Helpline for the disabled: ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠಾವಳೆ ಮತ್ತು ಅಂಗವಿಕಲರ ವ್ಯವಹಾರಗಳ ಕಾರ್ಯದರ್ಶಿ ರಾಜೇಶ್ ಅಗರ್ವಾಲ್ ಅವರು 'ಅಂತರರಾಷ್ಟ್ರೀಯ ಪರ್ಪಲ್ ಫೆಸ್ಟ್ ಗೋವಾ 2024' ಸಂದರ್ಭದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ವಿಕಲಚೇತನರಿಗೆ ನೆರವು ನೀಡುವುದು ಈ ಸಹಾಯವಾಣಿಯ ಉದ್ದೇಶವಾಗಿದೆ.
ಮೋದಿ ಸರ್ಕಾರದಲ್ಲಿ ಸಚಿವರಾಗಿರುವ ರಾಮದಾಸ್ ಅಠಾವಳೆ ಅವರು ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುತ್ತಾರೆ. ನಿತೀಶ್ ಕುಮಾರ್ ಎನ್ಡಿಎಗೆ ಸೇರ್ಪಡೆಗೊಳ್ಳುವ ಬಗ್ಗೆ ಆಶ್ಚರ್ಯಕರ ಹೇಳಿಕೆಗಾಗಿ ಅವರು ಮತ್ತೊಮ್ಮೆ ಸುದ್ದಿಯಾಗಿದ್ದಾರೆ.ನಿತೀಶ್ ಕುಮಾರ್ ಅವರು ಯಾವಾಗ ಬೇಕಾದರೂ ಎನ್ ಡಿಎ ಸೇರಬಹುದು ಮತ್ತು ಅವರು ನಮ್ಮವರು ಎಂದು ಹೇಳಿದರು.ಪಾಟ್ನಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ.
Maharashtra News: ಸಮೀರ್ ವಾಂಖೆಡೆ (Sameer Wankhede) ಅವರ ಪತ್ನಿ ಕ್ರಾಂತಿ ರೆಡೆಕರ್ (Kranti Redekar Wankhede) ಅವರು ಕೆಲವು ದಿನಗಳ ಹಿಂದೆ ಮೂರು ಜನರು ಮನೆಯ ರೆಕೀ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಈ ಕುರಿತು ನಾವು ಪೊಲೀಸರಿಗೆ ಸಿಸಿಟಿವಿ ದೃಶ್ಯಾವಳಿಗಳನ್ನು ನೀಡುತ್ತೇವೆ ಎಂದು ಹೇಳಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ,ಕೇಂದ್ರ ಸಚಿವ ರಾಮದಾಸ್ ಅಠವಾಲೆ ಭಾನುವಾರ ಅವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟಕ್ಕೆ (ಎನ್ಡಿಎ) ಸೇರಲು ಆಹ್ವಾನಿಸಿದರು.
ಕೇಂದ್ರ ಸಚಿವ ರಾಮದಾಸ್ ಅಥಾವಾಲೆ ಅವರು ಗುರುವಾರ ಬಾಲಿವುಡ್ ನಟಿ ಕಂಗನಾ ರನೌತ್ ಅವರನ್ನು ಮುಂಬೈ ನಿವಾಸದಲ್ಲಿ ಭೇಟಿಯಾದರು ಮತ್ತು ಬಿಜೆಪಿ ಅಥವಾ ಆರ್ಪಿಐ ಅವರು ಎರಡೂ ಪಕ್ಷಗಳಿಗೆ ಸೇರಲು ನಿರ್ಧರಿಸಿದರೆ ಅವರನ್ನು ಸ್ವಾಗತಿಸುತ್ತೇವೆ ಎಂದು ಹೇಳಿದರು. ಆದರೆ ರಾಜಕೀಯಕ್ಕೆ ಸೇರಲು ತನಗೆ ಯಾವುದೇ ಆಸಕ್ತಿಯಿಲ್ಲ ಎಂದು ಕಂಗನಾ ಹೇಳಿದ್ದಾರೆಂದು ಅಥಾವಾಲೆ ಸಭೆಯ ನಂತರ ಸ್ಪಷ್ಟನೆ ನೀಡಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ಭಾರತೀಯ ಜನತಾ ಪಕ್ಷದಿಂದ ಇರಬೇಕು ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಮುಖ್ಯಸ್ಥ ಮತ್ತು ಕೇಂದ್ರ ಸಚಿವ ರಾಮದಾಸ್ ಅಠವಾಳೆ ಶನಿವಾರ ಹೇಳಿದ್ದಾರೆ. ಶಿವಸೇನೆ ಮುಖಂಡ ಆದಿತ್ಯ ಠಾಕ್ರೆ ಸಿಎಂ ಆದರೆ ಅವರಿಗೆ ಯಾವುದೇ ಅನುಭವವಿಲ್ಲದ ಕಾರಣ ಅದು ಅವಮಾನ ಎಂದು ಹೇಳಿದ್ದಾರೆ.
ಪಾಕಿಸ್ತಾನವು ತನಗೆ ಒಳ್ಳೆಯದನ್ನು ಬಯಸಿದರೆ, ಅದು ನಮಗೆ ಪಿಒಕೆ ಅನ್ನು ಹಸ್ತಾಂತರಿಸಬೇಕು. ಪಾಕಿಸ್ತಾನದ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ಇಮ್ರಾನ್ ಖಾನ್ ಈ ಕೆಲಸವನ್ನು ಮಾಡಲೇಬೇಕು ಎಂದು ರಾಮದಾಸ್ ಅಥಾವಾಲೆ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತುಎನ್.ಚಂದ್ರಬಾಬು ನಾಯ್ಡು ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಗೈರು ಆಗುವ ಕುರಿತಾಗಿ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ರಾಮ್ ದಾಸ್ ಅಥವಾಲೆ ಚುನಾವಣೆ ಫಲಿತಾಂಶದ ನಂತರ ಅವರಿಬ್ಬರಿಗೂ ಈಗ ಮೋದಿ ಎದುರಿಸುವುದು ಕಷ್ಟವಾಗಿರಬಹುದು ಎಂದು ಹೇಳಿದರು.
2014 ರ ಚುನಾವಣೆಯಲ್ಲಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ಗಳಿಸಿದ ಸ್ಥಾನಗಳಿಗಿಂತಲೂ ಕಡಿಮೆ ಸ್ಥಾನವನ್ನು ಬಿಜೆಪಿ ಗಳಿಸಲಿದೆ ಎಂದು ಕೇಂದ್ರ ಸಚಿವ್ ರಾಮ್ ದಾಸ್ ಅಥವಾಳೆ ಭವಿಷ್ಯ ನುಡಿದಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.