ಜಮ್ಮು-ಕಾಶ್ಮೀರ್: ಶೋಪಿಯನ್ನಲ್ಲಿ ಎನ್ಕೌಂಟರ್, 6 ಭಯೋತ್ಪಾದಕರ ಸಾವು

ಈ ಎನ್ಕೌಂಟರ್ ಬಟಾಗುಂಡ್ ನಲ್ಲಿ ಸಂಭವಿಸಿದ್ದು, ಭದ್ರತಾ ಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 6 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ.

Updated: Nov 25, 2018 , 11:19 AM IST
ಜಮ್ಮು-ಕಾಶ್ಮೀರ್: ಶೋಪಿಯನ್ನಲ್ಲಿ ಎನ್ಕೌಂಟರ್, 6 ಭಯೋತ್ಪಾದಕರ ಸಾವು
PIC: ANI

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯನ್ ಪ್ರದೇಶದಲ್ಲಿ ಇಂದು ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 6 ಭಯೋತ್ಪಾದಕರು ಸಾವನ್ನಪ್ಪಿದ್ದಾರೆ. ಈ ಸಮಯದಲ್ಲಿ ಓರ್ವ ಜವಾನ್ ಹುತಾತ್ಮರಾಗಿದ್ದಾರೆ.

ಈ ಎನ್ಕೌಂಟರ್ ಬಟಾಗುಂಡ್ ನಲ್ಲಿ ಸಂಭವಿಸಿದ್ದು, 4 ಭಯೋತ್ಪಾದಕರ ದೇಹಗಳನ್ನು ವಶಕ್ಕೆ ಪಡೆಯಲಾಗಿದೆ. ಇಬ್ಬರು ಭಯೋತ್ಪಾದಕರ ದೇಹಗಳ ಹುಡುಕಾಟವು ಮುಂದುವರಿದಿದೆ. 

PIC: ANI

ಭದ್ರತಾ ಪಡೆಗಳು ಮತ್ತು ಪೊಲೀಸರು ಜಂಟಿಯಾಗಿ ಕಾರ್ಯಾಚರಣೆಯನ್ನು ನಡೆಸುತ್ತಿದ್ದಾರೆ. ಈ ಪ್ರದೇಶದಲ್ಲಿ ಮೂವರು ಭಯೋತ್ಪಾದಕರು ಅಡಗಿ ಕೂತಿರುವ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಯಿತು ಎಂದು ಭದ್ರತಾ ಪಡೆಗಳು ತಿಳಿಸಿವೆ. ಇದರ ನಂತರ ಹುಡುಕಾಟ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು. ಈ ಸಮಯದಲ್ಲಿ ಎನ್ಕೌಂಟರ್ ಪ್ರಾರಂಭವಾಗಿದೆ ಎಂದು ಅವರು ಮಾಹಿತಿ ನೀಡಿದರು.