ಕೇಶುಭಾಯಿ ಪಟೇಲ್ ಗೆ ಮೋದಿ ಶೃದ್ಧಾಂಜಲಿ: ಪಟೇಲ್ ನಿವಾಸಕ್ಕೆ ತೆರಳಿ ನಮನ ಸಲ್ಲಿಸಿದ ಪ್ರಧಾನಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದಿನಿಂದ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಗಾಂಧಿನಗರ ತಲುಪಿದ ಮೋದಿ, ಗುಜರಾತ್ ನ ಮಾಜಿ ಮುಖ್ಯಮಂತ್ರಿ (Ex CM of Gujrath) ಕೇಶುಭಾಯಿ ಪಟೇಲ್ (Keshu Bhai Patel) ಅವರಿಗೆ ಶೃದ್ಧಾಂಜಲಿ ಸಲ್ಲಿಸಿದರು.

Last Updated : Oct 30, 2020, 04:29 PM IST
ಕೇಶುಭಾಯಿ ಪಟೇಲ್ ಗೆ ಮೋದಿ ಶೃದ್ಧಾಂಜಲಿ: ಪಟೇಲ್ ನಿವಾಸಕ್ಕೆ ತೆರಳಿ ನಮನ ಸಲ್ಲಿಸಿದ ಪ್ರಧಾನಿ

ಗಾಂಧಿನಗರ : ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದಿನಿಂದ ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದಾರೆ. ಶುಕ್ರವಾರ ಬೆಳಿಗ್ಗೆ ಗಾಂಧಿನಗರ ತಲುಪಿದ ಮೋದಿ, ಗುಜರಾತ್ ನ ಮಾಜಿ ಮುಖ್ಯಮಂತ್ರಿ (Ex CM of Gujrath) ಕೇಶುಭಾಯಿ ಪಟೇಲ್ (Keshu Bhai Patel) ಅವರಿಗೆ ಶೃದ್ಧಾಂಜಲಿ ಸಲ್ಲಿಸಿದರು.

ಮೊದಲು ಕೇಶುಭಾಯಿ ಪಟೇಲ್ ಅವರ ನಿವಾಸಕ್ಕೆ ಭೇಟಿ  ನೀಡಿದ ನರೇಂದ್ರ ಮೋದಿ , ಪಟೇಲ್ ಅವರಿಗೆ ನಮನ ಸಲ್ಲಿಸಿದರು. ನಿನ್ನೆ ಪಟೇಲ್ ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಮೋದಿ ಭಾವುಕಾರಾಗಿದ್ದು ವಿಡಿಯೋ ಟ್ವೀಟ್ ಮಾಡಿದ್ದರು. 

92ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದ ಪಟೇಲ್:

ಉಸಿರಾಟದ ತೊಂದರೆ ಉಲ್ಬಣಗೊಂಡು ಕೇಶುಭಾಯಿ  ಪಟೇಲ್ ನಿನ್ನೆ ನಿಧನ ಹೊಂದಿದ್ದರು.  ಕೆಲ ದಿನಗಳ ಹಿಂದೆ ಕೇಶುಬಾಯಿ ಪಟೇಲ್ ಅವರಿಗೆ ಕರೋನಾ ಬಾಧಿಸಿತ್ತಾದರೂ, ಅದರಿಂದ ಪಟೇಲ್ ಸಂಪೂರ್ಣ ಗುಣಮುಖ ಹೊಂದಿದ್ದರು.

ನರೇಂದ್ರ ಮೋದಿ ಗುಜರಾತ್ ಮುಖ್ಯಮಂತ್ರಿಯಾಗುವುದಕ್ಕೆ ಮೊದಲು ಕೇಶುಭಾಯಿ ಪಟೇಲ್ ಈ ಜವಾಬ್ದಾರಿ ನಿಭಾಯಿಸಿದ್ದರು. ಗುಜರಾತ್ ರಾಜಕೀಯದಲ್ಲಿ ಕೇಶುಭಾಯಿ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು. ಎರಡು ಬಾರಿ ಗುಜರಾತ್ ನಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ್ದರು. 2001ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಾಯಿತು.

 

More Stories

Trending News