ಗಿರೀಶ್ ಕಾರ್ನಾಡರು ಸದಾ ಎಲ್ಲರ ನೆನಪಿನಲ್ಲಿರಲಿದ್ದಾರೆ: ಪ್ರಧಾನಿ ಮೋದಿ ಸಂತಾಪ

ಇಂದು ಬೆಳಿಗ್ಗೆ ಕೊನೆಯುಸಿರೆಳೆದ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್‌ ಅವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಸಮೀಪ ಇರುವ ಕಲ್‌ಪಲ್ಲಿ ವಿದ್ಯುತ್‌ ಚಿತಾಗಾರದಲ್ಲಿ ನೆರವೇರಿಸಲು ಕುಟುಂಬ ನಿರ್ಧರಿಸಿದೆ.

Last Updated : Jun 10, 2019, 01:30 PM IST
ಗಿರೀಶ್ ಕಾರ್ನಾಡರು ಸದಾ ಎಲ್ಲರ ನೆನಪಿನಲ್ಲಿರಲಿದ್ದಾರೆ: ಪ್ರಧಾನಿ ಮೋದಿ ಸಂತಾಪ title=
Pic Courtesy:Wikipedia

ಬೆಂಗಳೂರು: ಹಿರಿಯ ರಂಗಕರ್ಮಿ, ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ನಿಧನಕ್ಕೆ ಪ್ರಧಾನಮಂತಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಸಾಹಿತ್ಯ, ರಂಗಭೂಮಿ, ಸಿನಿಮಾ ಮಾತ್ರವಲ್ಲದೇ ತಮ್ಮ ಪ್ರಗತಿಪರ ಚಿಂತನೆಗಳ ಮೂಲಕ ಹೆಸರಾಗಿದ್ದ ಗಿರೀಶ್ ಕಾರ್ನಾಡ್ ಅವರಿಗೆ ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿರುವ ಪ್ರಧಾನಿ ಮೋದಿ, ಎಲ್ಲಾ ರಂಗಗಳಲ್ಲಿ ಅವರ ಅದ್ಭುತ ಪಾತ್ರದಿಂದಾಗಿ ಅವರು ಸದಾ ನೆನಪಿನಲ್ಲಿರಲಿದ್ದಾರೆ. ಅವರ ಭಾವನೆಗಳನ್ನು ನೇರವಾಗಿ ಉತ್ಕಟ ಮನೋಭಾವದಿಂದ ಅಭಿವ್ಯಕ್ತಗೊಳಿಸುತ್ತಿದ್ದರು. ಮುಂದಿನ ದಿನಗಳಲ್ಲೂ ಕಾರ್ನಾಡರ ಕೆಲಸಗಳು ಜನಪ್ರಿಯವಾಗಳಿವೆ. ಅವರ ಸಾವಿನಿಂದ ನೋವುಂಟಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.

ಇಂದು ಬೆಳಿಗ್ಗೆ ಕೊನೆಯುಸಿರೆಳೆದ ಹಿರಿಯ ಸಾಹಿತಿ ಗಿರೀಶ್ ಕಾರ್ನಾಡ್‌ ಅವರ ಅಂತ್ಯಸಂಸ್ಕಾರವನ್ನು ಬೆಂಗಳೂರಿನ ಬೈಯಪ್ಪನಹಳ್ಳಿ ಸಮೀಪ ಇರುವ ಕಲ್‌ಪಲ್ಲಿ ವಿದ್ಯುತ್‌ ಚಿತಾಗಾರದಲ್ಲಿ ನೆರವೇರಿಸಲು ಕುಟುಂಬ ನಿರ್ಧರಿಸಿದೆ. 

Trending News