ಕಾಂಗ್ರೆಸ್ ಪಕ್ಷ ತ್ಯಜಿಸಿದ ಪ್ರಿಯಾಂಕಾ ಚತುರ್ವೇದಿ

ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಶುಕ್ರವಾರದಂದು ಪಕ್ಷವನ್ನು ತೊರೆದಿದ್ದಾರೆ.ಪಕ್ಷವನ್ನು ತೊರೆಯುವ ಮೊದಲು ವಾಟ್ಸಪ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಾಂಗ್ರೆಸ್ ಪಕ್ಷದ ಕುರಿತಾದ ಉಲ್ಲೇಖವನ್ನು ಅಳಿಸಿ ಹಾಕಿದ್ದಾರೆ. 

Last Updated : Apr 19, 2019, 12:32 PM IST
ಕಾಂಗ್ರೆಸ್ ಪಕ್ಷ ತ್ಯಜಿಸಿದ ಪ್ರಿಯಾಂಕಾ ಚತುರ್ವೇದಿ title=

ನವದೆಹಲಿ: ಕಾಂಗ್ರೆಸ್ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಶುಕ್ರವಾರದಂದು ಪಕ್ಷವನ್ನು ತೊರೆದಿದ್ದಾರೆ.ಪಕ್ಷವನ್ನು ತೊರೆಯುವ ಮೊದಲು ವಾಟ್ಸಪ್, ಟ್ವಿಟ್ಟರ್ ಹಾಗೂ ಇನ್ಸ್ಟಾಗ್ರಾಂ ನಲ್ಲಿ ಕಾಂಗ್ರೆಸ್ ಪಕ್ಷದ ಕುರಿತಾದ ಉಲ್ಲೇಖವನ್ನು ಅಳಿಸಿ ಹಾಕಿದ್ದಾರೆ. 

ಪ್ರಿಯಾಂಕಾ ಚತುರ್ವೇದಿಯವರ ಈ ಕ್ರಮ ಪ್ರಮುಖವಾಗಿ ಈ ಹಿಂದೆ ಪಕ್ಷದ ನಾಯಕರು ತೋರಿದ ಅನುಚಿತ ವರ್ತನೆ ಹಿನ್ನಲೆ ನಡುವೆಯೂ ಅವರನ್ನು ಮತ್ತೆ ಪಕ್ಷದ ಸಂಘಟನೆಗೆ ಸೇರಿಸಿಕೊಂಡಿರುವುದಕ್ಕೆ ಅವರು ಟ್ವಿಟ್ಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ ಎರಡು ದಿನಗಳ ನಂತರ ಬಂದಿದೆ.ಕಾಂಗ್ರೆಸ್ ಪಕ್ಷದಲ್ಲಿ ರಕ್ತ ಮತ್ತು ಬೆವರನ್ನು ಹರಿಸಿದರ ಬದಲಾಗಿ ಗೂಂಡಾಗಳು ಆಧ್ಯತೆ ಪಡೆಯುತ್ತಿದ್ದಾರೆ.ತಮಗೆ ಬೆದರಿಕೆ ಒಡ್ಡಿದವರೆಲ್ಲ ಈಗ ಮತ್ತೆ ಪಕ್ಷದಲ್ಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.  

ಈ ಹಿಂದೆ ಉತ್ತರ ಪ್ರದೇಶ ಕಾಂಗ್ರೆಸ್ ಸಮಿತಿ (ಯುಪಿಸಿಸಿ) ಮಥುರಾದಲ್ಲಿ ಪ್ರಿಯಾಂಕಾ ಚತುರ್ವೇದಿ ರಫೇಲ್ ಒಪ್ಪಂದದ ಕುರಿತಾಗಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಕೆಲವು ಕಾರ್ಯಕರ್ತರು ಅಶಿಸ್ತು ತೋರಿದ ಹಿನ್ನಲೆಯಲ್ಲಿ ಅವರನ್ನು ಪಕ್ಷದಿಂದ ತೆಗೆದುಹಾಕಲಾಗಿತ್ತು.ಆದರೆ ಈಗ ಅವರನ್ನು ಪುನಃ ಪಕ್ಷದ ಸಂಘಟನೆಯಲ್ಲಿ ಸೇರಿಸಿಕೊಂಡಿರುವುದಕ್ಕೆ ಪ್ರಿಯಾಂಕಾ ಚತುರ್ವೇದಿ ಆಕ್ಷೇಪ ವ್ಯಕ್ತಪಡಿಸಿದ್ದರು.
 

Trending News