ರಫೇಲ್ ಹಗರಣ; ಮೋದಿ, ಅನಿಲ್ ಅಂಬಾನಿ ಸೇರಿ ಆರ್ಮಿ ಮೇಲೆ ಸರ್ಜಿಕಲ್ ಸ್ಟ್ರೈಕ್ ಸಾರಿದ್ದಾರೆ- ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರ್ಕಾರದಲ್ಲಿನ ರಫೇಲ್ ಹಗರಣದ ವಿಚಾರವಾಗಿ ಟೀಕಾ ಪ್ರಹಾರ ಮುಂದುವರೆಸಿದ್ದಾರೆ.

Last Updated : Sep 22, 2018, 01:22 PM IST
ರಫೇಲ್ ಹಗರಣ; ಮೋದಿ, ಅನಿಲ್ ಅಂಬಾನಿ ಸೇರಿ ಆರ್ಮಿ ಮೇಲೆ ಸರ್ಜಿಕಲ್ ಸ್ಟ್ರೈಕ್ ಸಾರಿದ್ದಾರೆ- ರಾಹುಲ್ ಗಾಂಧಿ  title=

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರ್ಕಾರದಲ್ಲಿನ ರಫೇಲ್ ಹಗರಣದ ವಿಚಾರವಾಗಿ ಟೀಕಾ ಪ್ರಹಾರ ಮುಂದುವರೆಸಿದ್ದಾರೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ" ಪ್ರಧಾನಿ ಮೋದಿ  ಮತ್ತು ಅನಿಲ್ ಅಂಬಾನಿ ಇಬ್ಬರು ಜಂಟಿಯಾಗಿ ಭಾರತೀಯ ಸೈನ್ಯದ ಮೇಲೆ ಸರ್ಜಿಕಲ್ ಸ್ಟ್ರೈಕ್ ಸಾರಿದ್ದಾರೆ. ಮೋದಿಯವರೇ ನಮ್ಮ ಹುತಾತ್ಮ ಸೈನಿಕರ ತ್ಯಾಗವನ್ನು ನೀವು ಅವಮಾನ ಮಾಡಿದ್ದೀರಿ, ನಿಮಗೆ ನಾಚಿಕೆಯಾಗಬೇಕು ಭಾರತದ ಆತ್ಮಕ್ಕೆ ಮೋಸ ಮಾಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದು ಟ್ವೀಟ್ ನಲ್ಲಿ ರಾಹುಲ್ ಗಾಂಧಿ " ಪ್ರಧಾನಿ ವೈಯಕ್ತಿಕವಾಗಿ ಮಾತುಕತೆ ನಡೆಸಿ ರಫೇಲ್ ಒಪ್ಪಂದವನ್ನು ಗುಪ್ತವಾಗಿ ಬದಲಾವಣೆ ಮಾಡಿದ್ದಾರೆ.ಇದರ ಬಹಿರಂಗಪಡಿಸಿದ ಹೊಲಾಂಡ್ ಅವರಿಗೆ ಧನ್ಯವಾದಗಳು.ಈಗ ನಮಗೆ ಮೋದಿ ಹೇಗೆ ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದವನ್ನು ಹೇಗೆ ಅಂಬಾನಿಗೆ ತಲುಪಿಸಿದ್ದಾರೆ ತಿಳಿದಿದೆ ಎಂದು ಟ್ವೀಟ್ ಮಾಡಿದ್ದರು.

ಫ್ರಾನ್ಸ್ ನ ಮಾಜಿ ಅಧ್ಯಕ್ಷ ಹೊಲಾಂಡ್ ಅವರು ಮೋದಿ ಸರ್ಕಾರ ರಫೇಲ್ ಒಪ್ಪಂದದ ವಿಚಾರವಾಗಿ ರಿಲಯನ್ಸ್ ಹೆಸರನ್ನು ಪ್ರಸ್ತಾಪಿಸಿದ್ದರು ಈ ಹಿನ್ನಲೆಯಲ್ಲಿ ಫ್ರಾನ್ಸ್ ಗೆ ಬೇರೆ ಕಂಪನಿಯಗಳನ್ನು ಪರಿಗಣಿಸುವ ಅವಕಾಶವೇ ಸಿಗಲಿಲ್ಲ ಎಂದು ತಿಳಿಸಿದ್ದರು. ಈ ಹಿನ್ನಲೆಯಲ್ಲಿ  ಈಗ ದೇಶಾದ್ಯಂತ ಹೊಲಾಂಡ್ ಹೇಳಿಕೆ ಸಂಚಲನವನ್ನೇ  ಸೃಷ್ಟಿಸಿದೆ.

Trending News