ನವದೆಹಲಿ: ಶನಿವಾರ ಮಧುರೈನ ಒಂಬತ್ತು ವರ್ಷ ವಯಸ್ಸಿನ ಬಾಲಕಿ ಜನನಿ ಶಬರಿಮಲೈ ದೇವಸ್ತಾನದಲ್ಲಿ ವಿಶಿಷ್ಟವಾಗಿ ಕಾಣುವ ಮೂಲಕ ಸಾರ್ವಜನಿಕರ ಗಮನ ಸೆಳೆದರು.
ಶುಕ್ರವಾರದಂದು ತಮ್ಮ ತಂದೆಯೊಂದಿಗೆ ದೇವಸ್ತಾನಕ್ಕೆ ಬಂದಿದ್ದ ಈ ಬಾಲಕಿ " ನನ್ನ ಹೆಸರು ಜನನಿ ನನಗೆ 9 ವರ್ಷ ನನಗೆ 50 ವರ್ಷ ತುಂಬಿದ ನಂತರ ಮತ್ತೆ ನಾನು ಶಬರಿಮಲೆ ದೇವಸ್ತಾನಕ್ಕೆ ನಾನು ಭೇಟಿ ನೀಡುತ್ತೇನೆ ಅಲ್ಲಿಯವರೆಗೆ ನಾನು ಕಾಯುತ್ತೇನೆ" ಎಂದು ಬರೆದುಕೊಂಡಿರುವ ಪ್ಲೇ ಕಾರ್ಡ್ ಮೂಲಕ ಗಮನ ಸೆಳೆದರು.
Kerala:Janani,9-yr-old girl from Madurai,at #SabarimalaTemple with placard reading 'she'll come to temple again after 50 yrs of age.Her father says,"We don't know what SC ordered.Once my daughter completes 10 yrs of age,she'll wait till 50 yrs of age&then she can come to Ayyappa" pic.twitter.com/EziWdfFVta
— ANI (@ANI) October 20, 2018
ಈ ಕುರಿತಾಗಿ ಪ್ರತಿಕ್ರಿಯಿಸಿದ ಜನನಿ ತಂದೆ ಆರ್.ಸತೀಶ್ ಕುಮಾರ್ " ಸುಪ್ರಿಂಕೋರ್ಟ್ ತೀರ್ಪು ಏನು ನೀಡಿದೆ ಎನ್ನುವುದರ ಬಗ್ಗೆ ನಮಗೆ ತಿಳಿದಿಲ್ಲ,ನನ್ನ ಮಗಳು ಹತ್ತು ವರ್ಷ ವಯಸ್ಸು ಪೂರೈಸಿದ ನಂತರ ಐವತ್ತು ವರ್ಷ ತುಂಬುವವರೆಗೆ ಕಾಯುತ್ತಾಳೆ" ಆಗ ಅವಳು ಅಯ್ಯಪ್ಪ ಸ್ವಾಮಿ ದೇವಸ್ತಾನಕ್ಕೆ ಬರಬಹುದು ಎಂದು ತಿಳಿಸಿದರು. ಆ ವಯಸ್ಸಿನೊಳಗೆ ಬಂದರೆ ತಮಗೆ ಹಿಡಿಸುವುದಿಲ್ಲ ಎಂದರು.
ಶುಕ್ರವಾರದಂದು ಇಬ್ಬರು ಮಹಿಳೆಯರು ದೇವಸ್ತಾನ ಪ್ರವೇಶಿಸುವುದನ್ನು ಖಂಡಿಸಿ ಭಕ್ತರು ಖಂಡಿಸಿ ಪ್ರತಿಭಟನೆ ನಡೆಸಿದರು.