ರಾಜಸ್ತಾನದ ಕರಣಪುರ್ ನಲ್ಲಿ ಮರುಚುನಾವಣೆ, ಶೇ 86.92 ರಷ್ಟು ಮತದಾನ

ಸೋಮವಾರ ರಾಜಸ್ಥಾನದ ಶ್ರೀ ಗಂಗಾನಗರ್ ಜಿಲ್ಲೆಯ ಕರನ್ಪುರ್ ವಿಧಾನಸಭಾ ಕ್ಷೇತ್ರದ ಮರು-ಮತದಾನ ನಡೆದಿದ್ದು, ಕ್ಷೇತ್ರದಲ್ಲಿ ಶೇ 86.92 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.

Last Updated : Dec 10, 2018, 08:19 PM IST
ರಾಜಸ್ತಾನದ ಕರಣಪುರ್ ನಲ್ಲಿ ಮರುಚುನಾವಣೆ, ಶೇ 86.92 ರಷ್ಟು ಮತದಾನ title=

ಜೈಪುರ: ಸೋಮವಾರ ರಾಜಸ್ಥಾನದ ಶ್ರೀ ಗಂಗಾನಗರ್ ಜಿಲ್ಲೆಯ ಕರನ್ಪುರ್ ವಿಧಾನಸಭಾ ಕ್ಷೇತ್ರದ ಮರು-ಮತದಾನ ನಡೆದಿದ್ದು, ಕ್ಷೇತ್ರದಲ್ಲಿ ಶೇ 86.92 ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.

ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದ ಮತದಾನದ ಪ್ರಕ್ರಿಯೆಯು ಸಾಯಂಕಾಲ 5 ಗಂಟೆಯವರೆಗೆ ನಡೆಯಿತು ಎಂದು ಚುನಾವಣಾ ಆಯೋಗ ಹೇಳಿಕೆಯಲ್ಲಿ ತಿಳಿಸಿದೆ.ಮತದಾನ ಕೇಂದ್ರ ಸಂಖ್ಯೆ 163 ರಲ್ಲಿ ತಾಂತ್ರಿಕ ಸಮಸ್ಯೆಗಳಿಂದ ಮರು ಮತದಾನ ನಡೆದಿದೆ ಎಂದು ಚುನಾವಣಾ ಆಯೋಗದ ಮುಖ್ಯ ಚುನಾವಣಾಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.2013 ರಲ್ಲಿಯೂ ಸಹಿತ ರಾಜ್ಯದ ಆರು ಕ್ಷೇತ್ರಗಳ ಮರು ಚುನಾವಣೆ ಎಂಟು ಕೇಂದ್ರಗಳಲ್ಲಿ ನಡೆದಿತ್ತು.

ಇದೇ ಡಿಸೆಂಬರ್ 7 ರಂದು ಒಟ್ಟು 200 ಕ್ಷೇತ್ರಗಳ ಪೈಕಿ 199 ಕ್ಷೇತ್ರಗಳಲ್ಲಿ ಮತದಾನ ನಡೆದಿತ್ತು.ಇನ್ನು ಅಳ್ವಾರ್ ನ ರಾಮಗಡ್ ಕ್ಷೇತ್ರದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಅಭ್ಯರ್ಥಿ ಲಕ್ಷ್ಮಣ್ ಸಿಂಗ್ ಅವರು ಮೃತಪಟ್ಟಿರುವ ಕಾರಣ ಚುನಾವಣೆ ನಂತರ ನಡೆಯಲಿದೆ ಎಂದು ತಿಳಿದುಬಂದಿದೆ. 

Trending News