ನಿಮ್ಮ ಮಕ್ಕಳನ್ನು ಸೈನಿಕ ಶಾಲೆಗೆ ಸೇರಿಸಲು ಇಚ್ಚಿಸಿದ್ದಿರಾ ? ಹಾಗಿದ್ದಲ್ಲಿ ಇತ್ತ ಗಮನಿಸಿ

ಕೊಡಗು ಸೈನಿಕ ಶಾಲೆಯಲ್ಲಿ 2021 ನೇ ಸಾಲಿಗೆ  6 ಮತ್ತು 9 ನೇ ತರಗತಿಗಳ ದಾಖಲಾತಿ ಸಂಬಂಧ ಆಲ್ ಇಂಡಿಯಾ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ.

Last Updated : Nov 26, 2020, 10:15 PM IST
ನಿಮ್ಮ ಮಕ್ಕಳನ್ನು ಸೈನಿಕ ಶಾಲೆಗೆ ಸೇರಿಸಲು ಇಚ್ಚಿಸಿದ್ದಿರಾ ? ಹಾಗಿದ್ದಲ್ಲಿ ಇತ್ತ ಗಮನಿಸಿ  title=
ಸಾಂದರ್ಭಿಕ ಚಿತ್ರ

ಬೆಂಗಳೂರು: ಕೊಡಗು ಸೈನಿಕ ಶಾಲೆಯಲ್ಲಿ 2021 ನೇ ಸಾಲಿಗೆ  6 ಮತ್ತು 9 ನೇ ತರಗತಿಗಳ ದಾಖಲಾತಿ ಸಂಬಂಧ ಆಲ್ ಇಂಡಿಯಾ ಸೈನಿಕ ಶಾಲೆಗಳ ಪ್ರವೇಶ ಪರೀಕ್ಷೆಯನ್ನು ಕೈಗೊಳ್ಳಲಾಗಿದೆ.

ಪರೀಕ್ಷೆಯು 2021 ನೇ ಜನವರಿ 10 ರಂದು ನಡೆಯಲಿದ್ದು, 6 ನೇ ತರಗತಿ ಪ್ರವೇಶಕ್ಕೆ 2021 ನೇ ಮಾರ್ಚ್31 ಕ್ಕೆ 12 ವರ್ಷಗಳ ನಡುವೆ ಇರಬೇಕು, 9 ನೇ ತರಗತಿ ಪ್ರವೇಶಕ್ಕೆ 2021 ನೇ ಮಾರ್ಚ್31 ಕ್ಕೆ 13 ಮತ್ತು 15 ವರ್ಷಗಳ ನಡುವೆ ಇರಬೇಕು ಹಾಗೂ ಮಾನ್ಯತೆ ಹೊಂದಿದ ಶಾಲೆಯಿಂದ 8ನೇ ತರಗತಿ ತೇರ್ಗಡೆ ಹೊಂದಿರಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 400 ರೂಪಾಯಿ ಹಾಗೂ ಇತರ ಸಮುದಾಯದ ಅಭ್ಯರ್ಥಿಗಳಿಗೆ 550 ರೂಪಾಯಿ ಪರೀಕ್ಷಾ ಶುಲ್ಕವಾಗಿರುತ್ತದೆ.

ಪರೀಕ್ಷೆಗೆ ಸಂಬಂಧಿಸಿದ ಯೋಜನೆ, ಕಾಲವಧಿ, ಮಾಧ್ಯಮ, ಪರೀಕ್ಷೆಯ ಪಠ್ಯಕ್ರಮ, ಸೈನಿಕ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು, ಪರೀಕ್ಷಾ ನಗರಗಳು, ಕೇಂದ್ರಗಳು, ತೇರ್ಗಡೆ ಅವಶ್ಯಕತೆಗಳು, ಮುಖ್ಯ ದಿನಾಂಕಗಳು, ಇತ್ಯಾದಿಗಳು ವೆಬ್‍ಸೈಟ್ ವಿಳಾಸ  www.nta.ac.in ನಲ್ಲಿರುವ ಮಾಹಿತಿ ಕೈಪಿಡಿಯಲ್ಲಿ ಲಭ್ಯವಿರುತ್ತದೆ ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Trending News