ಸಿಬಿಎಸ್‌ಇ ಬೋರ್ಡ್ ಟಾಪರ್- ಪ್ರಧಾನಿ ಮೋದಿ ನಡುವಿನ ಮನ್ ಕಿ ಬಾತ್

ಸಂಭಾಷಣೆಯ ಸಮಯದಲ್ಲಿ, ಪ್ರಧಾನಿ ವಿನಾಯಕ್ ಅವರನ್ನು ಎಷ್ಟು ರಾಜ್ಯಗಳಲ್ಲಿ ಪ್ರಯಾಣಿಸಿದ್ದಾರೆ ಎಂದು ಕೇಳಿದರು. ಇದಕ್ಕೆ ವಿದ್ಯಾರ್ಥಿ 'ಕೇರಳ ಮತ್ತು ತಮಿಳುನಾಡು ಮಾತ್ರ' ಎಂದು ಹೇಳಿದರು.

Last Updated : Jul 27, 2020, 09:40 AM IST
ಸಿಬಿಎಸ್‌ಇ ಬೋರ್ಡ್ ಟಾಪರ್- ಪ್ರಧಾನಿ ಮೋದಿ ನಡುವಿನ ಮನ್ ಕಿ ಬಾತ್ title=

ಕೊಚ್ಚಿ: ಕೇರಳದಲ್ಲಿ ವಾಸಿಸುತ್ತಿರುವ ಸಿಬಿಎಸ್‌ಇ (CBSE) ಬೋರ್ಡ್ ಟಾಪರ್ ವಿನಾಯಕ್ ಅವರನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರ ಕರೆ ಮಾಡಿ ಅಭಿನಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಫೋನ್‌ನಲ್ಲಿ ತಕ್ಷಣ, 'ಶಹಬಾಶ್ ವಿನಾಯಕ್ ಶಹಬಾಶ್! ಜೋಶ್ ಹೇಗಿದೆ? ಎಂದು ಕೇಳಿದರು. ದೇಶದ ಪ್ರಧಾನ ಮಂತ್ರಿಯ ಈ ಮಾತುಗಳನ್ನು ಕೇಳಿ ಸಂತಸಗೊಂಡ ವಿನಾಯಕ್ ಎಂ ಮಲ್ಲಿಕ್  ಇದಕ್ಕೆ ಪ್ರತಿಕ್ರಿಯೆಯಾಗಿ "ಹೈ ಸರ್" ಎಂದರು. 

ಟಾಪರ್ ವಿನಾಯಕನ ತಂದೆ ದಿನಗೂಲಿ ಕಾರ್ಮಿಕರಾಗಿದ್ದು. ವಿನಾಯಕ್ 12ನೇ ತರಗತಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಅವರು ಕೇರಳದ ನವೋದಯ ವಿದ್ಯಾಲಯದ ವಿದ್ಯಾರ್ಥಿ. ವಿನಾಯಕ್ ಎರ್ನಾಕುಲಂ ಮತ್ತು ಇಡುಕ್ಕಿ ಜಿಲ್ಲೆಗಳ ಗಡಿಯಲ್ಲಿರುವ ಹಳ್ಳಿಯಲ್ಲಿ ವಾಸಿಸುತ್ತಾರೆ. ವಿನಾಯಕ್ ವಾಣಿಜ್ಯ ವಿಷಯಗಳಲ್ಲಿ 500 ರಲ್ಲಿ 493 ಅಂಕಗಳನ್ನು ಗಳಿಸಿದ್ದಾರೆ. ಅಕೌಂಟನ್ಸಿ ಮತ್ತು ಬುಸಿನೆಸ್ ಸ್ಟಡೀಸ್ ವಿಷಯದಲ್ಲಿ 100 ಪ್ರತಿಶತ ಅಂಕಗಳನ್ನು ಪಡೆದಿದ್ದಾರೆ.

'ಮನ್ ಕಿ ಬಾತ್' (Mann ki baat) ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಧಾನಿ ಮತ್ತು ವಿದ್ಯಾರ್ಥಿ ನಡುವಿನ ಈ ಸಂಭಾಷಣೆಯನ್ನು ಭಾನುವಾರ ಪ್ರಸಾರ ಮಾಡಲಾಯಿತು. ಪ್ರಧಾನಿ ಮೋದಿ ಅವರೊಂದಿಗೆ ಮಾತನಾಡಿದ ನಂತರ ವಿನಾಯಕ್, "ಇಂದು ತನಗೆ ಬಹಳ ಸಂತೋಷದ ದಿನ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಸಂಭಾಷಣೆಯ ಸಮಯದಲ್ಲಿ ಪ್ರಧಾನಿ ವಿನಾಯಕ್ ಅವರನ್ನು ನೀವು ಎಷ್ಟು ರಾಜ್ಯಗಳಲ್ಲಿ ಪ್ರಯಾಣಿಸಿದ್ದೀರಿ ಎಂದು ಕೇಳಿದರು. ಇದಕ್ಕೆ ವಿದ್ಯಾರ್ಥಿ 'ಕೇರಳ ಮತ್ತು ತಮಿಳುನಾಡು ಮಾತ್ರ' ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಿಎಂ ಮೋದಿ ಅವರು ವಿನಾಯಕ್ ಅವರನ್ನು ದೆಹಲಿಗೆ ಬರುವಂತೆ  ಆಹ್ವಾನಿಸಿದರು. ಇದಕ್ಕೆ ವಿನಾಯಕ್ ಅವರು ಹೆಚ್ಚಿನ ಅಧ್ಯಯನಕ್ಕಾಗಿ ದೆಹಲಿ ವಿಶ್ವವಿದ್ಯಾಲಯಕ್ಕೆ ಅರ್ಜಿ ಸಲ್ಲಿಸುತ್ತಿರುವುದಾಗಿ ಉತ್ತರಿಸಿದರು.

ಭವಿಷ್ಯದಲ್ಲಿ ಬೋರ್ಡ್ ಪರೀಕ್ಷೆಗಳನ್ನು ತೆಗೆದುಕೊಳ್ಳುವ ವಿದ್ಯಾರ್ಥಿಗಳಿಗೆ ವಿನಾಯಕ್ ಯಾವ ಸಂದೇಶವನ್ನು ನೀಡಲು ಬಯಸುತ್ತಾರೆ ಎಂದು ಪ್ರಧಾನಿ ಅವರನ್ನು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವಿನಾಯಕ್, 'ಕಠಿಣ ಪರಿಶ್ರಮ ಮತ್ತು ಸಮಯವನ್ನು ಸರಿಯಾಗಿ ಬಳಸಿಕೊಳ್ಳುವುದು' ಮುಖ್ಯ ಎಂಬ ಸಂದೇಶ ನೀಡಿದರು.

ಪ್ರಧಾನಮಂತ್ರಿಯವರ "ಮನ್ ಕಿ ಬಾತ್" ಕಾರ್ಯಕ್ರಮದ ನಂತರ ನಟ-ರಾಜಕಾರಣಿ ಸುರೇಶ್ ಗೋಪಿ ಮತ್ತು ಅವರ ಶಿಕ್ಷಕರು ಮತ್ತು ಸ್ನೇಹಿತರು ಸೇರಿದಂತೆ ಅನೇಕ ಗಣ್ಯರು ಅವರನ್ನು ಕರೆದು ಅಭಿನಂದಿಸಿದ್ದಾರೆ ಎಂದು ವಿನಾಯಕ್ ಹೇಳಿದರು.

Trending News