ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕನನ್ನು ಹೊಡೆದುರುಳಿಸಿದ ರಕ್ಷಣಾ ಪಡೆ, ಒಬ್ಬ ಯೋಧ ಹುತಾತ್ಮ

ರಾಜೌರಿಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ಗುರುವಾರ ಮಧ್ಯಾಹ್ನ ಆರಂಭವಾಗಿದೆ. ಈ ಪ್ರದೇಶದಲ್ಲಿ ಇನ್ನೂ 3-4 ಭಯೋತ್ಪಾದಕರು ಅಡಗಿರುವ ಸಾಧ್ಯತೆ ಇದೆ.

Written by - Ranjitha R K | Last Updated : Aug 19, 2021, 03:12 PM IST
  • ಶ್ರೀನಗರದಲ್ಲಿ ಓರ್ವ ಭಯೋತ್ಪಾದಕ ಹತ
  • ಗುಂಡಿನ ಕಾಳಗದಲ್ಲಿ ಒಬ್ಬ ಯೋಧ ಕೂಡಾ ಹುತಾತ್ಮ
  • ಮಂಡಿ ಪ್ರಾಂತ್ಯದಲ್ಲಿ ಅಡಗಿರುವ ಭಯೋತ್ಪಾದಕರು
ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕನನ್ನು ಹೊಡೆದುರುಳಿಸಿದ  ರಕ್ಷಣಾ ಪಡೆ, ಒಬ್ಬ ಯೋಧ  ಹುತಾತ್ಮ   title=
ಶ್ರೀನಗರದಲ್ಲಿ ಓರ್ವ ಭಯೋತ್ಪಾದಕ ಹತ (Photo zee news)

ಶ್ರೀನಗರ : ಜಮ್ಮು ಕಾಶ್ಮೀರದ ರಾಜೌರಿಯಲ್ಲಿ ಸುರಕ್ಷಾ ದಳ ಮತ್ತು ಭಯೋತ್ಪಾದಕರ (Terrorist) ಮಧ್ಯೆ ನಡೆದ ಕಾಳಗದಲ್ಲಿ ಓರ್ವ ಭಯೋತ್ಪಾದಕ ಹತನಾಗಿದ್ದಾನೆ. ರಾಜೌರಿಯ ತನ್ನಾ ಮಂಡಿ ಪ್ರಾಂತ್ಯದಲ್ಲಿ ನಡೆದ ಮುಖಾಮುಖಿಯಲ್ಲಿ ಭದ್ರತಾ ಪಡೆ, ಭಯೋತ್ಪಾದಕನನ್ನು ಹೊಡೆದುರುಳಿಸಿದೆ. ಇದೇ ವೇಳೆ ನಡೆದ ಗುಂಡಿನ ದಾಳಿಯಲ್ಲಿ  ಒಬ್ಬ ಯೋಧ ಹುತಾತ್ಮರಾಗಿದ್ದಾರೆ. CRPF ಮತ್ತು ಜಮ್ಮು ಕಾಶ್ಮೀರ ಪೋಲಿಸ್ ಜಂಟಿಯಾಗಿ ಈ ಕಾರ್ಯಾಚರಣೆ ನಡೆಸಿದ್ದು,  ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ (Search operation) ಮುಂದುವರಿದಿದೆ.

ಈ ಪ್ರದೇಶದಲ್ಲಿ ಅಡಗಿರುವ ಭಯೋತ್ಪಾದಕರು :
ರಾಜೌರಿಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ (Terror attack) ನಡುವಿನ ಗುಂಡಿನ ಚಕಮಕಿ ಗುರುವಾರ ಮಧ್ಯಾಹ್ನ ಆರಂಭವಾಗಿದೆ. ಈ ಪ್ರದೇಶದಲ್ಲಿ ಇನ್ನೂ 3-4 ಭಯೋತ್ಪಾದಕರು (Terrorist) ಅಡಗಿರುವ ಸಾಧ್ಯತೆ ಇದೆ. ಭಯೋತ್ಪಾದಕರು ಅಡಗಿರುವ ಬಗ್ಗೆ ಮಾಹಿತಿ ಪಡೆದ ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದವು. ಭದ್ರತಾ ಪಡೆ ಶೋಧ ಕಾರ್ಯ ಆರಂಭಿಸುತ್ತಿದ್ದಂತೆಯೇ, ಭಯೋತ್ಪಾದಕರು ಗುಂಡು ಹಾರಿಸಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಸೇನೆಯ ಜೆಸಿಒ (JCO) ಹುತಾತ್ಮರಾಗಿದ್ದರೆ. ಭದ್ರತಾ ಪಡೆಗಳು ಕೂಡ ಒಬ್ಬ ಭಯೋತ್ಪಾ ದಕನನ್ನು ಹತ್ಯೆಗೈದವು.

ಇದನ್ನೂ ಓದಿ : Watch CCTV Footage: ಚಲಿಸುತ್ತಿದ್ದ ರೈಲಿನಡಿ ಬೀಳುತ್ತಿದ್ದ ಮಹಿಳೆಯನ್ನು ರಕ್ಷಿಸಿದ ವ್ಯಕ್ತಿ..!

ಆಗಸ್ಟ್ 6 ರಂದು ಅದೇ ಪ್ರದೇಶದಲ್ಲಿ 2 ಭಯೋತ್ಪಾದಕರ ಹತ್ಯೆ : 
ರಾಜೌರಿ ಜಿಲ್ಲೆಯ ತನ್ನ ಮಂಡಿ ಪ್ರದೇಶದಲ್ಲಿ ಇದೇ ತಿಂಗಳಲ್ಲಿ ನಡೆದ ಎರಡನೇ  ಎನ್ಕೌಂಟರ್  (Encounter) ಇದಾಗಿದೆ. 6 ನೇ ತಾರೀಕಿನಂದು ನಡೆದ ಎನ್ಕೌಂಟರ್ ನಲ್ಲಿ  ಲಷ್ಕರ್-ಎ-ತೊಯ್ಬಾ (lashkar e taiba) ಭಯೋತ್ಪಾದಕರು ಹತರಾಗಿದ್ದರು.

ಇದನ್ನೂ ಓದಿ : ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದು ಪತ್ನಿ ಮೇಲೆ ಕುದಿಯುವ ನೀರೆರೆಚಿದ ನಿರ್ದಯ ಪತಿ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News