ಮೋದಿ ಸರ್ಕಾರದ 'ಒಂದು ರಾಷ್ಟ್ರ,ಒಂದು ಚುನಾವಣೆ' ನಡೆಗೆ ರಜನಿಕಾಂತ್ ಬೆಂಬಲ

    

Last Updated : Jul 15, 2018, 04:53 PM IST
ಮೋದಿ ಸರ್ಕಾರದ 'ಒಂದು ರಾಷ್ಟ್ರ,ಒಂದು ಚುನಾವಣೆ' ನಡೆಗೆ ರಜನಿಕಾಂತ್ ಬೆಂಬಲ  title=

ಚೆನ್ನೈ: ನಟ ರಾಜಕಾರಣಿ ರಜನಿಕಾಂತ್ ಕೇಂದ್ರ ಸರ್ಕಾರದ ಒಂದು ರಾಷ್ಟ್ರ ಒಂದು ಚುನಾವಣೆಯ ಪದ್ದತಿಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ  ಸಮಯ ಮತ್ತು ಹಣವನ್ನು ಕೂಡ ಉಳಿಸಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿಗೆ ಕಾನೂನು ಆಯೋಗವು ರಾಷ್ಟ್ರದ ಎಲ್ಲ ಪಕ್ಷಗಳ ಜೊತೆಗೆ ಮಾತುಕತೆ ನಡೆಸಿದ್ದವು.ಆದರೆ ಈ ನಡೆಗೆ ನಾಲ್ಕು ಪಕ್ಷಗಳು ಬೆಂಬಲಿಸಿದ್ದರೆ ಒಂಬತ್ತು ಪಕ್ಷಗಳು ವಿರೋಧಿಸಿದ್ದವು.

ಈಗ ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಸೂಪರ್ ಸ್ಟಾರ್ ರಜನಿಕಾಂತ್ " ಇಂದು ಉತ್ತಮ ವಾದದ್ದು, ಇದರಿಂದ ಹಣ ಮತ್ತು ಸಮಯವನ್ನು ಉಳಿಸಬಹುದು ಆದ್ದರಿಂದ ಎಲ್ಲ ಪಕ್ಷಗಳು ಈ ವಿಚಾರವಾಗಿ ಕೂಡಿ ಕೆಲಸ ಮಾಡಬೇಕು ಮತ್ತು ಸಹಕರಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕಳೆದ ವರ್ಷ ಡಿಸೆಂಬರ್ ನಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದ ರಜನಿಕಾಂತ್  ಇನ್ನು ಪಕ್ಷದ ಹೆಸರು ಮತ್ತು ಚಿನ್ಹೆಯನ್ನು ಅನಾವರಣಗೊಳಿಸಬೇಕಾಗಿದೆ.

ಇತ್ತಿಚೆಗಿನ ಕಾನೂನು ಆಯೋಗದ ಸಭೆಯಲ್ಲಿ ಬಹುತೇಕ ಪಕ್ಷಗಳು ಕೇಂದ್ರ ಸರಕಾರದ ಈ ನಿಲುವನ್ನು ವಿರೋಧಿಸುತ್ತಾ ಇದು ಒಕ್ಕೂಟ ವ್ಯವಸ್ಥೆಗೆ ವಿರೋಧವಾದಂತದ್ದು ಎಂದು ಅಭಿಪ್ರಾಯಪಟ್ಟರಲ್ಲದೆ ಸದ್ಯದ ಸ್ಥಿತಿಗೆ ಇದು ಯೋಗ್ಯವಲ್ಲ ಎಂದು ತಿಳಿಸಿದ್ದವು.

 

Trending News