PM Awas Yojana New Rules: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಈ ಹೊಸ ನಿಯಮ ನಿಮಗೂ ತಿಳಿದಿರಲಿ, ಇಲ್ದಿದ್ರೆ ಮನೆ ಹಂಚಿಕೆ ಕ್ಯಾನ್ಸಲ್

PM Awas Yojana: ಪ್ರಸ್ತುತ ಯಾವ ನಿವಾಸಗಳ ರಿಜಿಸ್ಟರ್ಡ್ ಅಗ್ರಿಮೆಂಟ್ ಟೂ ಲೀಜ್ ಘೋಶಿಸಲಾಗಿದೆಯೋ ಅಥವಾ ಭವಿಷ್ಯದಲ್ಲಿ ಅವುಗಳನ್ನು ಲೀಜ್ ಘೋಷಿಸಲು ನಿರ್ಧರಿಸಿದ್ದಾರೋ ಅದನ್ನು ನೋಂದಣಿ ಎಂದು ಪರಿಗಣಿಸಲಾಗದು.

Written by - Nitin Tabib | Last Updated : Sep 25, 2021, 09:06 PM IST
  • PM ಆವಾಸ್ ಅಡಿ ನಿಯಮಗಳಲ್ಲಿ ಬದಲಾವಣೆ.
  • ಇನ್ಮುಂದೆ ಐದು ವರ್ಷ ವಾಸಿಸುವುದು ಕಡ್ಡಾಯ, ಇಲ್ದಿದ್ರೆ ಸಿಗಲ್ಲ ಮನೆ.
  • ಫ್ಲಾಟ್ ಗಳು ಫ್ರೀ ಹೋಲ್ಡ್ ಆಗುವುದಿಲ್ಲ.
PM Awas Yojana New Rules: ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಈ ಹೊಸ ನಿಯಮ ನಿಮಗೂ ತಿಳಿದಿರಲಿ, ಇಲ್ದಿದ್ರೆ ಮನೆ ಹಂಚಿಕೆ ಕ್ಯಾನ್ಸಲ್ title=
PM Awas Yojana New Rules(File Photo)

ನವದೆಹಲಿ: PM Awas Yojana - ನೀವು ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳಾಗಿದ್ದರೆ, ನಿಮಗಾಗಿ ಮಹತ್ವದ ಸುದ್ದಿಯೊಂದು ಪ್ರಕಟವಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ನಿಮಗೂ ಒಂದು ವೇಳೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅಡಿ ನಿವಾಸ ಮಂಜೂರಾಗಿದ್ದರೆ (PM Awas Yojana Allocation), ಅದರಲ್ಲಿ ಐದು ವರ್ಷಗಳ ಕಾಲ ಉಳಿಯುವುದು ಕಡ್ಡಾಯವಾಗಿರುತ್ತದೆ ಅಥವಾ ನಿಮ್ಮ ಹಂಚಿಕೆಯನ್ನು ರದ್ದುಗೊಳಿಸಲಾಗುವುದು ಎಂದು ಹೇಳಲಾಗಿದೆ. ಪ್ರಸ್ತುತ ಯಾವ ನಿವಾಸಗಳ ರಿಜಿಸ್ಟರ್ಡ್ ಅಗ್ರಿಮೆಂಟ್ ಟೂ ಲೀಜ್ ಘೋಶಿಸಲಾಗಿದೆಯೋ ಅಥವಾ ಭವಿಷ್ಯದಲ್ಲಿ ಅವುಗಳನ್ನು ಲೀಜ್ ಘೋಷಿಸಲು ನಿರ್ಧರಿಸಿದ್ದಾರೋ ಅದನ್ನು ನೋಂದಣಿ ಎಂದು ಪರಿಗಣಿಸಲಾಗದು.

PM Awas Yojana ನಿಯಮಗಳಲ್ಲಿ ಬದಲಾವಣೆ
ನೀವು ಆವಾಸ್ ಯೋಜನೆಯ ಅಡಿ ಮನೆಗಳನ್ನು ಬಳಸುತ್ತಿರುವಿರೋ ಅಥವಾ ಇಲ್ಲವೋ ಎಂಬುದನ್ನು ಸರ್ಕಾರ ಐದು ವರ್ಷಗಳ ಕಾಲ ಪರಿಶೀಲಿಸಲಿದೆ. ನೀವು ಅದರಲ್ಲಿ ವಾಸಿಸುತ್ತಿದ್ದರೆ ಈ ಒಪ್ಪಂದವನ್ನು ಗುತ್ತಿಗೆ ಪತ್ರವಾಗಿ ಪರಿವರ್ತಿಸಲಾಗುತ್ತದೆ. ಇಲ್ಲದಿದ್ದರೆ ಅಭಿವೃದ್ಧಿ ಪ್ರಾಧಿಕಾರವು ನಿಮ್ಮೊಂದಿಗೆ ಮಾಡಿಕೊಂಡ ಒಪ್ಪಂದವನ್ನು ರದ್ದುಗೊಳಿಸಲಿದೆ. ಇದರ ನಂತರ ನೀವು ಠೇವಣಿ ಮಾಡಿದ ಮೊತ್ತವನ್ನು ಮರುಪಾವತಿಸಲಾಗುವುದಿಲ್ಲ. ಅಂದರೆ, ಒಟ್ಟಾರೆಯಾಗಿ ಈಗ ಅದರಲ್ಲಿ ನಡೆಯುತ್ತಿರುವ ದಾಂಧಲಿ ನಿಲ್ಲಲಿದೆ.

ಹಲವು ಒಪ್ಪಂದಗಳು ಬಾಕಿ ಇವೆ
ಕಾನ್ಪುರ್ ನಲ್ಲಿ ಇಂತಹ ಮೊದಲ ಅಭಿವೃದ್ಧಿ ಪ್ರಾಧಿಕಾರವಿದ್ದು, ನೋಂದಾಯಿತ ಒಪ್ಪಂದದ ಅಡಿಯಲ್ಲಿ ಗುತ್ತಿಗೆ ಪಡೆಯಲು ಜನರಿಗೆ ಮನೆಯಲ್ಲಿ ವಾಸಿಸುವ ಹಕ್ಕುಗಳನ್ನು ನೀಡುತ್ತದೆ. ಈ ಕುರಿತು ಹೇಳಿಕೆ ನೀಡಿರುವ ಕೆಡಿಎ ಉಪಾಧ್ಯಕ್ಷ ಅರವಿಂದ ಸಿಂಗ್, ಮೊದಲ ಹಂತದಲ್ಲಿ,  ಉಪಕ್ರಮದ ಅಡಿ ಆಯೋಜಿಸಲಾದ ಶಿಬಿರದಲ್ಲಿ 60 ಜನರೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ (PM Awas Yojana Registration). ಇದೇ ವೇಳೆ, 10900 ಕ್ಕಿಂತ ಹೆಚ್ಚು ಹಂಚಿಕೆದಾರರೊಂದಿಗೆ ಈ ಆಧಾರದ ಮೇಲೆ ಒಪ್ಪಂದಗಳಿಗೆ ಇನ್ನೂ ಸಹಿ ಹಾಕಿಲ್ಲ ಎಂದು ಅವರು ಹೇಳಿದ್ದಾರೆ. 

ಇದನ್ನೂ ಓದಿ-ಸೆಪ್ಟೆಂಬರ್ 28 ಕ್ಕೆ ಕಾಂಗ್ರೆಸ್ ಪಕ್ಷ ಸೇರಲಿರುವ ಕನ್ನಯ್ಯ ಕುಮಾರ್, ಜಿಗ್ನೇಶ್ ಮೇವಾನಿ

ಫ್ರೀ ಹೋಲ್ಡ್ ಆಗಿರಲ್ಲ ಫ್ಲಾಟ್ ಗಳು
ಇದರ ಹೊರತಾಗಿ, ನಿಯಮಗಳು ಮತ್ತು ಷರತ್ತುಗಳ ಪ್ರಕಾರ, ನಗರ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ನಿರ್ಮಿಸಲಾದ ಫ್ಲ್ಯಾಟ್‌ಗಳು ಎಂದಿಗೂ ಫ್ರೀ ಹೋಲ್ಡ್ (Free Hold Flat) ಆಗಿರುವುದಿಲ್ಲ. ಐದು ವರ್ಷಗಳ ನಂತರವೂ ಜನರು ಗುತ್ತಿಗೆಯಲ್ಲಿ ಉಳಿಯಬೇಕಾಗಲಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಮನೆಗಳನ್ನು ಪಡೆದು ಅವುಗಳನ್ನು ಬಾಡಿಗೆಗೆ ನೀಡುವುದಕ್ಕೆ ಇದು ಕಡಿವಾಣ ಹಾಕಲಿದೆ.

ಇದನ್ನೂ ಓದಿ-ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾದ ಕಟ್ಟಡ ಕಾರ್ಮಿಕನ ಮಗಳು

ಏನು ಹೇಳುತ್ತವೆ ಈ ನಿಯಮಗಳು
ಇನ್ನೊಂದೆಡೆ ಒಂದು ವೇಳೆ ಮನೆಯ ಹಂಚಿಕೆಯನ್ನು ಪಡೆದ ವ್ಯಕ್ತಿ ಮೃತಪಟ್ಟರೆ, ನಿಯಮಗಳ ಗುತ್ತಿಗೆಯನ್ನು ಕುಟುಂಬ ಸದಸ್ಯರಿಗೆ ಮಾತ್ರ ವರ್ಗಾವಣೆ ಮಾಡಲಾಗುವುದು. ಇದಕ್ಕಾಗಿ KDA ಇತರ ಯಾವುದೇ ಬೇರೆ ಕುಟುಂಬ ಸದಸ್ಯರ ಜೊತೆಗೆ ಈ ಒಪ್ಪಂದ ಮಾಡಿಕೊಳ್ಳುವ ಹಾಗಿಲ್ಲ. ಹಂಚಿಕೆದಾರರು ಐದು ವರ್ಷಗಳ ವರೆಗೆ ಮನೆಗಳನ್ನು ಬಳಸಬೇಕಾಗುತ್ತದೆ. ಇದರ ನಂತರ ಮನೆಯ ಗುತ್ತಿಗೆಯನ್ನು ಮರುಸ್ಥಾಪಿಸಲಾಗುವುದು.

ಇದನ್ನೂ ಓದಿ-ತಾಲಿಬಾನ್ ಜೊತೆ ಭಾರತ ಮಾತುಕತೆ ಆರಂಭಿಸಲಿ-ಫಾರೂಕ್ ಅಬ್ದುಲ್ಲಾ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News