2023ರವರೆಗೆ ದೇಶಾದ್ಯಂತ ಹಳಿಗಳ ಮೇಲೆ ಸಂಚರಿಸಲಿವೆ Private Trains, ಗಾರ್ಡ್ಸ್ - ಡ್ರೈವರ್ ಗಳನ್ನು ರೇಲ್ವೆ ವಿಭಾಗ ನಿಯೋಜಿಸಲಿದೆ

ಭಾರತೀಯ ರೈಲ್ವೆ ಇಲಾಖೆ ತನ್ನ ನೆಟ್‌ವರ್ಕ್‌ನಲ್ಲಿ ಖಾಸಗಿ ರೈಲುಗಳನ್ನು ಓಡಿಸುವ ದಿಕ್ಕಿನಲ್ಲಿ ಒಂದು ಒಂದು ಹೆಜ್ಜೆ ಮುಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಏಪ್ರಿಲ್ 2023 ರ ಹೊತ್ತಿಗೆ ಖಾಸಗಿ ರೈಲುಗಳು ರೈಲ್ವೆ ಹಳಿಗಳಲ್ಲಿ ಸಂಚರಿಸಲಿವೆ.

Last Updated : Jul 2, 2020, 09:45 PM IST
2023ರವರೆಗೆ ದೇಶಾದ್ಯಂತ ಹಳಿಗಳ ಮೇಲೆ ಸಂಚರಿಸಲಿವೆ Private Trains, ಗಾರ್ಡ್ಸ್ - ಡ್ರೈವರ್ ಗಳನ್ನು ರೇಲ್ವೆ ವಿಭಾಗ ನಿಯೋಜಿಸಲಿದೆ title=

ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ತನ್ನ ನೆಟ್‌ವರ್ಕ್‌ನಲ್ಲಿ ಖಾಸಗಿ ರೈಲುಗಳನ್ನು ಓಡಿಸುವ ದಿಕ್ಕಿನಲ್ಲಿ ಒಂದು ಒಂದು ಹೆಜ್ಜೆ ಮುಂದಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, ಏಪ್ರಿಲ್ 2023 ರ ಹೊತ್ತಿಗೆ ಖಾಸಗಿ ರೈಲುಗಳು ರೈಲ್ವೆ ಹಳಿಗಳಲ್ಲಿ ಸಂಚರಿಸಲಿವೆ. ಈ ರೈಲುಗಳನ್ನು ದೇಶಾದ್ಯಂತದ ಒಟ್ಟು 109 ಮಾರ್ಗಗಳಲ್ಲಿ ನಡೆಸಲಾಗುವುದು. ಖಾಸಗಿ ಕಂಪನಿಗಳ ಸ್ಪರ್ಧಾತ್ಮಕತೆಯನ್ನು ಆಧರಿಸಿ ಖಾಸಗಿ ರೈಲಿನ ಶುಲ್ಕವನ್ನು ನಿರ್ಧರಿಸಲಾಗುವುದು ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ. ಯಾದವ್ ಗುರುವಾರ ತಿಳಿಸಿದ್ದಾರೆ.

ಒಂದು ವಿಭಾಗದಲ್ಲಿ ಸಾರಿಗೆಯ ಇತರ ವಿಧಾನಗಳಲ್ಲಿನ ಸ್ಪರ್ಧೆಯನ್ನು ಆದರಿಸಿ ಶುಲ್ಕವನ್ನು ನಿಗದಿಪಡಿಸಲಾಗುವುದು ಮತ್ತು ಇದರಲ್ಲಿ ಏರ್ ಫೇರ್ ಹಾಗೂ ಎಸಿ ಬಸ್ ಗಳ ಶುಲ್ಕಗಳೂ ಕೂಡ ಶಾಮೀಲಾಗಿವೆ ಎಂದು ಅವರು ಹೇಳಿದ್ದಾರೆ. ಇದು ಸ್ಪರ್ಧೆಯ ಯುಗ ಎಂಬುದನ್ನು ನಾವು ನೆನಪಿನಲ್ಲಿಡಬೇಕು ಎಂದಿರುವ ಅವರು, ಐಆರ್‌ಸಿಟಿಸಿ ಈಗಾಗಲೇ ಕೆಲ ಖಾಸಗಿ ರೈಲುಗಳನ್ನು ಸಹ ಓಡಿಸಿದೆ ಎಂದು ಹೇಳಿದ್ದಾರೆ. ಏರ್ ಫೇರ್ ಮತ್ತು ಎಸಿ ಬಸ್‌ಗಳ ದರವನ್ನು ಹೋಲಿಸಿದ ನಂತರವೇ ಖಾಸಗಿ ರೈಲು ನಿರ್ವಾಹಕರು ಶುಲ್ಕವನ್ನು ಶುಲ್ಕವನ್ನು ನಿರ್ಧರಿಸಲಿದ್ದಾರೆ. ನಿರ್ವಾಹಕರು ನಿಗದಿಪಡಿಸಿದ ಶುಲ್ಕ ಹೆಚ್ಚಾಗಿರಲಿದೆ ಎಂದು ನಾನು ಭಾವಿಸುವುದಿಲ್ಲ ಎಂದು ಯಾದವ್ ಹೇಳಿದ್ದಾರೆ. ಇದಲ್ಲದೆ ಖಾಸಗಿ ರೈಲುಗಳ ಗಾರ್ಡ್ಸ್ ಹಾಗೂ ಚಾಲಕರನ್ನು ಕೂಡ ರೇಲ್ವೆ ವಿಭಾಗವೇ ನಿಯೋಜಿಸಲಿದೆ.

ನಾವು ರೈಲ್ವೆ ಪ್ರಯಾಣಿಕರ ವಿಭಾಗದ ಬಗ್ಗೆ ಮಾತನಾಡಿದರೆ ಅದು ನಷ್ಟದಲ್ಲಿದೆ ಎಂದು ಯಾದವ್ ಹೇಳಿದ್ದಾರೆ. ರೈಲ್ವೆ ವೆಚ್ಚವನ್ನು ಮರುಪಡೆಯಲು ಸಾಧ್ಯವಾಗುವ ರೀತಿಯಲ್ಲಿ ಬಿಡ್‌ಗಳನ್ನು ವಿನ್ಯಾಸಗೊಳಿಸಲಾಗಿದೆ ಎಂದು ಯಾದವ್ ಹೇಳಿದ್ದರೆ. ಅಂದರೆ ಖಾಸಗಿ ರೈಲು ನಿರ್ವಾಹಕರು ನಮಗೆ ಕನಿಷ್ಠ ಖಾತರಿ ವೆಚ್ಚ ಪಾವತಿಸಬೇಕಾಗಲಿದೆ. ನಾವು ಪ್ರಸ್ತುತ ಪ್ರಯಾಣಿಕರ ವಿಭಾಗದ ಕಾರ್ಯಾಚರಣೆಗಳಲ್ಲಿ ನಷ್ಟವನ್ನು ಅನುಭವಿಸುತ್ತಿದ್ದೇವೆ. ಈ ನಿರ್ದಿಷ್ಟ ಯೋಜನೆಯಲ್ಲಿ, ರೈಲ್ವೆಗೆ ಏನೂ ಹಾನಿಯಾಗುವುದಿಲ್ಲ ಎಂಬುದು ನಾವು ಖಾತರಿಪದಿಸುತ್ತೇವೆ. ಇಂತಹ  ಪರಿಸ್ಥಿತಿಯಲ್ಲಿ, ಇದು ರೈಲ್ವೆಯ ವೆಚ್ಚವನ್ನು ಪೂರೈಸಲು ಸಾಧ್ಯವಾಗುತ್ತದೆ ಮತ್ತು ರೈಲ್ವೆಗೆ ಆದಾಯವೂ ಹೆಚ್ಚುತ್ತದೆ ಎಂದು ಯಾದವ್ ಹೇಳಿದ್ದಾರೆ.

ರೈಲ್ವೆ ನೆಟ್ವರ್ಕ್ ಮೇಲೆ ಪ್ರಯಾಣಿಕರ ರೈಲುಗಳನ್ನು ಓಡಿಸಲು ಖಾಸಗಿ ಹೂಡಿಕೆಮಾಡಲು ಇದು ಮೊದಲ ಹೆಜ್ಜೆ. ಆದರೆ, ಇದನ್ನು ಭಾರತೀಯ ರೈಲ್ವೆ ಆಹಾರ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಕಳೆದ ವರ್ಷ ಲಖನೌ-ದೆಹಲಿ ತೇಜಸ್ ಎಕ್ಸ್‌ಪ್ರೆಸ್‌ನೊಂದಿಗೆ ಪ್ರಾರಂಭಿಸಿದೆ.

ಪ್ರಸ್ತುತ ಐಆರ್‌ಸಿಟಿಸಿ ವಾರಣಾಸಿ-ಇಂದೋರ್ ಮಾರ್ಗದಲ್ಲಿ ಕಾಶಿ-ಮಹಾಕಾಲ್ ಎಕ್ಸ್‌ಪ್ರೆಸ್, ಲಕ್ನೋ-ನವದೆಹಲಿ ತೇಜಸ್ ಮತ್ತು ಅಹಮದಾಬಾದ್-ಮುಂಬೈ ತೇಜಸ್ ಎಂಬ ಮೂರು ರೈಲುಗಳನ್ನು ನಿರ್ವಹಿಸುತ್ತಿದೆ. "ಆಧುನಿಕ ತಂತ್ರಜ್ಞಾನದೊಂದಿಗೆ ರೈಲು ಓಡಿಸುವುದು ಈ ಉಪಕ್ರಮದ ಉದ್ದೇಶವಾಗಿದೆ, ಇದು ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡುತ್ತದೆ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ" ಎಂದು ರೈಲ್ವೆ ಹೇಳಿದೆ. ಇದು ಉದ್ಯೋಗ ಸೃಷ್ಟಿಗೆ ಉತ್ತೇಜನ ನೀಡುತ್ತದೆ, ಸುರಕ್ಷತೆಯನ್ನು ಸುಧಾರಿಸುತ್ತದೆ ಮತ್ತು ಪ್ರಯಾಣಿಕರಿಗೆ ಜಾಗತಿಕ ಪ್ರಯಾಣದ ಅನುಭವವನ್ನು ನೀಡುತ್ತದೆ.

Trending News