ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧೀ ತಮ್ಮ ಸರಣಿ ಪ್ರಶ್ನಾವಳಿಗಳನ್ನು ಮುಂದುವರೆಸಿದ್ದಾರೆ.ಅದರ ಭಾಗವಾಗಿ ಈ ಸಾರಿ ಯುವಕರು ಮತ್ತು ಶಿಕ್ಷಣದ ಗುಣಮಟ್ಟದ ಬಗ್ಗೆ ಪ್ರಸ್ತಾಪಿಸಿದ ಅವರು ಪ್ರಧಾನ ಮಂತ್ರಿಗಳೇ ನಮ್ಮ ಶಿಕ್ಷಣ ಸಂಸ್ಥೆಗಳ ಗುಣಮಟ್ಟವನ್ನು ಕುಂದಿಸಲು ಹೊರಟಿದ್ದಿರಾ? ಎಂದು ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.
ರಾಹುಲ್ ಗಾಂಧಿಯವರು ಗುಜರಾತ್ ಚುನಾವಣೆಯ ಪ್ರಚಾರದ ಸಂಧರ್ಭದಲ್ಲಿ ಹಲವಾರು ಪ್ರಚಲಿತ ಸಮಸ್ಯೆಗಳ ಕುರಿತಾಗಿ ಪ್ರತಿ ದಿನವು ಪ್ರಶ್ನೆಯೊಂದನ್ನು ಅವರು ಪ್ರಧಾನಮಂತ್ರಿಗಳಿಗೆ ಕೇಳುತ್ತಿದ್ದಾರೆ.ಇಂತಹ ಸಂಧರ್ಭದಲ್ಲಿ ಯುವಕರು ಮತ್ತು ನಿರುದ್ಯೋಗದ ವಿಷಯವನ್ನು ಪ್ರಸ್ತಾಪಿಸಿದ ರಾಹುಲ್,ಶೇಕಡಾ 80 ಇಂಜಿನಿಯರ್ ಪದವಿ ಪಡೆದಿರುವ ಯುವಕರು ನಿರುದ್ಯೋಗದಲ್ಲಿದ್ದಾರೆ. ಟಾಟಾದಂತಹ ಕಂಪನಿಗಳು ಕೂಡಾ ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಈ ಯುವಕರನ್ನು ನೇಮಿಸಿಕೊಳ್ಳಲು ಮುಂದೆ ಬರುತ್ತಿಲ್ಲ ಎಂದರು.
ಶಿಕ್ಷಣದ ವ್ಯಾಪಾರೀಕರಣದ ಕುರಿತು ಪ್ರಧಾನಿಗಳನ್ನು ತರಾಟೆಗೆ ತೆಗೆದುಕೊಂಡ ರಾಹುಲ್, ಪ್ರಧಾನ ಮಂತ್ರಿಗಳು ಶಿಕ್ಷಣ ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಮಾರಾಟ ಮಾಡುತ್ತಿದ್ದಾರೆ, ಅಲ್ಲದೆ ಶಾಲಾ ಕಾಲೇಜುಗಳು ವ್ಯಾಪಾರದ ಕೇಂದ್ರಗಳಾಗಿ ಪರಿವರ್ತನೆಯಾಗುತ್ತಿವೆ ಎಂದು ಕೇಂದ್ರ ಸರ್ಕಾರದ ಶಿಕ್ಷಣ ನೀತಿಗಳನ್ನು ಖಂಡಿಸಿದರು.