ನವದೆಹಲಿ: ಇಂದು ದೇಶಾದ್ಯಂತ 70ನೇ ಗಣರಾಜ್ಯೋತ್ಸವ ಸಂಭ್ರಮ. ಈ ಸಂದರ್ಭದಲ್ಲಿ ಐತಿಹಾಸಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನುದ್ದೇಶಿಸಿ ಮಾಡಲಿರುವ ಭಾಷಣಕ್ಕಾಗಿ ಇಡೀ ದೇಶವೂ ಕಾತುರದಿಂದ ಕಾಯುತ್ತಿದೆ. ಅದರಲ್ಲೂ 2019 ರ ಲೋಕಸಭಾ ಚುನಾವಣೆಗೂ ಮುನ್ನ ನಡೆಯುತ್ತಿರುವ ಕೊನೆಯ ಗಣರಾಜ್ಯೋತ್ಸವ ಇದಾಗಿರುವುದರಿಂದ ಮತ್ತಷ್ಟು ಕುತೂಹಲ ಮೂಡಿಸಿದೆ.
Delhi: #RepublicDay2019 parade will begin at Rajpath at 9.50 am, prior to which Prime Minister Narendra Modi will pay tribute at the Amar Jawan Jyoti pic.twitter.com/ByzZ4nwZTs
— ANI (@ANI) January 26, 2019
ಇಂಡಿಯಾ ಗೇಟ್ ಬಳಿ ಇರುವ ಅಮರ್ ಜವಾನ್ ಜ್ಯೋತಿ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಆಚರಣೆಗೆ ಚಾಲನೆ ನೀಡಿದ್ದು, ಗಣರಾಜ್ಯೋತ್ಸವದ ಪ್ರಮುಖ ಅತಿಥಿಯಾಗಿ ಆಗಮಿಸಿರುವ ದಕ್ಷಿಣ ಆಫ್ರಿಕಾ ಅಧ್ಯಕ್ಷ ಸಿರಿಲ್ ರಾಮಫೊಸ ಮತ್ತು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಪ್ರಧಾನಿಗೆ ಸಾಥ್ ನೀಡಿದ್ದಾರೆ.
Prime Minister Narendra Modi pays tribute at the Amar Jawan Jyoti. #RepublicDay2019 pic.twitter.com/mykhT7oxxP
— ANI (@ANI) January 26, 2019
ಗಾಂಧೀಜಿ ಅವರ 150ನೇ ಜನ್ಮದಿನದ ಹಿನ್ನೆಲೆಯಲ್ಲಿ ಹಲವು ರಾಜ್ಯಗಳಿಂದ ಸ್ತಬ್ಧ ಚಿತ್ರಗಳ ಗೌರವ ಸಲ್ಲಿಸಲಾಗುತ್ತಿದ್ದು, ಗಾಂಧೀಜಿ ನೆನಪುಗಳ ಅನಾವರಣವಾಗಲಿದೆ. ರಾಜಪಥ ಮಾರ್ಗದಲ್ಲಿ ನಡೆಯುವ ಪಥಸಂಚಲನದಲ್ಲಿ ಲೆಪ್ಟಿನೆಂಟ್ ಭಾವನಾ ಕಸ್ತೂರಿ ಅವರು 144 ಯೋಧರ ತಂಡವನ್ನು ಮುನ್ನಡೆಸಲಿದ್ದು, ಈ ಮೂಲಕ ಗಣರಾಜ್ಯೋತ್ಸವ ಪರೇಡ್ನಲ್ಲಿ ಇದೇ ಮೊದಲ ಬಾರಿಗೆ ಪುರುಷ ತುಕಡಿಗೆ ಮಹಿಳಾ ಅಧಿಕಾರಿ ಸಾರಥ್ಯ ವಹಿಸುತ್ತಿದ್ದಾರೆ. ಓರ್ವ ಮಹಿಳಾ ಅಧಿಕಾರಿ ಬೈಕ್ ಸಾಹಸವನ್ನೂ ಪ್ರದರ್ಶಿಸಲಿದ್ದಾರೆ.
ಗಮನ ಸೆಳೆಯಲಿರುವ ಸ್ತಬ್ಧಚಿತ್ರಗಳು
ವಿಜಯ ಚೌಕದಿಂದ ಬೆಳಗ್ಗೆ 9:50ಕ್ಕೆ ಪಥಸಂಚಲನ ಆರಂಭವಾಗಲಿದ್ದು, ರಾಜಪಥ, ತಿಲಕ್ ಮಾರ್ಗ, ಬಹದ್ದೂರ್ ಶಾ ಝಫರ್ ಮಾರ್ಗ, ನೇತಾಜಿ ಸುಭಾಷ್ ಮಾರ್ಗವಾಗಿ ಸಾಗಿ ಕೆಂಪು ಕೋಟೆ ತಲುಪಲಿದೆ. 90 ನಿಮಿಷಗಳ ಪೆರೇಡ್ನಲ್ಲಿ ವಿವಿಧ ರಾಜ್ಯಗಳ ಹಾಗೂ ಸರ್ಕಾರಿ ಇಲಾಖೆಗಳ 22 ಸ್ತಬ್ಧಚಿತ್ರಗಳ ಪ್ರದರ್ಶನ ಸಹ ನಡೆಯಲಿದೆ.
ಸೇನಾ ಬಲ ಪ್ರದರ್ಶನ
ಗಣರಾಜ್ಯೋತ್ಸವದ ಪರೇಡ್ನಲ್ಲಿ ಜೈವಿಕ ಇಂಧನದ ಮೂಲಕ ಹಾರಾಟ ನಡೆಸುವ ಎಎನ್-32 ಯುದ್ದ ವಿಮಾನ ಪರೇಡ್ನಲ್ಲಿ ಕಾಣಿಸಿಕೊಳ್ಳಲಿದ್ದು, ಇತ್ತೀಚೆಗಷ್ಟೇ ಭಾರತೀಯ ಸೇನೆಗೆ ಸೇರ್ಪಡೆಗೊಂಡಿರುವ ಅಮೆರಿಕಾದ ಎಂ 777 ಎ-2 ಆರ್ಟಿಲರಿ ಗನ್ ಹಾಗೂ ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಂಡಿರುವ ಕೆ-9 ವಜ್ರ ಆರ್ಟಿಲರಿ ಗನ್ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆ ಸಿದ್ಧಪಡಿಸಿರುವ ಮಧ್ಯಮ ಶ್ರೇಣಿಯ ಏರ್ ಮಿಸೈಲ್, ಅರ್ಜುನ ಟ್ಯಾಂಕ್ಗಳ ರಕ್ಷಣೆಗೆಂದು ನಿರ್ಮಾಣಗೊಂಡಿರುವ ಆರ್ಮಡ್ ರಿಕವರಿ ವೆಹಿಕಲ್ (ಶಸ್ತ್ರಸಜ್ಜಿತ ರಕ್ಷಣಾ ವಾಹನ) ಕೂಡಾ ಮೊದಲ ಬಾರಿಗೆ ಪ್ರದರ್ಶನಗೊಳ್ಳುತ್ತಿದೆ.
ದೆಹಲಿಯಲ್ಲಿ ಬಿಗಿ ಬಂದೋಬಸ್ತ್
ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ 25ಸಾವಿರ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, 36 ಮಹಿಳಾ ಕಮಾಂಡರ್ಗಳು, ಮೊಬೈಲ್ ಹಿಟ್ ಟೀಂ, ಆ್ಯಂಟಿ ಏರ್ಕ್ರಾಫ್ಟ್ ಗನ್ಸ್ ಹಾಗೂ ಶಾರ್ಪ್ ಶೂಟರ್ಗಳನ್ನು ವ್ಯವಸ್ಥಿತ ತಾಣಗಳಲ್ಲಿ, ರಾಜಪಥದಿಂದ ಕೆಂಪು ಕೋಟೆವರೆಗಿನ 8 ಕಿ.ಮೀ.ವರೆಗೆ ನಿಯೋಜಿಸಲಾಗಿದೆ. ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾ, ಮುಖ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಡ್ರೋಣ್ ತಂತ್ರಜ್ಞಾನವನ್ನೂ ಸುರಕ್ಷತಾ ದೃಷ್ಟಿಯಿಂದ ಬಳಸಿಕೊಳ್ಳಲಾಗುತ್ತಿದೆ. ಗಣರಾಜ್ಯೋತ್ಸವದ ದಿನ ನವದೆಹಲಿಯಲ್ಲಿ ಭಯೋತ್ಪಾದನಾ ದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂಬ ಆರೋಪದ ಮೇಲೆ ಜೈಶ್-ಇ-ಮಹಮ್ಮದ್ ಸಂಘಟನೆಯ ಇಬ್ಬರು ಶಂಕಿತರನ್ನು ಬಂಧಿಸಿರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
Crowds gather for the #RepublicDay2019 parade at Rajpath in Delhi. President of South Africa Cyril Ramaphosa is the chief guest at the parade today. pic.twitter.com/dZCOKSXTiY
— ANI (@ANI) January 26, 2019