ಬೆಂಗಳೂರು: ಮರೆತು ಹೋದ ಭಾರತೀಯ ಆಹಾರ ಪದ್ದತಿಗಳನ್ನು ಪುನರ್ ಪರಿಚಯಿಸಿ ದೇಸಿ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ರಾಜ್ಯ ಸರ್ಕಾರ ಗಮನಹರಿಸಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ತಿಳಿಸಿದರು.
ನಗರದ ನಳಪಾಕ ಹೋಟೆಲ್‌ನಲ್ಲಿ ಬೆಳ್ಳಿಹಬ್ಬದ ವರ್ಷಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ʼಸಂಕ್ರಾಂತಿ ಸವಿರುಚಿ ಸಪ್ತಾಹʼ ಉದ್ಘಾಟಿಸಿ ಮಾತನಾಡಿದರು.
ಇದನ್ನೂ ಓದಿ: ನಟಿ ಹನ್ಸಿಕಾ ಮೋಟ್ವಾನಿ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್... 'ಬಿಂದಾಸ್' ನಾಯಕಿ ಅರೆಸ್ಟ್ ಆಗ್ತಾರಾ!
ಸಿರಿಧಾನ್ಯಗಳು ನಮ್ಮ ಆರೋಗ್ಯಕ್ಕೆ ಪೂರಕ. ಅದರ ಉತ್ತೇಜನಕ್ಕೆ ಜ. 23-25ರವರಗೆ ಬೆಂಗಳೂರಿನ ಅರಮೆನೆ ಮೈದಾನದಲ್ಲಿ ಅಂತರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳ ಆಯೋಜಿಸಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.
ಬೆಂಗಳೂರು ಸಂಪೂರ್ಣ ಕರ್ನಾಟಕದ ಪರಿಕಲ್ಪನೆಯ ನಗರ. ಇಲ್ಲಿ ಎಲ್ಲಾ ತರದ ತಿನಿಸು ಲಭ್ಯ. ಅದರೆ ನಮ್ಮ ಕರ್ನಾಟಕದ ಆಹಾರಗಳ ಸತ್ವ ಮತ್ತು ಸವಿಯನ್ನು ಉಣಬಡಿಸುತ್ತಾ 25 ವರ್ಷಕ್ಕೆ ಪಾದಾರ್ಪಣೆ ಮಾಡಿದ ನಳಪಾಕ ಹೋಟೆಲ್‌ನ ಯಶಸ್ಸು ಅಭಿನಂದನೀಯ ಎಂದು ಚಲುವರಾಯಸ್ವಾಮಿ ಹೇಳಿದರು.
ಇದನ್ನೂ ಓದಿ: ಔಷಧೀಯ ಅಗತ್ಯವಿಲ್ಲ..! ರಕ್ತಹೀನತೆ ಸಮಸ್ಯೆಗೆ ಈ ಆಹಾರಗಳೇ ರಾಮಬಾಣ: ತಿಂಗಳಲ್ಲಿ ಸಿಗುತ್ತೆ ಬೆಸ್ಟ್ ರಿಸಲ್ಟ್..!
ಸಂಕ್ರಾಂತಿ ರೈತರ ಸಂಭ್ರಮ ಹಂಚಿಕೆಯ ಸುಗ್ಗಿ ಹಬ್ಬ . ಈ ಬಾರಿ ಜ 14 ರಂದು ನಾಗಮಂಗಲ ಕ್ಷೇತ್ರದ ದೇವಲಾಪುರ ಗ್ರಾಮದಲ್ಲಿ ವಿಶೇಷ ಸಂಕ್ರಾಂತಿ ಕಾರ್ಯಕ್ರಮ ಆಯೋಜಿಸಿದ್ದು ರೈತಾಪಿ ಕುಟುಂಬದೊಂದಿಗೆ ಒಂದು ದಿನ ಕಾಲಕಳೆಯಲು ಬಯಸಿದ್ದೇನೆ ಎಂದು ತಿಳಿಸಿದರು. ಮಾಜಿ ಸಚಿವ ಹಾಗೂ ಶಾಸಕ ಗೋಪಾಲಯ್ಯ ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭಹಾರೈಸಿದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ