ಕಾಶ್ಮೀರದಲ್ಲಿ ಪೋಲಿಸ್ ಎನ್ಕೌಂಟರ್ ಗೆ ಉಗ್ರಗಾಮಿಯಾಗಿದ್ದ ಪಿಹೆಚ್ಡಿ ವಿದ್ಯಾರ್ಥಿ ಬಲಿ !

 ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಪಡೆದು ನಂತರ ಹಿಝ್ಬುಲ್ ಮುಜಾಹಿದೀನ್ ಸಂಘಟನೆಯಲ್ಲಿ ಭಯೋತ್ಪಾದಕನಾಗಿದ್ದ ಮನನ್ ಬಶೀರ್ ವಾನಿ ಉತ್ತರ ಕಾಶ್ಮೀರದ ಹಂದ್ವರಾ ಜಿಲ್ಲೆಯ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ ನಲ್ಲಿ ಮೃತಪಟ್ಟಿದ್ದಾರೆ.

Updated: Oct 11, 2018 , 06:05 PM IST
ಕಾಶ್ಮೀರದಲ್ಲಿ ಪೋಲಿಸ್ ಎನ್ಕೌಂಟರ್ ಗೆ ಉಗ್ರಗಾಮಿಯಾಗಿದ್ದ ಪಿಹೆಚ್ಡಿ ವಿದ್ಯಾರ್ಥಿ ಬಲಿ !

ನವದೆಹಲಿ: ಅಲಿಗಢ ಮುಸ್ಲಿಮ್ ವಿಶ್ವವಿದ್ಯಾನಿಲಯದಲ್ಲಿ ಪಿಎಚ್ಡಿ ಪಡೆದು ನಂತರ ಹಿಝ್ಬುಲ್ ಮುಜಾಹಿದೀನ್ ಸಂಘಟನೆಯಲ್ಲಿ ಭಯೋತ್ಪಾದಕನಾಗಿದ್ದ ಮನನ್ ಬಶೀರ್ ವಾನಿ ಉತ್ತರ ಕಾಶ್ಮೀರದ ಹಂದ್ವರಾ ಜಿಲ್ಲೆಯ ಭದ್ರತಾ ಪಡೆಗಳೊಂದಿಗೆ ನಡೆದ ಎನ್ಕೌಂಟರ್ ನಲ್ಲಿ ಮೃತಪಟ್ಟಿದ್ದಾರೆ.
 
ಈ ವರ್ಷದ ಜನವರಿಯಲ್ಲಿ ಅವರು  ಹಿಝ್ಬುಲ್ ಮುಜಾಹಿದೀನ್ ಉಗ್ರಗಾಮಿ ಸಂಘಟನೆಗೆ ಸೇರಿದ್ದರು ಎನ್ನಲಾಗಿದೆ. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭದ್ರತಾ ಪಡೆಗಳು ಮನನ್ ಬಶೀರ್ ವಾನಿ ಉಪಸ್ಥಿತಿಯ ಬಗ್ಗೆ ಖಚಿತ ಮಾಹಿತಿಯನ್ನು ಗುಪ್ತಚರ ಇಲಾಖೆ ಮೂಲಕ ಪಡೆದಿದ್ದರು.ಅಲ್ಲದೆ ಪೊಲೀಸರು ಅವರಿಗೆ ಶರಣಾಗಲು ಆದೇಶಿಸಿದ್ದರು ಆದರೆ ಇದನ್ನು ತಿರಸ್ಕರಿಸಿ ಪೋಲಿಸರತ್ತ ಗುಂಡಿನ ದಾಳಿ ನಡೆಸಿದ ಹಿನ್ನಲೆಯಲ್ಲಿ ಭದ್ರತಾ ಪಡೆಗಳು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ.

ಈಗ ಈ ಎನ್ಕೌಂಟರ್ ಬಗ್ಗೆ ಪ್ರತಿಕ್ರಿಯಿಸಿರುವ  ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಟ್ವೀಟ್ ನಲ್ಲಿ " ಇಂದು ಪಿಎಚ್ಡಿ ವಿದ್ಯಾರ್ಥಿಯನ್ನು ಎನ್ಕೌಂಟರ್ ಮೂಲಕ ಹತ್ಯೆಗೈಯಲಾಗಿದೆ.ಅವನ ಸಾವು ನಮ್ಮ ಸಾವು, ನಾವು ವಿದ್ಯಾವಂತ ಯುವಕರನ್ನು ಕಳೆದುಕೊಳ್ಳುತ್ತಿದ್ದೇವೆ.ಆದ್ದರಿಂದ ಇಂತಹ ರಕ್ತಸಿಕ್ತ ಪರಿಸ್ಥಿತಿಯನ್ನು ಅರಿತುಕೊಳ್ಳುವುದು ಎಲ್ಲ ರಾಜಕೀಯ ಪಕ್ಷಗಳಿಗೆ ಸೂಕ್ತವಾದ ಸಮಯ. ಆದ್ದರಿಂದ ಇಂತಹ ಸ್ಥಿತಿಯನ್ನು ಈಗ ಮಾತುಕತೆಯ ಮೂಲಕ ಪರಿಹರಿಸುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದ್ದಾರೆ.