ರಾಹುಲ್ ಗಾಂಧಿ ರಾಜಕೀಯಕ್ಕೆ ಲಾಯಕ್ಕಿಲ್ಲ, ಕಾಂಗ್ರೆಸ್ ಸೇವಾ ನಿವೃತ್ತಿ ನೀಡಲಿ: ಹಿಮಾಂತ ವಿಶ್ವ ಶರ್ಮಾ

ಅಸ್ಸಾಂನ ಹಣಕಾಸು ಸಚಿವ ಮತ್ತು ಬಿಜೆಪಿ ನಾಯಕ ಹಿಮಂತ ವಿಶ್ವ ಶರ್ಮಾ ಗುರುವಾರ ರಾಹುಲ್ ಗಾಂಧಿಯವರು ರಾಜಕೀಯಕ್ಕೆ ಸೂಕ್ತವಲ್ಲ ಎಂದಿದ್ದಾರೆ.

Last Updated : May 24, 2019, 07:28 AM IST
ರಾಹುಲ್ ಗಾಂಧಿ ರಾಜಕೀಯಕ್ಕೆ ಲಾಯಕ್ಕಿಲ್ಲ, ಕಾಂಗ್ರೆಸ್ ಸೇವಾ ನಿವೃತ್ತಿ ನೀಡಲಿ: ಹಿಮಾಂತ ವಿಶ್ವ ಶರ್ಮಾ title=

ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿದ ಬೆನ್ನಲ್ಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಸೋಲಿನ ನಂತರ, ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ರಾಜಕೀಯವನ್ನು ತೊರೆಯುವಂತೆ ಹಲವರು ಸಲಹೆ ನೀಡಲಾರಂಭಿಸಿದ್ದಾರೆ. 

ಏತನ್ಮಧ್ಯೆ, ಅಸ್ಸಾಂನ ಹಣಕಾಸು ಸಚಿವ ಮತ್ತು ಬಿಜೆಪಿ ನಾಯಕ ಹಿಮಂತ ವಿಶ್ವ ಶರ್ಮಾ ಗುರುವಾರ ರಾಹುಲ್ ಗಾಂಧಿಯವರು ರಾಜಕೀಯಕ್ಕೆ ಸೂಕ್ತವಲ್ಲ. ಕಾಂಗ್ರೆಸ್ ಪಕ್ಷವು 'ರಾಹುಲ್ ಅವರಿಗೆ ಸೇವೆಯಿಂದ ನಿವೃತ್ತಿ ನೀಡಬೇಕು ಎಂದು ಹೇಳಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ 89 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಬಿಜೆಪಿ 300ಕ್ಕೂ ಅಧಿಕ ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪ್ರಚಂಡ ಬಹುಮತ ಪಡೆದಿದೆ.

ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಹಿಮಾಂತ ಶರ್ಮಾ, "ನಾನು ಅವರನ್ನು (ರಾಹುಲ್ ಗಾಂಧಿ) ಸುಮಾರು 20 ಬಾರಿ ಭೇಟಿ ಮಾಡಿದ್ದೇನೆ. ಅವರ ಬಗ್ಗೆ ಅನಂಗೆ ಅನುಕಂಪ ಬರುತ್ತದೆ. ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಪಕ್ಷದಲ್ಲಿ ರಾಹುಲ್ ಗಾಂಧಿಗೆ ಬಲವಂತವಾಗಿ ಜವಾಬ್ದಾರಿ ಹೇರಿದೆ. ಅವರು ನಿರ್ದಿಷ್ಟ ಹಿನ್ನೆಲೆಯಿಂದ ಬಂದ ವ್ಯಕ್ತಿಯಾಗಿದ್ದು, ತಮ್ಮ ಸಹೋದ್ಯೋಗಿಗಳನ್ನು ಗೌರವಿಸುವುದಿಲ್ಲ" ಎಂದು ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಅವರು, "ರಾಹುಲ್ ಗಾಂಧಿಗೆ ನಿವೃತ್ತಿ ನೀಡುವುದೇ ಸೂಕ್ತ. ಒಂದು ವೇಳೆ ರಾಹುಲ್ ರಾಜಕೀಯ ತೊರೆಯದಿದ್ದರೆ ಮುಂದಿನ 25 ವರ್ಷಗಳಲ್ಲಿ ಏಕೈಕ ಆಡಳಿತ ಪಕ್ಷವಾಗಿ ಬಿಜೆಪಿ ಹೊರಹೊಮ್ಮಲಿದ್ದು, ವಿರೋಧ ಪಕ್ಷವೇ ಇಲ್ಲದಂತಾಗುತ್ತದೆ. ಕೇವಲ ಮೋದಿ ಮತ್ತು ಬಿಜೆಪಿ ಮಾತ್ರ ಕಾಣಸಿಗುತ್ತಾರೆ" ಎಂದು ಹೇಳಿದ್ದಾರೆ.
 

Trending News