಿಂಸಾಚಾರ, ಖಲಿಸ್ತಾನ್ ಜಿಂದಾಬಾದ್ ಘೋಷಣೆ  title=
Patiala Violence (photo zee news)

 ನವದೆಹಲಿ : Patiala Violence: ಪಂಜಾಬ್‌ನ ಪಟಿಯಾಲದಲ್ಲಿ ಮೆರವಣಿಗೆ ವೇಳೆ  ಎರಡು ಸಮುದಾಯಗಳ ನಡುವೆ ಹಿಂಸಾತ್ಮಕ ಘರ್ಷಣೆಗಳು ಸಂಭವಿಸಿವೆ. ಈ ವೇಳೆ ಪೊಲೀಸರ ಮೇಲೂ ಕಲ್ಲು ತೂರಾಟ ನಡೆದಿದೆ. ಮಾಹಿತಿ ಪ್ರಕಾರ, ಶಿವಸೇನೆಯ ಪಾದಯಾತ್ರೆಗೆ ಸಂಬಂಧಿಸಿದಂತೆ ಘರ್ಷಣೆ ಉಂಟಾಗಿದೆ. ಮೆರವಣಿಗೆಯಲ್ಲಿ ಖಾಲಿಸ್ತಾನ್ ಜಿಂದಾಬಾದ್ ಎಂಬ ಘೋಷಣೆಗಳೂ ಮೊಳಗಿವೆ.  ಈ ಘಟನೆಯಲ್ಲಿ ಹಲವು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಶಿವಸೈನಿಕರು ಖಾಲಿಸ್ತಾನದ ವಿರುದ್ಧ ಮೆರವಣಿಗೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಖಲಿಸ್ತಾನ್ ಬೆಂಬಲಿಗರು ಈ ಮೆರವಣಿಗೆಯನ್ನು ವಿರೋಧಿಸಿದ್ದಾರೆ. ಕೂಡಲೇ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆಡಿದೆ. ಕೆಲವು ಖಲಿಸ್ತಾನಿ ಬೆಂಬಲಿಗರು ಲಂಗರ್ ಭವನವನ್ನು ಹತ್ತಿ ಕಲ್ಲು ತೂರಾಟ ನಡೆಸಿದ್ದಾರೆ. 

ಇದನ್ನೂ ಓದಿ : ಮನೆಯಲ್ಲಿಯೇ ಕುಳಿತು ಇನ್ಮುಂದೆ ಈ ಅಂಚೆ ಸೌಲಭ್ಯ ಪಡೆಯಬಹುದು...!

ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹಲವು ಬಾರಿ ಗಾಳಿಯಲ್ಲಿ  ಗುಂಡು ಹಾರಿಸಿದ್ದಾರೆ. ಒಂದು ಸಂಘಟನೆ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರೆ, ಇನ್ನೊಂದು ಸಂಘಟನೆ ಪೊಲೀಸರ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದೆ ಎಂದು ಹೇಳಲಾಗುತ್ತಿದೆ.

ಮಾಹಿತಿಯ ಪ್ರಕಾರ, ಎರಡೂ ಸಂಘಟನೆಗಳು ಫವ್ವಾರಾ ಚೌಕ್ ಕಡೆಗೆ ಮೆರವಣಿಗೆಯ ರೂಪದಲ್ಲಿ ಹೋಗಲು ಪ್ರಯತ್ನಿಸುತ್ತಿದ್ದವು. ಆದರೆ ಅಲ್ಲಿಗೆ ಹೋಗಲು ಎರಡು ಸಮುದಾಯಕ್ಕೂ ಅನುಮತಿ ಇರಲಿಲ್ಲ ಎನ್ನಲಾಗಿದೆ. ಈ ಗಲಾಟೆಯಲ್ಲಿ ಎಸ್‌ಎಚ್‌ಒ ಗಾಯಗೊಂಡಿರುವ ಬಗ್ಗೆಯೂ ವರದಿಯಾಗಿದೆ. ಅಲ್ಲದೆ, ಮೂರ್ನಾಲ್ಕು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ : Weather Update today : ಮುಂದಿನ 4 ದಿನಗಳವರೆಗೆ 'ಬೆಂಕಿ' ಮಳೆ! 12 ವರ್ಷಗಳ ದಾಖಲೆಯನ್ನು ಮುರಿಯಲಿರುವ ಬಿಸಿಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News