ನವದೆಹಲಿ : ಸಂತ ರವಿದಾಸ್ ಜಯಂತಿಯ (Ravidas Jayanti) ಹಿನ್ನೆಲೆಯಲ್ಲಿ ಇಂದು ದೆಹಲಿಯ ಕರೋಲ್ ಬಾಗ್‌ನಲ್ಲಿರುವ ಗುರು ರವಿದಾಸ್ ವಿಶ್ರಾಮ್ ಧಾಮ್ ದೇವಾಲಯಕ್ಕೆ (Guru Ravidas Vishram Dham Mandir) ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಭೇಟಿ ನೀಡಿದ್ದಾರೆ. ಭೇಟಿ ವೇಳೆ ಅವರು ಶಬ್ದ ಕೀರ್ತನೆಯಲ್ಲಿ ಪಾಲ್ಗೊಡಿದ್ದಾರೆ.
ಸಂತ ರವಿದಾಸ್ ದರ್ಶನ ಪಡೆದ ಪ್ರಧಾನಿ ಮೋದಿ :
ಗುರು ರವಿದಾಸ್ ವಿಶ್ರಾಮ್ ಧಾಮ್ ದೇವಸ್ಥಾನಕ್ಕೆ (Guru Ravidas Vishram Dham Mandir) ಭೇಟಿ ನೀಡಿದ ಪ್ರಧಾನಿ ಮೋದಿ ಅವರು, ಮೊದಲು ಸಂತ ರವಿದಾಸ್ ದರ್ಶನ ಪಡೆದಿದ್ದಾರೆ. ಬಳಿಕ ದೇವಸ್ಥಾನದಲ್ಲಿದ್ದ ಭಕ್ತರನ್ನು ಭೇಟಿ ಯಾಗಿದ್ದಾರೆ. ನಂತರ ದೇವಸ್ಥಾನದಲ್ಲಿ ನಡೆಯುತ್ತಿದ್ದ ‘ಶಬ್ದ ಕೀರ್ತನೆ’ಯಲ್ಲಿ ಪ್ರಧಾನಿ ಮೋದಿ (Narendra Modi) ಪಾಲ್ಗೊಂಡಿದ್ದಾರೆ.
संत रविदास जयंती के मौके पर दिल्ली के रविदास मंदिर पहुंचे प्रधानमंत्री मोदी, श्रद्धालुओं के संग कीर्तन में बजाया मंजीरा #RaviDasJayanti2022 @PMOIndia @ravindrak2000 @VishalKalraZee_
अन्य खबरों के लिए क्लिक करें - https://t.co/asaJAv45ul pic.twitter.com/DVMOr66Fvv
— Zee News (@ZeeNews) February 16, 2022
ಇದನ್ನೂ ಓದಿ : "ಪ್ರತಿಯೊಬ್ಬ ವ್ಯಕ್ತಿಗೂ ತಮ್ಮ ಇಚ್ಛೆಯ ಉಡುಪು ಧರಿಸುವ ಹಕ್ಕಿದೆ"
ಸಂತ ರವಿದಾಸ್ ಒಬ್ಬ ಸಮಾಜ ಸುಧಾರಕ :
ಸಂತ ರವಿದಾಸ್ (Ravidas) 16 ನೇ ಶತಮಾನದಲ್ಲಿ ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನಿಸಿದರು. ಸಂತ ರವಿದಾಸ್ ಸಮಾಜ ಸುಧಾರಕರಾಗಿದ್ದು, ಅಸ್ಪೃಶ್ಯತೆಯ ವಿರುದ್ಧ ಹೋರಾಟ ನಡೆಸಿದ್ದರು. ಸಮಾಜಕ್ಕಾಗಿ ದುಡಿಯುತ್ತಲೇ ತಮ್ಮ ವೃತ್ತಿಯನ್ನು ಕೂಡಾ ಮುಂದುವರೆಸಿದ್ದರು.
ಪಂಜಾಬ್ ಮತ್ತು ಯುಪಿಯಲ್ಲಿ ಸಂತ ರವಿದಾಸ್ ಅವರ ಅನುಯಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಅವರನ್ನು ರವಿದಾಸ್ ಅಥವಾ ರೈದಾಸ್ ಎಂದು ಕರೆಯಲಾಗುತ್ತದೆ. ಸಂತ ರವಿದಾಸ್ ದೇವಸ್ಥಾನಕ್ಕೆ ಪ್ರಧಾನಿ ಮೋದಿ ಭೇಟಿ ನೀಡಿರುವುದನ್ನು ವಿಧಾನಸಭಾ ಚುನಾವಣೆಯ (Assembly Election) ಜೊತೆಗೆ ಹೋಲಿಕೆ ಮಾಡಿ ಕೂಡಾ ನೋಡಲಾಗುತ್ತಿದೆ.
ಇದನ್ನೂ ಓದಿ : LIC ಪಾಲಿಸಿದಾರರಿಗೆ ಬಿಗ್ ನ್ಯೂಸ್ : ನಿಮಗೆ ‘ಲಾಭ’ ನೀಡಲು ಸರ್ಕಾರ ಮಾಡಿದೆ ಬಿಗ್ ಪ್ಲಾನ್ !
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.