ಆರ್ಟಿಕಲ್ 370 ರದ್ದು: ಲಷ್ಕರ್ ಹಿಟ್ ಲಿಸ್ಟ್‌ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ವಿರಾಟ್ ಕೊಹ್ಲಿ!

ಅಂತರರಾಷ್ಟ್ರೀಯ ದಿಂದ ತನ್ನನ್ನು ರಕ್ಷಿಸಿಕೊಳ್ಳಲು ಲಷ್ಕರ್-ಎ-ತೈಬಾ ಹೊಸ ಟ್ರಿಕ್ ಮಾಡಿದ್ದು, ಈ ಭಯೋತ್ಪಾದಕ ಸಂಘಟನೆಯು ತನ್ನ ಹೆಸರನ್ನು ಬದಲಾಯಿಸಿದೆ.

Last Updated : Oct 29, 2019, 04:00 PM IST
ಆರ್ಟಿಕಲ್ 370 ರದ್ದು: ಲಷ್ಕರ್ ಹಿಟ್ ಲಿಸ್ಟ್‌ನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ, ವಿರಾಟ್ ಕೊಹ್ಲಿ! title=

ನವದೆಹಲಿ: ಅಂತರರಾಷ್ಟ್ರೀಯ ಒತ್ತಡದಿಂದ ತನ್ನನ್ನು ರಕ್ಷಿಸಿಕೊಳ್ಳಲು ಲಷ್ಕರ್-ಎ-ತೈಬಾ ಹೊಸ ಟ್ರಿಕ್ ಮಾಡಿದ್ದು, ಈ ಭಯೋತ್ಪಾದಕ ಸಂಘಟನೆಯು ತನ್ನ ಹೆಸರನ್ನು ಬದಲಾಯಿಸಿದೆ. ಲಷ್ಕರ್ ತಣ್ಣ ಹೊಸ ಹೆಸರನ್ನು ಆಲ್ ಇಂಡಿಯಾ ಲಷ್ಕರ್-ಎ-ತೈಬಾ ಎಂದು ಬದಲಿಸಿಕೊಂಡಿರುವುದಾಗಿ ಮಾಹಿತಿಗಳು ಲಭ್ಯವಾಗಿದೆ.

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಆರ್ಟಿಕಲ್ 370ನ್ನು ರದ್ದುಗೊಳಿಸಿದ ಬಳಿಕ ಈ ಸಂಸ್ಥೆ ಹಿಟ್ ಲಿಸ್ಟ್ ಅನ್ನು ಬಿಡುಗಡೆ ಮಾಡಿದೆ. ಇದು ಭಾರತದ ಅನೇಕ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳನ್ನು ಒಳಗೊಂಡಿದೆ. ಲಷ್ಕರ್ ಹಿಟ್ ಲಿಸ್ಟ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಹಲವು ಗಣ್ಯರ ಹೆಸರಿದೆ. ಭದ್ರತಾ ಪಡೆಗಳಿಂದ ಹತ್ಯೆಗೀಡಾದ ಭಯೋತ್ಪಾದಕರಿಗಾಗಿ ಪ್ರತೀಕಾರ ತೀರಿಸಿಕೊಳ್ಳಲು ಲಷ್ಕರ್ ಬಯಸಿದೆ ಎನ್ನಲಾಗಿದೆ.

ಭಯೋತ್ಪಾದಕರ ಹಿಟ್ ಲಿಸ್ಟ್‌ನಲ್ಲಿ ಕ್ರಿಕೆಟಿಗನ ಹೆಸರು ಬಂದಿರುವುದು ಇದೇ ಮೊದಲು. ಈ  ಹಿಟ್ ಲಿಸ್ಟ್‌ನ್ನು ಎನ್ಐಎ ಕಚೇರಿಗೆ ಕಳುಹಿಸಲಾಗಿದೆ. ಕಳುಹಿಸಿರುವವರ ಹೆಸರಿನ ಜಾಗದಲ್ಲಿ ಅಖಿಲ ಭಾರತ ಲಷ್ಕರ್-ಎ-ತೈಬಾ ಹೈ ಪವರ್ ಕಮಿಟಿ ಕೋಜಿಕೋಡ್ ಕೇರಳ ಎಂದು ಬರೆಯಲಾಗಿದೆ.

ಈ ಪಟ್ಟಿಯಲ್ಲಿ ಗೃಹ ಸಚಿವ ಅಮಿತ್ ಶಾ, ಜಮ್ಮು ಕಾಶ್ಮೀರ ರಾಜ್ಯಪಾಲ ಸತ್ಯಪಾಲ್ ಮಲಿಕ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್. ಬಿಜೆಪಿ ಕಾರ್ಯನಿರ್ವಾಹಕ ಅಧ್ಯಕ್ಷ ಜೆ.ಪಿ.ನಡ್ಡಾ, ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೆಸರೂ ಇದೆ.

Trending News