ಪ್ರಧಾನಿ ಮೋದಿ ಫಿಟ್, ಆದರೆ ಭಾರತ ಅನ್ ಫಿಟ್ - ಅಜಮ್ ಖಾನ್

   

Last Updated : Jun 15, 2018, 08:02 PM IST
 ಪ್ರಧಾನಿ ಮೋದಿ ಫಿಟ್, ಆದರೆ ಭಾರತ ಅನ್ ಫಿಟ್ - ಅಜಮ್ ಖಾನ್  title=

ನವದೆಹಲಿ: ಮೋದಿಯ ಫಿಟ್ ನೆಸ್ ವೀಡಿಯೋ ವಿರುದ್ದ ವಾಗ್ದಾಳಿ ನಡೆಸಿರುವ ಸಮಾಜವಾದಿ ಪಕ್ಷದ ನಾಯಕ ಸಾಮಾನ್ಯ ಜನರು, ಪತ್ರಕರ್ತರು ಸೈನಿಕರು ಒಂದೆಡೆ ಸಾಯುತ್ತಿದ್ದರೆ ಇನ್ನೊಂದೆಡೆಗೆ ಪ್ರಧಾನಿ ಮೋದಿಯವರು ಫಿಟ್ ನೆಸ್ ಬಗ್ಗೆ ಒತ್ತು ನೀಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇತ್ತೀಚಿಗೆ ಕೇಂದ್ರ ಸಚಿವ ಪ್ರಾರಂಭಿಸಿದ್ದ ಫಿಟ್ ನೆಸ್ ಕುರಿತಾಗಿನ ಅಭಿಯಾನಕ್ಕೆ ವ್ಯಾಪಕವಾದ ಸ್ಪಂದನೆ ವ್ಯಕ್ತವಾಗಿತ್ತು ಈ ಸಂದರ್ಭದಲ್ಲಿ ರಾಜವರ್ಧನ್ ಸಿಂಗ್ ರಾಥೋಡ ಅವರು ವಿರಾಟ್ ಕೊಹ್ಲಿಯವರಿಗೆ ಫಿಟ್ ನೆಸ್ ಕುರಿತಾಗಿ ಚಾಲೆಂಜ್ ಆಗಿದ್ದರು ಆಗ ಅವರು ನರೇಂದ್ರ ಮೋದಿಯವರಿಗೆ ಚಾಲೆಂಜ್ ನೀಡಿದ್ದರು ಇದನ್ನು ಸ್ವೀಕರಿಸಿದ ಮೋದಿ ಇತ್ತೀಚಿಗೆ ತಮ್ಮ ಟ್ವೀಟರ್ ಖಾತೆಯಲ್ಲಿ ತಮ್ಮ ಫಿಟ್ ನೆಸ್ ಕುರಿತಾದ ವಿಡಿಯೋವೊಂದನ್ನು ಹಾಕಿದ್ದರು ಇದಾದ ನಂತರ ಸಾಮಾಜಿಕ ಜಾಲತಾಣದಲ್ಲಿ ಇದಕ್ಕೆ ವ್ಯಾಪಕವಾಗಿ ವ್ಯಂಗ ಮಾಡಲಾಗಿತ್ತು.

ಈ ಕುರಿತಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅಜಂ ಖಾನ್ " ಸೈನಿಕರು,ಪತ್ರಕರ್ತರು, ವಿದ್ಯಾರ್ಥಿಗಳು  ಮತ್ತು ಸಾಮಾನ್ಯ ಜನರು ಸಾವಿಗಿಂತ ಫಿಟ್ನೆಸ್ ಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.ನಮ್ಮ ಸೈನಿಕರು ಸಾಯುತ್ತಿದ್ದಾರೆ ಪ್ರಧಾನಿಗಳು ದಂಡ ಬೈಠಕ್ ಮಾಡುತ್ತಿದ್ದಾರೆ, ಪ್ರಧಾನಿಯವರು ಫಿಟ್ ಆಗಿದ್ದಾರೆ ಆದರೆ ದೇಶ ಮಾತ್ರ ಅಶಕ್ತವಾಗಿದೆ ಎಂದು ಅವರು ವ್ಯಂಗವಾಡಿದ್ದಾರೆ  

Trending News