ISRO-Oppo India deal:ಚೀನಾದ ಒಪ್ಪೋ ಸಂಸ್ಥೆಯೊಂದಿಗೆ ಇಸ್ರೋ ಒಪ್ಪಂದಕ್ಕೆ ತೀವ್ರ ವಿರೋಧ

ISRO-Oppo India deal: ಆ ದೇಶದ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತಿರುವಾಗ ಜನರು ಚೀನಾದ ಅಪ್ಲಿಕೇಶನ್‌ಗಳನ್ನು ಏಕೆ ಬಹಿಷ್ಕರಿಸಬೇಕು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಪ್ರಶ್ನಿಸುತ್ತಿದ್ದಾರೆ.

Edited by - Zee Kannada News Desk | Last Updated : Dec 12, 2021, 11:07 AM IST
  • ISRO-Oppo India ನಡುವೆ ಒಪ್ಪಂದಕ್ಕೆ ತೀವ್ರ ವಿರೋಧ
  • ಅಸಮಾಧಾನ ಹೊರಹಾಕಿದ ರಾಜಕೀಯ ನಾಯಕರು, ನೆಟಿಜನ್‌ಗಳು
  • ಸಾಮಾಜಿಕ ಮಾಧ್ಯಮದ ಮೂಲಕ ಆಕ್ರೋಶ ಹೊರಹಾಕುತ್ತಿರುವ ಜನರು
ISRO-Oppo India deal:ಚೀನಾದ ಒಪ್ಪೋ ಸಂಸ್ಥೆಯೊಂದಿಗೆ ಇಸ್ರೋ ಒಪ್ಪಂದಕ್ಕೆ ತೀವ್ರ ವಿರೋಧ  title=
ಇಸ್ರೋ-ಒಪ್ಪೋ ಇಂಡಿಯಾ ಒಪ್ಪಂದ

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಒಪ್ಪೋ ಇಂಡಿಯಾದ (Oppo India) ನಡುವೆ ಸಹಿ ಹಾಕಲಾದ ಒಪ್ಪಂದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ರಾಜಕೀಯ ನಾಯಕರು ಮತ್ತು ನೆಟಿಜನ್‌ಗಳು ಈ ಒಪ್ಪಂದದ (ISRO-Oppo deal) ಬಗ್ಗೆ ಭಾರತೀಯ ಬಾಹ್ಯಾಕಾಶ ಸಂಸ್ಥೆಯನ್ನು ಪ್ರಶ್ನಿಸಿದ್ದಾರೆ. 

ನಾವಿಕ್ ( NavIC application) ಸಂದೇಶ ಸೇವೆಯ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು ಚೀನಾದ ಸ್ಮಾರ್ಟ್ ಸಾಧನಗಳ ತಯಾರಕ Oppo ನೊಂದಿಗೆ ಈ ಒಪ್ಪಂದಕ್ಕೆ ( ISRO-Oppo India deal)ಸಹಿ ಹಾಕಿದೆ. 

ಪೂರ್ವ ಲಡಾಖ್‌ನಲ್ಲಿ ಚೀನಾದ ಆಕ್ರಮಣಶೀಲತೆ ಮತ್ತು ಕೇಂದ್ರ ಸರ್ಕಾರದಿಂದ ಚೀನಾದ ಅಪ್ಲಿಕೇಶನ್‌ಗಳ ಮೇಲಿನ ನಿಷೇಧದ ಹೊರತಾಗಿಯೂ ಈ ಒಪ್ಪಂದಕ್ಕೆ ಸಹಿ ಹಾಕಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ.

"ಹಲೋ ಚೀನಾ. ಲಾಟ್ಸ್​ ಆಫ್ ಲವ್, ಇಸ್ರೋ.. ಒಂದು ಕಡೆ ನಾವು ಅವರನ್ನು ಗಡಿಯಿಂದ ಹಿಮ್ಮೆಟ್ಟಿಸಲು,  ಭಾರತೀಯ ಮಾರುಕಟ್ಟೆಯಲ್ಲಿ ಚೀನಾದ ಪ್ರಾಬಲ್ಯ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಆದರೆ ಈ ರೀತಿಯ ಒಪ್ಪಂದದಿಂದ ಭಾರತೀಯ ಭದ್ರತೆಗೆ ಮತ್ತಷ್ಟು ಆತಂಕ ಎದುರಾಗಲಿದೆ ಎಂಬುದನ್ನು ಮರೆತುಬಿಟ್ಟಿದ್ದೇವೆ" ಎಂದು ಶಿವಸೇನಾ ನಾಯಕಿ ಹಾಗೂ ರಾಜ್ಯಸಭಾ ಸಂಸದೆ ಪ್ರಿಯಾಂಕಾ ಚತುರ್ವೇದಿ ಟ್ವೀಟ್ ಮಾಡಿದ್ದಾರೆ. 
    
ಇಸ್ರೋ, ಒಪ್ಪೊ ಇಂಡಿಯಾದೊಂದಿಗೆ ಮಾಡಿಕೊಳ್ಳುತ್ತಿರುವ ಒಪ್ಪಂದಕ್ಕೆ (ISRO-Oppo deal) ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ವೈರಿ ರಾಷ್ಟ್ರಗಳೊಂದಿಗೆ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಒಪ್ಪಂದ ಮಾಡಿಕೊಳ್ಳುವುದು ಅಪಾಯಕಾರಿ ಎಂಬುದು ಕೆಲವರ ಅಭಿಪ್ರಾಯವಾಗಿದೆ.

ಕಾಂಗ್ರೆಸ್ ವಕ್ತಾರೆ ಡಾ.ಶಮಾ ಮೊಹಮದ್ ಕೂಡಾ ಇಸ್ರೋ ಒಪ್ಪಂದದ್ದ ವಿರುದ್ಧ ಟ್ವೀಟ್ ಮಾಡಿದ್ದಾರೆ. "ಇದು ಆಘಾತಕಾರಿ ವಿಚಾರ. ಒಂದು ಕಡೆ ಚೀನಾ ಅಕ್ರಮವಾಗಿ ಭಾರತೀಯ ಭೂ ಪ್ರದೇಶವನ್ನು ಆಕ್ರಮಿಸಿಕೊಳ್ಳುತ್ತಿದೆ. ಆದರೆ ಇಸ್ರೋ ಅಂತಹ ರಾಷ್ಟ್ರದ ಕಂಪನಿಯೊಂದರ ಜೊತೆಗೆ ಒಪ್ಪಂದ ಮಾಡಿಕೊಂಡಿದೆ" ಎಂದು ಟೀಕಿಸಿದ್ದಾರೆ.

ಇಸ್ರೋ-ಒಪ್ಪೋ ಇಂಡಿಯಾ ಒಪ್ಪಂದಕ್ಕೆ ಹಲವಾರು ಇತರ ನೆಟಿಜನ್‌ಗಳು 'shocking', 'blunder' ಇತ್ಯಾದಿ ನುಡಿಗಟ್ಟುಗಳನ್ನು ಬಳಸಿದ್ದಾರೆ. ಆದರೆ ಇನ್ನೂ ಕೆಲವರು ಇಸ್ರೋಗಿಂತ ಕಡಿಮೆಯಿಲ್ಲದ ಆ ದೇಶದ ಕಂಪನಿಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕುತ್ತಿರುವಾಗ ಜನರು ಚೀನಾದ ಅಪ್ಲಿಕೇಶನ್‌ಗಳನ್ನು ಏಕೆ ಬಹಿಷ್ಕರಿಸಬೇಕು ಎಂದು ಪ್ರಶ್ನಿಸಿದ್ದಾರೆ. 

ಒಪ್ಪಂದದ ಕುರಿತು ಇಸ್ರೋ ಇನ್ನೂ ಹೇಳಿಕೆ ನೀಡದಿದ್ದರೂ, ಒಪ್ಪೋ ಇಂಡಿಯಾ ಶುಕ್ರವಾರ ಟ್ವಿಟರ್ ಪೋಸ್ಟ್‌ನಲ್ಲಿ ಒಪ್ಪಂದವನ್ನು ಪ್ರಕಟಿಸಿದೆ. "ಆತ್ಮನಿರ್ಭರ್ ಭಾರತ್‌ನ (Aatmanirbhar Bharat) ದೃಷ್ಟಿಕೋನವನ್ನು ಬೆಂಬಲಿಸುತ್ತಾ, Oppo ಇಂಡಿಯಾ ಅವರಿಗೆ ಉದ್ಯಮ-ಪ್ರಮುಖ ಆರ್ & ಡಿ ಸಾಮರ್ಥ್ಯಗಳನ್ನು ಒದಗಿಸಲು isro ನೊಂದಿಗೆ ಸಹಕರಿಸುತ್ತದೆ. NavIC ಅಪ್ಲಿಕೇಶನ್‌ನೊಂದಿಗೆ ಅನುಕೂಲಕರ ಮತ್ತು ಬಳಕೆದಾರ ಸ್ನೇಹಿಯಾಗಿ ನಿರ್ಮಿಸುವ ಗುರಿಯೊಂದಿಗೆ, ನಾವು ಉತ್ತಮ ಭವಿಷ್ಯವನ್ನು ರಚಿಸಲು ಹೊಸ ಪ್ರಯಾಣವನ್ನು ಪ್ರಾರಂಭಿಸುತ್ತೇವೆ" ಎಂದು ಅದು ಟ್ವೀಟ್ ಮಾಡಿದೆ.

ಇದನ್ನೂ ಓದಿ: New Trouble: ವಿಶ್ವಕ್ಕೆ ಎಂಟ್ರಿ ಕೊಟ್ಟ ಮತ್ತೊಂದು ಅಪಾಯ! ಎರಡು ರೂಪಾಂತರಿಗಳಲ್ಲಿ ವಿಭಜನೆಯಾದ Omicron Variant

Trending News