RRB ALP Result 2018: ಪರಿಷ್ಕೃತ ಫಲಿತಾಂಶ ಪ್ರಕಟ

ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ ಸಿ ALP, ತಂತ್ರಜ್ಞರ ಹುದ್ದೆಗಳಲ್ಲಿ ನೇಮಕಾತಿ ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಿದೆ.

Last Updated : Dec 21, 2018, 06:10 PM IST
RRB ALP Result 2018: ಪರಿಷ್ಕೃತ ಫಲಿತಾಂಶ ಪ್ರಕಟ title=

ನವದೆಹಲಿ: ರೈಲ್ವೆ ನೇಮಕಾತಿ ಮಂಡಳಿ (RRB) ಗ್ರೂಪ್ ಸಿ ALP, ತಂತ್ರಜ್ಞರ ಹುದ್ದೆಗಳಲ್ಲಿ ನೇಮಕಾತಿ ಪರೀಕ್ಷೆಯ ಪರಿಷ್ಕೃತ ಫಲಿತಾಂಶವನ್ನು ಪ್ರಕಟಿಸಿದೆ. ರೈಲ್ವೆ ನೇಮಕಾತಿ ಮಂಡಳಿ ನವೆಂಬರ್ 2 ರಂದು ಗ್ರೂಪ್ ಸಿ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಿತ್ತು. ಆದರೆ ಅಭ್ಯರ್ಥಿಗಳು ಕೆಲವು ಪ್ರಶ್ನೆಗಳ ಉತ್ತರಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು. ಅದರ ನಂತರ ರೈಲ್ವೇ ಈ ವಿಷಯವನ್ನು ಪರೀಕ್ಷಿಸಿ, ಫಲಿತಾಂಶವನ್ನು ಮತ್ತೊಮ್ಮೆ ಬಿಡುಗಡೆ ಮಾಡಲು ನಿರ್ಧರಿಸಿತು. ಇದೀಗ ಅಭ್ಯರ್ಥಿಗಳು ನಿರೀಕ್ಷಿಸುತ್ತಿದ್ದ ಫಲಿತಾಂಶ ಮಂಡಳಿಯ ಎಲ್ಲ ವೆಬ್ಸೈಟ್ಗಳಲ್ಲಿ ಲಭ್ಯವಿದೆ. 

ಉತ್ತೀರ್ಣರಾಗಿರುವ ಅಭ್ಯರ್ಥಿಗಳ ರೋಲ್ ನಂಬರ್ ಇರುವ ಒಂದು ಪಟ್ಟಿಯನ್ನು ನೀಡಲಾಗುತ್ತದೆ. ಈ ಪಿಡಿಎಫ್ ನಲ್ಲಿ ರೋಲ್ ನಂಬರ್ ಜೊತೆಗೆ ಈ ಪ್ರಕ್ರಿಯೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಾಗಿದೆ. ನೀವು ಈ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದರೆ, ನಿಮ್ಮ ಪ್ರದೇಶದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ನಿಮ್ಮ ಫಲಿತಾಂಶಗಳನ್ನು ನೋಡಬಹುದು.

ನಿಮ್ಮ ಫಲಿತಾಂಶವನ್ನು ಹೀಗೆ ನೋಡಿ:
- ಫಲಿತಾಂಶವನ್ನು ವೀಕ್ಷಿಸಲು ಅಧಿಕೃತ ವೆಬ್ಸೈಟ್ಗೆ ಮೊದಲು ಹೋಗಿ. (ಕೆಳಗೆ ಅಧಿಕೃತ ವೆಬ್ಸೈಟ್ನ ಒಂದು ಪಟ್ಟಿ ಇದೆ)
- ನಂತರ ವೆಬ್ಸೈಟ್ನಲ್ಲಿ "ಆರ್ಆರ್ಬಿ ಗ್ರೂಪ್ ಸಿ ಎಎಲ್ಪಿ, ತಂತ್ರಜ್ಞ ಪರಿಷ್ಕೃತ ಫಲಿತಾಂಶ 2018" ಎಂಬ ಲಿಂಕ್ ಅನ್ನು ಕ್ಲಿಕ್ ಮಾಡಿ.
ಈ ಲಿಂಕ್ ಮೇಲೆ ಕ್ಲಿಕ್ ಮಾಡಿದ ನಂತರ, ಒಂದು ಪಿಡಿಎಫ್ ಫೈಲ್ ತೆರೆಯುತ್ತದೆ, ಅಲ್ಲಿ ಅಭ್ಯರ್ಥಿಗಳ ಪಟ್ಟಿ ಲಭ್ಯವಿರುತ್ತದೆ.

ಇವು ನಿಮ್ಮ ಪ್ರದೇಶದ ಅಧಿಕೃತ ವೆಬ್ಸೈಟ್:
RRB ಮುಂಬೈ (www.rrbmumbai.gov.in)
RRB ಮುಜಾಫರ್ಪುರ್ (www.rrbmuzaffarpur.gov.in)
RRB ಪಾಟ್ನಾ (www.rrbpatna.gov.in)
RRB ಜಮ್ಮು (www.rrbjammu.nic.in)
RRB ಕೊಲ್ಕತ್ತಾ (www.rrbkolkata.gov.in)
RRB ಮಾಳದ (www.rrbmalda.gov.in)
RRB ರಾಂಚಿ (rrbranchi.gov.in)
RRB ಗುವಾಹಟಿ (www.rrbguwahati.gov.in)
RRB ಸಿಕಂದರಾಬಾದ್ (rrbsecunderabad.nic.in)
RRB ಅಹಮದಾಬಾದ್ (www.rrbahmedabad.gov.in)
RRB ಅಜ್ಮೀರ್ (rrbajmer.gov.in)
RRB ಇಲಹಾಬಾದ್ (rrbald.gov.in)
RRB ಬಿಲಾಲ್ಪುರ್ (www.rrbbilaspur.gov.in)
RRB ಚಂಡೀಗಢ (www.rrbcdg.gov.in)
RRB ಬೆಂಗಳೂರು (rrbbnc.gov.in)
RRB ಭೋಪಾಲ್ (www.rrbbpl.nic.in)
RRB ಚೆನ್ನೈ (www.rrbchennai.gov.in)
RRB ಭುವನೇಶ್ವರ್ (www.rrbbbs.gov.in)
RRB ಗೋರಖ್ಪುರ (www.rrbguwahati.gov.in)
RRB ತಿರುವನಂತಪುರಂ (rrbthiruvananthapuram.gov.in)
RRB ಸಿಲಿಗುರಿ (www.rrbsiliguri.org)
 

Trending News