Droupadi Murmu Oath Ceremony : ದೇಶದ ನೂತನ ರಾಷ್ಟ್ರಪತಿ ಆಗಿ ಆಯ್ಕೆಯಾಗಿರುವ ದ್ರೌಪದಿ ಮುರ್ಮು ಅವರು ಜುಲೈ 25 ಅಂದರೆ ಸೋಮವಾರ ದೇಶದ ಪ್ರಥಮ ಪ್ರಜೆಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಮುರ್ಮು ಅವರು ದೇಶದ 15 ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ. ರಾಜಧಾನಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಮುರ್ಮು ಅವರು ಸಾಂಪ್ರದಾಯಿಕ ಹುಡುಗೆಯಾದ ಸಂತಾಲಿ ಸೀರೆಯಲ್ಲಿ ಕಂಗೊಳಿಸಲಿದ್ದಾರೆ. ಮುರ್ಮು ಅವರ ಸೊಸೆ ಸುಕ್ರಿ ತುಡು ಅವರು ಪೂರ್ವ ಭಾರತದ ಸಂತಾಲ್ ಸಮುದಾಯದ ಮಹಿಳೆಯರು ಉಡುವ ವಿಶೇಷ ಸೀರೆಯೊಂದಿಗೆ ದೆಹಲಿಗೆ ತೆರಳುತ್ತಿದ್ದಾರೆ.
ಅತ್ತಗೆ ವಿಶೇಷ ಸೀರೆ ತರುತ್ತಿದ್ದಾರೆ ಸೊಸೆ
ಮಾಹಿತಿಯ ಪ್ರಕಾರ, ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಸುಕ್ರಿ ತನ್ನ ಪತಿ ತಾರಿನಿಸೆನ್ ತುಡು ಅವರೊಂದಿಗೆ ಶನಿವಾರ ರಾಷ್ಟ್ರ ರಾಜಧಾನಿಗೆ ತೆರಳಿದ್ದಾರೆ.
ಇದನ್ನೂ ಓದಿ : ರಾಷ್ಟ್ರ ರಾಜಧಾನಿಗೂ ಕಾಲಿಟ್ಟ ಮಂಕಿಪಾಕ್ಸ್: ದೇಶದಲ್ಲಿ 4ನೇ ಪ್ರಕರಣ ದಾಖಲು
ಈ ಬಗ್ಗೆ ಮಾತನಾಡಿದ ಮುರ್ಮು ಅವರ ಸೊಸೆ ಸುಕ್ರಿ, “ನಮ್ಮ ಅತ್ತೆಗೆ ಪ್ರಮಾಣವಚನ ಸಮಾರಂಭದಲ್ಲಿ ಧರಿಸಲು ನಾನು ಸಾಂಪ್ರದಾಯಿಕ ಸಂತಾಲಿ ಸೀರೆಯನ್ನು ತೆಗೆದುಕೊಂಡು ಹೋಗುತ್ತಿದ್ದೇನೆ. ಆದ್ರೆ, ಆ ಸಂದರ್ಭದಲ್ಲಿ ಅವರು ನಿಖರವಾಗಿ ಏನು ಧರಿಸುತ್ತಾರೆ ಎಂಬುವುದು ನನಗೆ ಇನ್ನೂ ಗೊತ್ತಿಲ್ಲ. ರಾಷ್ಟ್ರಪತಿ ಭವನವು ನೂತನ ರಾಷ್ಟ್ರಪತಿಯವರಿಗೆ ಉಡುಗೆಯನ್ನು ನಿರ್ಧರಿಸಲಿದೆ ಎಂದು ಹೇಳಿದ್ದಾರೆ.
ಸಂತಾಲಿ ಸಮುದಾಯದ ಮಹಿಳೆಯರು ಈ ಸೀರೆ ಧರಿಸುತ್ತಾರೆ!
ಸಂತಾಲಿ ಸೀರೆ ಒಂದು ತುದಿಯಲ್ಲಿ ಕೆಲವು ಪಟ್ಟೆಗಳನ್ನು ಹೊಂದಿರುತ್ತವೆ ಮತ್ತು ಸಂತಾಲಿ ಸಮುದಾಯದ ಮಹಿಳೆಯರು ವಿಶೇಷ ಸಂದರ್ಭಗಳಲ್ಲಿ ಅದನ್ನು ಧರಿಸುತ್ತಾರೆ. ಸಂತಾಲಿ ಸೀರೆಗಳು ಉದ್ದದಲ್ಲಿ ಏಕರೂಪದ ಪಟ್ಟಿಗಳನ್ನು ಹೊಂದಿರುತ್ತವೆ ಮತ್ತು ಎರಡೂ ತುದಿಗಳಲ್ಲಿ ಒಂದೇ ವಿನ್ಯಾಸವನ್ನು ಹೊಂದಿರುತ್ತವೆ. ಸುಕ್ರಿ ಅವರು ತಮ್ಮ ಪತಿ ಮತ್ತು ಕುಟುಂಬದೊಂದಿಗೆ ಮಯೂರ್‌ಭಂಜ್ ಜಿಲ್ಲೆಯ ರಾಯರಂಗ್‌ಪುರ ಸಮೀಪದ ಉಪರಬೇಡ ಗ್ರಾಮದಲ್ಲಿ ವಾಸಿಸುತ್ತಿದ್ದಾರೆ. ಮುರ್ಮು ಅವರಿಗೆ ಸಾಂಪ್ರದಾಯಿಕ ಸಿಹಿಯಾದ 'ಅರಿಸ್ಸಾ ಪಿತಾ'ವನ್ನು ಸಹ ಒಯ್ಯುತ್ತಿದ್ದೇನೆ ಎಂದು ಹೇಳಿದರು.
ದೆಹಲಿ ತಲುಪಿದ ಮುರ್ಮು ಅವರ ಮಗಳು ಮತ್ತು ಅಳಿಯಾ!
ಮುರ್ಮು ಅವರ ಪುತ್ರಿ ಮತ್ತು ಬ್ಯಾಂಕ್ ಅಧಿಕಾರಿ ಇತಿಶ್ರೀ ಅವರ ಪತಿ ಗಣೇಶ್ ಅವರೊಂದಿಗೆ ನವದೆಹಲಿಗೆ ಆಗಮಿಸಿದ್ದು, ಇಬ್ಬರೂ ಚುನಾಯಿತ ರಾಷ್ಟ್ರಪತಿ ಅವರೊಂದಿಗೆ ವಾಸಿಸುತ್ತಿದ್ದಾರೆ. ಬಿಜೆಪಿಯ ಹಿರಿಯ ನಾಯಕರೊಬ್ಬರು, "ಚುನಾಯಿತ ರಾಷ್ಟ್ರಪತಿ ಕುಟುಂಬದ ನಾಲ್ವರು ಸದಸ್ಯರು - ಸಹೋದರ, ಸೊಸೆ, ಮಗಳು ಮತ್ತು ಅಳಿಯ ಮಾತ್ರ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ." ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : COVID-19 vaccine: ಒಂದೇ ಒಂದು ಡೋಸ್ ಕೊರೊನಾ ಲಸಿಕೆ ತೆಗೆದುಕೊಳ್ಳದ 4 ಕೋಟಿ ಜನ!
ದೆಹಲಿ ತಲುಪಿದ ಹಲವು ನಾಯಕರು..!
ಬಿಜು ಜನತಾ ದಳದ ಅಧ್ಯಕ್ಷ ಮತ್ತು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಶನಿವಾರ ರಾಷ್ಟ್ರ ರಾಜಧಾನಿಯ ನಾಲ್ಕು ದಿನಗಳ ಪ್ರವಾಸಕ್ಕೆ ತೆರಳಿದ್ದಾರೆ. ಅವರು ಮುರ್ಮು ಅವರ ಪ್ರಮಾಣ ವಚನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಮಯೂರ್‌ಭಂಜ್ ಜಿಲ್ಲೆಯ ಆರು ಬಿಜೆಪಿ ಶಾಸಕರ ಹೊರತಾಗಿ, ಈಶ್ವರೀಯ ಪ್ರಜಾಪಿತ ಬ್ರಹ್ಮಕುಮಾರಿ ಬ್ರಹ್ಮಕುಮಾರಿ ಸುಪ್ರಿಯಾ, ಬ್ರಹ್ಮಕುಮಾರಿ ಬಸಂತಿ ಮತ್ತು ಬ್ರಹ್ಮಕುಮಾರ್ ಗೋವಿಂದ್ ಅವರ ರಾಯರಂಗಪುರ ಶಾಖೆಯ ಮೂವರು ಸದಸ್ಯರು ನವದೆಹಲಿಗೆ ಆಗಮಿಸಿ ಮುರ್ಮು ಅವರನ್ನು ಭೇಟಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.