'ಮಹಾ'ಸೂತ್ರಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದ ಅಠವಾಳೆಗೆ ಶಿವಸೇನಾ ಹೇಳಿದ್ದೇನು?

 ಮಹಾರಾಷ್ಟ್ರದಲ್ಲಿನ ಬಿಕ್ಕಟ್ಟನ್ನು ಕೊನೆಗೊಳಿಸಲು ಹೊಸ ಸೂತ್ರ ಮಂಡಿಸಿರುವ ಕೇಂದ್ರ ಸಚಿವ ರಾಮದಾಸ್ ಅಠವಾಳೆಗೆ ಈಗ ಶಿವಸೇನಾ ನಾಯಕ ಸಂಜಯ್ ರೌತ್ ತಿರುಗೇಟು ನೀಡಿದ್ದಾರೆ.

Last Updated : Nov 19, 2019, 03:23 PM IST
'ಮಹಾ'ಸೂತ್ರಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ್ದ ಅಠವಾಳೆಗೆ ಶಿವಸೇನಾ ಹೇಳಿದ್ದೇನು? title=

ನವದೆಹಲಿ: ಮಹಾರಾಷ್ಟ್ರದಲ್ಲಿನ ಬಿಕ್ಕಟ್ಟನ್ನು ಕೊನೆಗೊಳಿಸಲು ಹೊಸ ಸೂತ್ರ ಮಂಡಿಸಿರುವ ಕೇಂದ್ರ ಸಚಿವ ರಾಮದಾಸ್ ಅಠವಾಳೆಗೆ ಈಗ ಶಿವಸೇನಾ ನಾಯಕ ಸಂಜಯ್ ರೌತ್ ತಿರುಗೇಟು ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿರುವ ಸಂಜಯ್ ರೌತ್  ಧನ್ಯವಾದಗಳು, ಆದರೆ ಧನ್ಯವಾದಗಳು ಇಲ್ಲ. ಅವರು ನಮ್ಮ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಹೇಳಿದರು, ಇದೆ ವೇಳೆ ಶಿವಸೇನಾ ನೇತೃತ್ವದ ಸರ್ಕಾರ ಶೀಘ್ರದಲ್ಲೇ ಅಧಿಕಾರಕ್ಕೆ ಬರಲಿದೆ ಎಂದು ಪ್ರತಿಪಾದಿಸಿದರು.

ಸಂಜಯ್ ರೌತ್ ಅವರು ಸೋಮವಾರ ಸಂಜೆ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಮುಖಂಡ ಶರದ್ ಪವಾರ್ ಅವರನ್ನು ಭೇಟಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಶಿವಸೇನೆ ಜೊತೆಗಿನ ಮೈತ್ರಿ ಕುರಿತು ಎನ್‌ಸಿಪಿ ಮತ್ತು ಕಾಂಗ್ರೆಸ್ ಇನ್ನೂ ಯಾವುದೇ ನಿರ್ಧಾರವನ್ನು ಪ್ರಕಟಿಸಿಲ್ಲ ಮತ್ತು ನಿನ್ನೆ ಕೂಡ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ನಂತರ ಹೆಚ್ಚಿನ ಚರ್ಚೆಗಳು ಅಗತ್ಯವೆಂದು ಪವಾರ್ ಹೇಳಿದ್ದಾರೆ. ಈ ಅನಿಶ್ಚಿತತೆಯ ನಡುವೆ ಈಗ ರಾಮದಾಸ್ ಅಥವಾಳೆ, ಬಿಜೆಪಿ ಮತ್ತು ಸೇನೆಯ ನಡುವೆ ಎಲ್ಲವೂ ಮುಗಿದಿಲ್ಲ ಎಂದು ಹೇಳಿದ್ದಾರೆ.

'ನಾನು ಸಂಜಯ್ ರೌತ್ ಜಿ ಅವರೊಂದಿಗೆ ರಾಜಿ ಬಗ್ಗೆ ಮಾತನಾಡಿದ್ದೇನೆ. ಬಿಜೆಪಿಗೆ ಮೂರು ವರ್ಷಗಳ ಮುಖ್ಯಮಂತ್ರಿತ್ವದ ಸೂತ್ರವನ್ನು ಮತ್ತು ಶಿವಸೇನೆಗೆ ಎರಡು ವರ್ಷಗಳನ್ನು ಸೂಚಿಸಿದ್ದೇನೆ, ಅದಕ್ಕೆ ಅವರು ಬಿಜೆಪಿ ಒಪ್ಪಿದರೆ ಶಿವಸೇನೆ ಬಗ್ಗೆ ಯೋಚಿಸಬಹುದು ಎಂದು ಹೇಳಿದರು. ಇದನ್ನು ತಾವು ಬಿಜೆಪಿಯೊಂದಿಗೆ ಚರ್ಚಿಸುವುದಾಗಿ ರಾಮದಾಸ್ ಅಠವಾಳೆ ಹೇಳಿದ್ದಾರೆ.

Trending News